Thursday, April 17, 2025

Latest Posts

ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ಈ ಸ್ಟೋರಿ ಓದಿ: 300 ರೂ. ಲಿಪ್‌ಸ್ಟಿಕ್‌ಗೆ 1 ಲಕ್ಷ ಕಳೆದುಕೊಂಡ ವೈದ್ಯೆ

- Advertisement -

National News: ಆನ್‌ಲೈನ್ ಶಾಪಿಂಗ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಅದರಲ್ಲೂ ಹೆಣ್ಣು ಮಕ್ಕಳು, ಕೂತಲ್ಲೇ ಹಲವು ವೆರೈಟಿ ಡ್ರೆಸ್, ಮೇಕಪ್ ಕಿಟ್, ಶೂಸ್ ಸೇರಿ ತಮಗೆ ಬೇಕಾದ ಎಲ್ಲ ವಸ್ತುವನ್ನು, ಆರ್ಡರ್ ಹಾಕೋದ್ರಲ್ಲಿ ಮುಂದಿರ್ತಾರೆ. ಆದರೆ ಅದೇ ಆನ್‌ಲೈನ್ ಶಾಪಿಂಗ್ ಮಾಡುವಾಗ, ನೀವು ಮೋಸ ಹೋದ್ರೆ ಮಾತ್ರ, ಅದಕ್ಕಿಂತ ವಿಪರ್ಯಾಸ ಮತ್ತೊಂದಿಲ್ಲ.

ನವಿ ಮುಂಬೈ ನಿವಾಸಿಯಾಗಿರುವ ವೈದ್ಯೆಯೊಬ್ಬರು, ಆನ್ ಲೈನ್ ಶಾಪಿಂಗ್ ಮಾಡುವಾಗ, 300 ರೂಪಾಯಿ ಲಿಪ್‌ಸ್ಟಿಕ್ ಖರೀದಿಸಿದ್ದಾರೆ. ಆದರೆ 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಆಗಿದ್ದೇನೆಂದರೆ, ಇವರು ಲಿಪ್‌ಸ್ಟಿಕ್ ಆರ್ಡರ್ ಹಾಕಿದ್ದು, ಕೆಲ ದಿನಗಳಲ್ಲೇ ನಿಮ್ಮ ಲಿಪ್‌ಸ್ಟಿಕ್ ತಲುಪಿಸಲಾಗಿದೆ ಎಂದು ಕೋರಿಯರ್ ಕಂಪನಿಯಿಂದ ಸಂದೇಶ ಬಂದಿದೆ. ಆಗ ಆಕೆ ಕೋರಿಯರ್ ಕಂಪನಿಗೆ ಕಾಲ್ ಮಾಡಿ, ವಿಚಾರಿಸಿದಾಗ, ನಮ್ಮ ಕಸ್ಟಮರ್ ಕೇರ್ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸಿದ್ದಾರೆಂದು ಹೇಳಿದ್ದಾರೆ.

ಕೆಲ ಹೊತ್ತಿನ ಬಳಿಕ ವೈದ್ಯೆಗೆ ಕಾಲ್ ಬಂದಿದೆ. ನಿಮಗೆ ಲಿಪ್‌ಸ್ಟಿಕ್ ಬೇಕಿದ್ದಲ್ಲಿ, ನೀವು 2 ಸಾವಿರ ರೂಪಾಯಿ ಪಾವತಿಸಬೇಕು ಎಂದಿದ್ದಾರೆ. ಆದರೆ ವೈದ್ಯೆ ಇದಕ್ಕೆ ನಿರಾಕರಿಸಿದ್ದಾರೆ. ನಿಮಗೊಂದು ಲಿಂಕ್ ಬರುತ್ತದೆ. ಅದನ್ನು ಫಿಲ್‌ಅಪ್ ಮಾಡಿ ಕಳಿಸಿ, ಬಳಿಕ ನಿಮ್ಮ ಲಿಪ್‌ಸ್ಟಿಕ್ ನಿಮ್ಮ ಮನೆಗೆ ಬರುತ್ತದೆ ಎಂದಿದ್ದಾರೆ. ಆಕೆ ಆ ಲಿಂಕ್ ಓಪನ್ ಮಾಡಿ, ಎಲ್ಲವನ್ನೂ ಫಿಲ್‌ಅಪ್ ಮಾಡಿ ಕಳಿಸಿದ್ದಾರೆ. ಕೆಲ ಸಮಯದ ಬಳಿಕ ಕಾಲ್ ಮಾಡಿ ಕೇಳಿದಾಗ, ನಿಮ್ಮ ಲಿಪ್‌ಸ್ಟಿಕ್ ಇನ್ನು ಕೆಲ ದಿನಗಳಲ್ಲೇ ನಿಮ್ಮ ಮನೆಗೆ ಬರುತ್ತದೆ ಎಂದಿದ್ದಾರೆ.

ಆದರೆ ಲಿಪ್‌ಸ್ಟಿಕ್ ಬರುವ ಬದಲು, ಇವರ ಖಾತೆಯಿಂದ 1 ಲಕ್ಷ ರೂಪಾಯಿ ಡೆಬಿಟ್ ಆಗಿದೆ. ಇದರಿಂದ ಆತಂಕಗೊಂಡ ವೈದ್ಯೆ, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

‘ಪೆನ್‌’ಡ್ರೈವ್‌ ಇದೆ, ಕಳೆದಿಲ್ಲ. ಅದನ್ನು ತೋರಿಸಿದೊಡನೆ ನನ್ನಲ್ಲಿಗೆ ಓಡಿ ಬಂದವರ ಪಟ್ಟಿ ಕೊಡಲೇ?’

ಆಪ್ತರೊಂದಿಗೆ ದುಬೈಗೆ ಹಾರಿದ ಸಚಿವ ಸತೀಶ್​ ಜಾರಕಿಹೊಳಿ..!

ಕರ್ನಾಟಕ ಬಿಜೆಪಿಗೆ ದಕ್ಷಿಣ ಭಾರತದ ಭದ್ರಕೋಟೆಯಾಗಿ ಪರಿವರ್ತನೆಗೆ ಶ್ರಮ: ವಿಜಯೇಂದ್ರ ಯಡಿಯೂರಪ್ಪ

- Advertisement -

Latest Posts

Don't Miss