Recipe: ಬೇಕಾಗುವ ಸಾಮಗ್ರಿ: ಅನ್ನ, 10ನೆನೆಸಿಟ್ಟ ಒಣಮೆಣಸು, 5ರಿಂದ 6 ಬೆಳ್ಳುಳ್ಳಿ, ಕೊಂಚ ಶುಂಠಿ, 1 ಈರುಳ್ಳಿ, ಬೀನ್ಸ್, ಕಾರ್ನ್, ಕ್ಯಾಪ್ಸಿಕಂ, ತುರಿದ ಕ್ಯಾರೆಟ್, ಸ್ಪ್ರಿಂಗ್ ಆನಿಯನ್, 1 ಸ್ಪೂನ್ ಪೆಪ್ಪರ್ ಪುಡಿ, ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೋ ಸಾಸ್, ವಿನೇಗರ್, ಉಪ್ಪು
ಮಾಡುವ ವಿಧಾನ: ಮೊದಲು 15 ನಿಮಿಷ ಬಿಸಿ ನೀರಿನಲ್ಲಿ ನೆನೆಸಿಟ್ಟ ಒಣಮೆಣಸು ಮತ್ತು ಬೆ್ಳುಳ್ಳಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿ. ಈ ಒಂದು ಪ್ಯಾನ್ ಬಿಸಿ ಮಾಡಿ, ಎಣ್ಣೆ, ಸಣ್ಣಗೆ ತುಂಡರಿಸಿದ ಬೆಳ್ಳುಳ್ಳಿ, ಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಶುಂಠಿ, ಈರುಳ್ಳಿ ಹಾಕಿ ಹುರಿಯಿರಿ. ಬಳಿಕ ರೆಡಿ ಮಾಡಿಟ್ಟುಕೊಂಡ ಮೆಣಸಿನಕಾಯಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.
ಬಳಿಕ ಬೀನ್ಸ್, ಕಾರ್ನ್, ಕ್ಯಾಪ್ಸಿಕಂ, ತುರಿದ ಕ್ಯಾರೆಟ್, ಸ್ಪ್ರಿಂಗ್ ಆನಿಯನ್ ಸೇರಿಸಿ ಹುರಿಯಿರಿ. ಬಳಿಕ ಪೆಪ್ಪರ್ ಪುಡಿ, ಉಪ್ಪು, ವಿನೇಗರ್, ಸೋಯಾ ಸಾಸ್, ಹೆಚ್ಚು ಖಾರ ಬೇಕಾದ್ರೆ ಚಿಲ್ಲಿ ಸಾಸ್, ಟೊಮೆಟೋ ಸಾಸ್, ಸ್ಪ್ರಿಂಗ್ ಆನಿಯನ್, ಅನ್ನ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಮಂದ ಉರಿಯಲ್ಲಿ 5 ನಿಮಿಷ ಮುಚ್ಚುಳ ಮುಚ್ಚಿ ಇದ್ನನು ಬೇಯಿಸಿ. ತಳ ಹಿಡಿಯುವ ಪಾತ್ರೆಯಾಗಿದ್ದಲ್ಲಿ, ಆಗಾಗ ಮಿಕ್ಸ್ ಮಾಡುತ್ತಿರಿ. ಈಗ ಚಿಲ್ಲಿ ಗಾರ್ಲಿಕ್ ಫ್ರೈಡ್ ರೈಸ್ ರೆಡಿ.