Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ರಾಗಿ, ಒಂದು ಕಪ್ ಗೋಧಿ, ಕಾಲು ಕಪ್ ರವೆ, ಉಪ್ಪು, ನೀರು, ಕರಿಯಲು ಎಣ್ಣೆ. ಇನ್ನು ಇದಕ್ಕೆ ಕಾಂಬಿನೇಷನ್ ಆಗಿ ನೀವು ಚಟ್ನಿಯನ್ನು ತಯಾರಿಸಿಕೊಳ್ಳಬಹುದು. ಅದಕ್ಕಾಗಿ ನಿಮಗೆ 1 ಕಪ್ ಕಾಯಿತುರಿ, 2 ಸ್ಪೂನ್ ಎಣ್ಣೆ, 4 ಸ್ಪೂನ್ ಉದ್ದಿನ ಬೇಳೆ, ಕರಿಬೇವು, ಒಣಮೆಣಸು, ಜೀರಿಗೆ, ಸಾಸಿವೆ, ಉಪ್ಪು ಬೇಕು.
ಮಾಡುವ ವಿಧಾನ: ಒಂದು ಮಿಕ್ಸಿಂಗ್ ಬೌಲ್‌ಗೆ ಗೋಧಿ ಹಿಟ್ಟು, ರಾಗಿ ಹಿಟ್ಟು, ರವೆ, ಉಪ್ಪು, ನೀರು ಹಾಕಿ ಪೂರಿ ಹಿಟ್ಟು ತಯಾರಿಸಿ. ಬಳಿಕ 10 ರಿಂದ 15 ನಿಮಿಷ ಬಿಟ್ಟು, ಪೂರಿ ಆಕಾರದಲ್ಲಿ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ.
ನಂತರ ಚಟ್ನಿ ತಯಾರಿಸಲು, ಒಂದು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ, ಉದ್ದಿನ ಬೇಳೆ, ಕರಿಬೇವು, ಒಣಮೆಣಸು ಹಾಕಿ ಹುರಿಯಿರಿ. ಬಳಿಕ ಮಿಕ್ಸಿ ಜಾರ್‌ಗೆ ಕಾಯಿತುರಿ, ಹುರಿದ ಸಾಮಗ್ರಿ, ಉಪ್ಪು ಹಾಕಿ ಚಟ್ನಿ ತಯಾರಿಸಿಕೊಳ್ಳಿ. ಇದಕ್ಕೆ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಮೆಣಸು ಹಾಕಿ ಒಗ್ಗರಣೆ ಕೊಡಿ. ಈ ಚಟ್ನಿ ಪೂರಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ.