ನಾವು ಯಾರನ್ನಾದರೂ ನೋಡೇ ನೋಡಿರ್ತೀವಿ. ಒಬ್ಬರಿಗಾದರೂ ಒಂದು ಕೈನಲ್ಲಿ ಅಥವಾ ಕಾಲಲ್ಲಿ ಆರು ಬೆರಳಿರುತ್ತದೆ. ಅಂಥವರ ಮನೆಯಲ್ಲಿ ಅವರನ್ನ ಲಕ್ಕಿ ಪರ್ಸನ್ ಅಂತಾ ಕರೀತಾರೆ. ಉದಾಹರಣೆಗೆ ಹೃತಿಕ್ ರೋಷನ್‌ಗೆ ಒಂದು ಕೈಗೆ 6 ಬೆರಳುಂಟು. ಅವರು ಸೆಲೆಬ್ರಿಟಿ ಕೂಡ ಹೌದು. ಆದ್ರೆ ಇದು ಹೇಗೆ ಸಾಧ್ಯ..? ಯಾಕೆ ಸಾವಿರದಲ್ಲಿ ಒಬ್ಬರಿಗೆ ಹೀಗೆ 6 ಬೆರಳಿರುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಪಾಲಿಡೆಕ್ಟಲಿ ಎಂಬ ಜೆನೆಟಿಕ್ ಡಿಸ್ ಆರ್ಡರ್ ಅಂದ್ರೆ, ಅನುವಂಶಿಕ ಅಸ್ವಸ್ಥತೆ ಇದ್ರೆ ಹೀಗೆ ಒಂದು ಕೈಯಲ್ಲಿ ಅಥವಾ ಕಾಲಿನಲ್ಲಿ ಆರು ಬೆರಳುಗಳಿರತ್ತೆ. ಇದರ ಬಗ್ಗೆ ಜನ ಒಂದೊಂದು ರೀತಿ ಮಾತನಾಡುತ್ತಾರೆ. ಆರು ಬೆರಳಿದ್ರೆ ಅದೃಷ್ಟವಿದ್ದ ಹಾಗೆ, ಅಪ್ಪ ಅಮ್ಮನಿಗೆ ಒಳ್ಳೆಯಾಗತ್ತೆ, ಹಾಗಂತೆ ಹೀಗಂತೆ ಅಂತೆಲ್ಲಾ ಹೇಳ್ತಾರೆ. ಆದ್ರೆ ಅದು ಕಾಕತಾಳೀಯವಾಗಿರತ್ತೆ. ಅಥವಾ ಅವರವರ ಗುಣಕ್ಕೆ ತಕ್ಕಂತೆ ಇರತ್ತೆ. ಆದ್ರೆ ವೈಜ್ಞಾನಿಕವಾಗಿ ಹೇಳೋದಾದ್ರೆ ಇದು ಅನುವಂಶಿಕ ಅಸ್ವಸ್ಥತೆ.
ಇನ್ನು ಈ ಆರನೇ ಬೆರಳಲ್ಲಿ ಕೆಲವರಿಗೆ ಮೂಳೆಗಳಿರುವುದಿಲ್ಲ. ಇದ್ದರೂ ಅದು ಅಷ್ಟು ಗಟ್ಟಿಯಾಗಿರುವುದಿಲ್ಲ. ಇದಕ್ಕೆ ಕಾರಣ, ಎಲುಬು ಗಟ್ಟಿಗೊಳಿಸಲು ದೇಹದಲ್ಲಿ ಕೆಲ ಅಂಶಗಳಿರುತ್ತದೆ. ಆ ಅಂಶ ಸರಿಯಾಗಿ ಇರದಿದ್ದಲ್ಲಿ, ಆರನೇ ಬೆರಳಿನಲ್ಲಿ ಎಲುಬು ಇರುವುದಿಲ್ಲ. ಆ ಅಂಶ ಸರಿಯಾಗಿ ಇದ್ದಲ್ಲಿ ಆರನೇ ಬೆರಳಲ್ಲಿ ಮೂಳೆ ಗಟ್ಟಿಯಾಗಿರುತ್ತದೆ. ಆಫ್ರಿಕಾ ಮತ್ತು ಅಮೆರಿಕಾದಲ್ಲಿ ಹೆಚ್ಚಿನ ಜನರು ಆರು ಬೆರಳುಗಳನ್ನು ಉಳ್ಳವರಾಗಿರುತ್ತಾರೆ. ಅವರಿಗೆ ಹೋಲಿಸಿದರೆ, ಭಾರತದಲ್ಲಿ ಕಡಿಮೆ ಸಂಖ್ಯೆಯ ಜನರಿಗೆ ಆರು ಬೆರಳಿರುತ್ತದೆ.
ತ್ರಿಗುಣ ಸೂತ್ರದಿಂದ ದೇಹದ ಸೆಲ್ಸ್‌ನಲ್ಲಿ ಒಂದು ಹೆಚ್ಚಿನ ಕ್ರೊಮೋಸೋಮ್ ಬರುತ್ತದೆ. ಈ ಕಾರಣದಿಂದ ಎರಡು ಕಾಪಿ ಕ್ರೋಮೋಸೋಮ್ ಇರಬೇಕಾದ ಜಾಗದಲ್ಲಿ ಮೂರು ಕಾಪಿ ಕ್ರೋಮೋಸೋಮ್ ಉತ್ಪತ್ತಿಯಾಗುತ್ತದೆ.