Recipe: ಬೇಕಾಗುವ ಸಾಮಗ್ರಿ: 1 ಕಪ್ ಸೋಯಾ ಚಂಕ್ಸ್, 2 ಈರುಳ್ಳಿ, 2ಟೋಮೆಟೋ, ಕೊತ್ತೊಂಬರಿ ಸೊಪ್ಪು, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಅರ್ಧ ಕಪ್ ಕರ್ಡ್, ಡ್ರೈ ಮಿರ್ಚಿ ಪೇಸ್ಟ್, ಧನಿಯಾ ಪೌಡರ್, ಜೀರಿಗೆ ಪೌಡರ್, ಗರಂ ಮಸಾಲೆ, ಅರಿಶಿನ, ಖಾರ ಹೆಚ್ಚು ಬೇಕಾದ್ರೆ ಖಾರದ ಪುಡಿಯೂ ಬಳಸಬಹುದು. 4ರಿಂದ 5 ಗೇರುಬೀಜ.
ಮಾಡುವ ವಿಧಾನ: ಸೋಯಾ ಚಂಕ್ಸನ್ನು ಬಿಸಿ ನೀರಿನಲ್ಲಿ ಹಾಕಿ, ಸ್ವಲ್ಪ ವೇಳೆ ನೆನೆಸಿಡಿ. ನಂತರ ನೀರಿನಿಂದ ತೆಗೆದು, ನೀರು ಹಿಂಡಿ, ಬದಿಗಿರಿಸಿ.
ಬಳಿಕ ಮೊಸರಿನಲ್ಲಿ ಉಪ್ಪು, ಅರಶಿನ, ಗರಂ ಮಸಾಲೆ ಹುಡಿ, ಧನಿಯಾ ಪೌಡರ್, ಜೀರಿಗೆ ಪೌಡರ್, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಡ್ರೈ ಮಿರ್ಚಿ ಪೇಸ್ಟ್, ಖಾರದ ಪುಡಿ, ಸ್ವಲ್ಪ ಎಣ್ಣೆ ಹಾಕಿ ಮಿಕ್ಸ್ ಮಾಡಿ. ನಂತರ ಸೋಯಾ ಚಂಕ್ಸ್‌ನ್ನು ಇದರಲ್ಲಿ ಹಾಕಿ ಮಿಕ್ಸ್ ಮಾಡಿ, ಬದಿಗಿರಿಸಿ.
ನಂತರ ಪ್ಯಾನ್ ಬಿಸಿ ಮಾಡಿ, ಅದರಲ್ಲಿ ಎಣ್ಣೆ ಹಾಕಿ, ಬಿಸಿ ಮಾಡಿ. ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಗ್ಯಾಸ್ ಆಫ್ ಮಾಡಿ, ಈರುಳ್ಳಿ ತಣ್ಣಗಾದ ಬಳಿಕ, ಮಿಕ್ಸಿ ಜಾರ್‌ಗೆ ಹಾಕಿ, ಇದಕ್ಕೆ ಟೋಮೆಟೋ, ಗೇರುಬೀಜ ಮತ್ತು ನೀರು ಹಾಕಿ ರುಬ್ಬಿ.
3 ಸ್ಪೂನ್ ಎಣ್ಣೆ, ಅರ್ಧ ಸ್ಪೂನ್ ತುಪ್ಪವನ್ನು ಬಿಸಿಯಾದ ಪ್ಯಾನ್‌ಗೆ ಹಾಕಿ, ಜೀರಿಗೆ, ಸೋಯಾ ಚಂಕ್ಸ್ ಹಾಕಿ ಹುರಿಯಿರಿ. ನಂತರ ರುಬ್ಬಿದ ಮಿಶ್ರಣವನ್ನೂ ಇದಕ್ಕೆ ಸೇರಿಸಿ, ಉಪ್ಪು, ಹಾಕಿ ಮತ್ತೆ ಬೇಯಿಸಿ. ನಂತರ ಕೊತ್ತೊಂಬರಿ ಸೊಪ್ಪು, ಫ್ರೆಶ್ ಕ್ರೀಮ್ ಸೇರಿಸಿ ಮಿಕ್ಸ್ ಮಾಡಿದ್ರೆ ಸೋಯಾ ಚಂಕ್ಸ್ ಸಬ್ಜಿ ರೆಡಿ.




