Thursday, December 12, 2024

Latest Posts

Recipe: ಬ್ರೊಕೋಲಿ ಸೂಪ್ ರೆಸಿಪಿ

- Advertisement -

Recipe: ಚಳಿಗಾಲ ಹತ್ತಿರ ಬರುತ್ತಿದೆ. ಈ ವೇಳೆ ಬಿಸಿಬಿಸಿಯಾಗಿ ಸವಿಯಲು ನೀವು ಮನೆಯಲ್ಲೇ ರುಚಿಯಾದ ಸೂಪ್ ತಯಾರಿಸಬಹುದು. ಅದರಲ್ಲೂ ರಾತ್ರಿ ಊಟ ಮಾಡುವ ಬದಲು, ಬಿಸಿಬಿಸಿಯಾದ ಸೂಪ್‌ ತಯಾರಿಸಿ, ಕುಡಿದರೆ, ಆರೋಗ್ಯಕ್ಕೂ ಉತ್ತಮ, ನಾಲಿಗೆಗೂ ರುಚಿ.

ಬೇಕಾಗುವ ಸಾಮಗ್ರಿ: ಸಣ್ಣ ತುಂಡು ಬ್ರೋಕಲಿ, 1 ಈರುಳ್ಳಿ, 10 ಗೋಡಂಬಿ, 4 ಎಸಳು ಬೆಳ್ಳುಳ್ಳಿ, 1 ಸ್ಪೂನ್ ಬೆಣ್ಣೆ ಅಥವಾ ತುಪ್ಪ, 2 ಸ್ಪೂನ್ ಕ್ರೀಮ್, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಬ್ರೋಕೋಲಿಯನ್ನು ಸಮ್ಣದಾಗಿ ಕಟ್ ಮಾಡಿಕೊಳ್ಳಿ. ಇದಕ್ಕೆ ಈರುಳ್ಳಿ, ಗೋಡಂಬಿ, ಉಪ್ಪು, ನೀರು ಸೇರಿಸಿ, ಕೊಂಚ ಬೇಯಿಸಿ. ಬಳಿಕ ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿ. ಬಳಿಕ ತುಪ್ಪ ಅಥವಾ ಬೆಣ್ಣೆ ಹಾಕಿ ಬೆಳುಳ್ಳಿ ಮತ್ತು ಬ್ರೋಕೋಲಿಯ ಸಣ್ಣ ಸಣ್ಣ ತುಂಡುಗಳನ್ನು ಹಾಕಿ ಹುರಿಯಿರಿ.

ಒಂದು ಸೂಪ್ ಬೌಲ್‌ಗೆ ರುಬ್ಬಿದ ಸೂಪ್, ಕ್ರೀಮ್ ಮತ್ತು ಹುರಿದುಕೊಂಡ ಬೆಳ್ಳುಳ್ಳಿ, ಬ್ರೋಕೋಲಿ ಹಾಕಿ ಸರ್ವ್ ಮಾಡಿ. ಸೂಪ್ ಬಿಸಿ ಬಿಸಿಯಾಗಿಯೇ ಸವಿಯಬೇಕು.

- Advertisement -

Latest Posts

Don't Miss