- Advertisement -
Recipe: ಬೇಕಾಗುವ ಸಾಮಗ್ರಿ: 1 ಕಪ್ ರವಾ, ಕಾಾಲು ಕಪ್ ಕರ್ಡ್, 1 ತುರಿದ ಕ್ಯಾರೆಟ್, 1 ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಹಸಿಮೆಣಸು, ತುರಿದ ಶುಂಠಿ, ಜೀರಿಗೆ, ಕರಿಬೇವು, ಉದ್ದಿನಬೇಳೆ, ಕಡಲೆಬೇಳೆ, ಹಿಂಗು, ಎಣ್ಣೆ, ಉಪ್ಪು.
ಮಾಡುವ ವಿಧಾನ: ರವಾ, ಕರ್ಡ್, ಉಪ್ಪು ನೀರು ಹಾಕಿ ಮಿಕ್ಸ್ ಮಾಡಿ 15 ನಿಮಿಷ ಬದಿಗಿರಿಸಿ. ಬಳಿಕ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಜೀರಿಗೆ, ಹಿಂಗು, ಉದ್ದಿನಬೇಳೆ, ಕರಿಬೇವು, ಹಸಿಮೆಣಸು, ಕಡಲೆಬೇಳೆ, ಹಾಕಿ ಹುರಿಯಿರಿ. ನಂತರ ಈರುಳ್ಳಿ, ತುರಿದ ಶುಂಠಿ ಹಾಕಿ ಹುರಿಯಿರಿ. ಬಳಿಕ ಕ್ಯಾರೆಟ್ ಸೇರಿಸಿ. ಗ್ಯಾಸ್ ಆಫ್ ಮಾಡಿ, ಇದಕ್ಕೆ ಕೊತ್ತೊಂಬರಿ ಸೊಪ್ಪು ಸೇರಿಸಿ. ಈ ಮಿಶ್ರಣ ತಣಿದ ಬಳಿಕ, ರೆಡಿ ಮಾಡಿರುವ ಹಿಟ್ಟಿಗೆ ಇದನ್ನು ಸೇರಿಸಿ. ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ ಪಡ್ಡು ಮಾಡಿ. ಕಾಯಿ ಚಟ್ನಿ ಜತೆ ಉತ್ತಮ ಕಾಂಬಿನೇಷನ್.
- Advertisement -