Monday, December 23, 2024

Latest Posts

ಟೈಟಾನ್ಸ್ ಎದುರು ಆರ್‍ಸಿಬಿಗೆ ಅಗ್ನಿ ಪರೀಕ್ಷೆ

- Advertisement -

ಮುಂಬೈ : ಮಾಡು ಇಲ್ಲವೆ  ಮಡಿ ಹೋರಾಟದಲ್ಲಿ  ಆರ್‍ಸಿಬಿ ತಂಡ  ಇಂದು  ಬಲಿಷ್ಠ ಗುಜರಾತ್ ಟೈಟಾನ್ಸ್  ತಂಡವನ್ನು  ಎದುರಿಸುತ್ತಿದೆ.

ಇಲ್ಲಿನ ವಾಂಖೆಡೆ  ಮೈದಾನದಲ್ಲಿ  ನಡೆಯಲಿರುವ ಪಂದ್ಯ  ಆರ್‍ಸಿಬಿ ತಂಡ ನಾಲ್ಕನೆ ಸ್ಥಾನಕ್ಕಾಗಿ ಕೊನೆಯ ಹೋರಾಟ ನಡೆಸಲಿದ್ದು  ಇಂದಿನ ಕುತೂಹಲಕಾರಿಯಾಗಿದೆ.  ಇತ್ತ ಗುಜರಾತ್ ಟೈಟಾನ್ಸ್  13 ಪಂದ್ಯಗಳಿಂದ  20 ಅಂಕ ಪಡೆದು  ಈಗಾಗಲೇ ಪ್ಲೇಆï ಪ್ರವೇಶಿಸಿದ್ದು  ಇಂದಿನ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರೆಸಲು ನಿರ್ಧರಿಸಿದೆ.

ಆರ್‍ಸಿಬಿ ತಂಡ 13 ಪಂದ್ಯಗಳಲ್ಲಿ 7 ಗೆಲುವು 6 ಸೋಲು ಕಂಡು 14 ಅಂಕಗಳನ್ನು ಸಂಪಾದಿಸಿ  5ನೇ ಸ್ಥಾನದಲ್ಲಿದೆ. ಆರ್‍ಸಿಬಿ ತಂಡಕ್ಕೆ ಸವಾಲಾಗಿರುವುದು ನೆಟ್ ರನ್ ರೇಟ್ -0.323 ಅಂಕ ಪಡೆದಿದೆ. ಒಂದು ವೇಳೆ ಗುಜರಾತ್ ವಿರುದ್ಧ ಗೆದ್ದರೆ 16 ಅಂಕ ಆಗಲಿದ್ದು ಬೇರೆ ತಂಡಗಳ ಫಲಿತಾಂಶ ಕೂಡ ಮುಖ್ಯವಾಗುತ್ತದೆ.

ಡೆಲ್ಲಿ ತಂಡ ತನ್ನ ಕೊನೆಯ ಪಂದ್ಯದಲ್ಲಿ  ಮುಂಬೈ ತಂಡವನ್ನು  ಸೋಲಿಸಿ 16 ಅಂಕಗಳನ್ನು  ಪಡೆದು +0.255 ನೆಟ್ ರನ್ ರೇಟ್ ಆಗಲಿದೆ.  ಕಳೆದ ಪಂದ್ಯದಲ್ಲಿ ಆರ್‍ಸಿಬಿ ಪಂಜಾಬ್ ವಿರುದ್ಧ 54 ರನ್‍ಗಳಿಂದ ಸೋತಿದ್ದು  ದೊಡ್ಡ ಪೆಟ್ಟು ಬಿದ್ದಿದೆ.

ವಿರಾಟ್ ಕೊಹ್ಲಿ  ಕಳಪೆ  ಪ್ರದರ್ಶನ ಮುಂದುವರೆಸಿದ್ದಾರೆ.  ಕಳೆದ ಪಂದ್ಯದಲ್ಲಿ ಕೇವಲ 20 ರನ್ ಗಳಿಸಿದರು. ತಂಡದ ಹಣೆಬರಹ ಬದಲಾಗಬೇಕಿದ್ದಲ್ಲಿ  ಮಾಜಿ ನಾಯಕ ಸೋಟಕ ಬ್ಯಾಟಿಂಗ್ ಮಾಡಬೇಕಿದೆ. ಇಂದಿನ ಕದನದಲ್ಲಿ  ನಾಯಕ ಫಾಫ್ ಡುಪ್ಲೆಸಿಸ್, ಮಹಿಪಾಲ್ ಲೊಮೊರೊರ್ ಮತ್ತು ದಿನೇಶ್ ಕಾರ್ತಿಕ್ ಅವರುಗಳಿಂದ ದೊಡ್ಡ ಇನ್ನಿಂಗ್ಸ್  ನಿರೀಕ್ಷಿಸಲಾಗಿದೆ.

ಗ್ಲೆನ್ ಮ್ಯಾಕ್ಸ್‍ವೆಲ್ ಹಾಗೂ  ರಜತ್ ಪಟಿಧಾರ್  ಒಳ್ಳೆಯ ಆರಂಭ ಕೊಡುತ್ತಿದ್ದಾರೆ ಆದರೆ ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ಎಡವಿದ್ದಾರೆ.  ಬೌಲಿಂಗ್ ವಿಭಾಗದಲ್ಲಿ  ಹರ್ಷಲ್ ಪಟೇಲ್ ಹಾಗೂ ವನಿಂದು ಹಸರಂಗ  ತಂಡದ ಪರ ಚೆನ್ನಾಗಿ ಆಡುತ್ತಿದ್ದಾರೆ.  ಮೊನ್ನೆ ತಂಡದ ಇತರೆ ಬೌಲಿರ್‍ಗಳು ದುಬಾರಿಯಾದರು. ಆದರೆ ಈ ಇಬ್ಬರು ಬೌಲರ್‍ಗಳು ಪಂಜಾಬ್ ಬ್ಯಾಟರ್‍ಗಳನ್ನು  ನಿಯಂತ್ರಿಸಿದರು.

ವೇಗಿಗಳಾದ ಮೊಹ್ಮದ್ ಸಿರಾಜ್ ಹಾಗೂ ಜೋಶ್ ಹೆಜ್ಲ್‍ವುಡ್  ದುಬಾರಿ ಬೌಲರ್‍ಗಳಾಗುತ್ತಿರುವುದು ತಂಡಕ್ಕೆ  ತಲೆ ನೋವಾಗಿದೆ. ಟೈಟಾನ್ಸ್ ಎದುರು ನಾಯಕ ಫಾಫ್ ಡುಪ್ಲೆಸಿಸ್ ತಂಡದಿಂದ ಸಂಪೂರ್ಣ ಪ್ರದರ್ಶನ ನಿರೀಕ್ಷಿಸುತ್ತಿದ್ದಾರೆ.

ಟೈಟಾನ್ಸ್‍ಗೆ  ಸಾಂಘಿಕ ಹೋರಾಟವೆ ದೊಡ್ಡ ಶಕ್ತಿ

ಇನ್ನು ಗುಜರಾತ್ ಟೈಟಾನ್ಸ್  ತಂಡ  ಈ ಹಿಂದಿ ಕದನದಲ್ಲಿ  ಆರ್‍ಸಿಬಿ ತಂಡವನ್ನು ಸೋಲಿಸಿತ್ತುಘಿ.  ಒಂದು ವೇಳೆ ಇಂದಿನ ಪಂದ್ಯದಲ್ಲಿ  ಆರ್‍ಸಿಬಿ ಎದುರು ಸೋತರೂ ಅಂಕಪಟ್ಟಿಯಲ್ಲಿ  ಅಗ್ರಸ್ಥಾನದಲ್ಲಿಯೇ ಉಳಿಯಲಿದೆ.

ತಂಡದ ಸಾಂಘಿಕ ಪ್ರದರ್ಶನ  ಟೈಟಾನ್ಸ್  ತಂಡದ ಯಶಸ್ಸಾಗಿದೆ.  ವೃದ್ದಿಮಾನ್ ಸಾಹಾ,  ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ನಾಯಕ ಹಾರ್ದಿಕ್ ಪಾಂಡ್ಯ ಮತ್ತು ರಾಹುಲ್ ತೆವಾಟಿಯ ಅವರ ಪ್ರದರ್ಶನ  ಇತರೆ ಆಟಗಾರರಿಗೂ ಸ್ಪೂರ್ತಿಯಾಗಿದೆ.

ಬೌಲಿಂಗ್ ವಿಭಾಗದಲ್ಲಿ  ವೇಗಿ ಮೊಹ್ಮದ್ ಶಮಿ  ಯಶ್ ದಯಾಳ್, ಲಾಕಿ ಫಗ್ರ್ಯೂಸನ್ ಮತ್ತು ಅಲಜಾರಿ ಜೋಸೆಫೆ  ಅದ್ಬುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.  ಮಿಸ್ಟ್ರಿ ಸ್ಪಿನ್ನರ್ ರಶೀದ್ ಖಾನ್‍ಗೆ  ಮತ್ತೊರ್ವ ಸ್ಪಿನ್ನರ್ ಸಾಯಿ ಕಿಶೋರ್ ಅವರಿಂದ ಬೆಂಬಲ ಬೇಕಿದೆ.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್ 

ಆರ್‍ಸಿಬಿ ತಂಡ:  ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ (ನಾಯಕ), ರಜತ್ ಪಟಿಧಾರ್, ಮಹಿಪಾಲ್ ಲೊಮೊರೊರ್, ಗ್ಲೆನ್ ಮ್ಯಾಕ್ಸ್‍ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಾಬಾಜ್ ಅಹ್ಮದ್, ಹರ್ಷಲ್ ಪಟೇಲ್, ವನಿಂದು ಹಸರಂಗ, ಮೊಹ್ಮದ್ ಸಿರಾಜ್, ಜೋಶ್ ಹೆಜ್ಲ್‍ವುಡ್. 

ಗುಜರಾತ್ ಟೈಟಾನ್ಸ್:  ವೃದ್ದಿಮಾನ್ ಸಾಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಮ್ಯಾಥೀವ್ ವೇಡ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಅಲಜಾರಿ ಜೋಸೆಫ್, ಯಶ್ ದಯಾಳ್, ಮೊಹ್ಮದ್ ಶಮಿ. 

https://www.youtube.com/c/KarnatakaTV123/playlists

 

 

 

- Advertisement -

Latest Posts

Don't Miss