Recipe: ಅನ್ನದ ಜೊತೆ, ಚಪಾತಿ, ರೊಟ್ಟಿ, ದೋಸೆ, ಇಡ್ಲಿ ಜೊತೆ ಯಾವಾಗ್ಲೂ ಚಟ್ನಿ, ಸಾರು, ಸಾಂಬಾರ್, ಪಲ್ಯ ತಿಂದು ತಿಂದು ನಿಮಗೂ ಬೋರ್ ಬಂದಿರಬಹುದು. ಹಾಾಗಾಗಿ ನಾವಿಂದು ಕರಿಬೇವಿನ ಚಟ್ನಿಪುಡಿ ರೆಸಿಪಿ ಹೇಳಲಿದ್ದೇವೆ. ಈ ರೆಸಿಪಿ ಆರೋಗ್ಯಕ್ಕೂ ಉತ್ತಮ, ರುಚಿಯಾಗಿಯೂ ಇರುತ್ತದೆ. ಹಾಗಾದ್ರೆ ಕರಿಬೇವಿನ ಚಟ್ನಿಪುಡಿ ಮಾಡಲು ಏನೇನು ಬೇಕು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.
ಒಂದು ಕಪ್ ಕರಿಬೇವು, 2 ಸ್ಪೂನ್ ಎಣ್ಣೆ, 5ರಿಂದ 6 ಒಣಮೆಣಸು, ಖಾರ ಕಡಿಮೆ ಬೇಕಾದ್ದಲ್ಲಿ ಕಡಿಮೆ ಮೆಣಸು ಬಳಸಿ. 1 ಕಪ್ ಶೇಂಗಾ, 2 ಸ್ಪೂನ್ ಉದ್ದಿನ ಬೇಳೆ, ಕಡಲೆ ಬೇಳೆ, ಕಾಲು ಕಪ್ ಹುರಿಗಡಲೆ, 5 ಎಸಳು ಬೆಳ್ಳುಳ್ಳಿ, ಅರ್ಧ ಕಪ್ ಒಣ ಕೊಬ್ಬರಿ, ಕಾಲು ಕಪ್ ಎಳ್ಳು, ಕೊಂಚ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು.
ಮೊದಲು ಪ್ಯಾನ್ ಬಿಸಿ ಮಾಡಿ, ಎಣ್ಣೆ ಹಾಕಿ ಕರಿಬೇವನ್ನು ಹುರಿಯಿರಿ. ಬಳಿಕ ಒಣಮೆಣಸು ಹುರಿಯಿರಿ. ಬಳಿಕ ಹೀಗೆ ಶೇಂಗಾ, ಹುರಿಗಡಲೆ, ಉದ್ದಿನ, ಬೇಳೆ ಕಡಲೆಬೇಳೆ, ಎಳ್ಳು, ಬೆಳ್ಳುಳ್ಳಿ, ಒಣ ಕೊಬ್ಬರಿ, ಒಂದೊಂದಾಗಿ ಹುರಿದುಕೊಳ್ಳಿ. ಬಳಿಕ ಮಿಕ್ಸಿ ಜಾರ್‌ಗೆ ಹಾಕಿ, ಕೊಂಚ ಅರಿಶಿನ ಉಪ್ಪು ಹಾಕಿ ಪುಡಿ ಮಾಡಿದರೆ, ಕರಿಬೇವಿನ ಚಟ್ನಿ ಪುಡಿ ರೆಡಿ.