Friday, December 13, 2024

Latest Posts

Recipe: ಪೇರಲೆ ಹಣ್ಣಿನ ಐಸ್ಕ್ರೀಮ್

- Advertisement -

Recipe: ಬೇಕಾಗುವ ಸಾಮಗ್ರಿ: 1 ಅರ್ಧ ಹಣ್ಣು ಅರ್ಧ ಕಾಯಿಯಾದ ಪೇರಳೆ ಹಣ್ಣು, ಕಾಲು ಕಪ್ ಹಾಲು, ಒಂದೂವರೆ ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್, ಅರ್ಧ ಟೇಬಲ್ ಸ್ಪೂನ್ ಹಾಲಿನ ಪುಡಿ, ಅರ್ಧ ಕಪ್ ಹಾಲು, ಅರ್ಧ ಕಪ್ ಸಕ್ಕರೆ, ಕೊಂಚ ಪಿಂಕ್ ಕಲರ್.

ಮಾಡುವ ವಿಧಾನ: ಮೊದಲು ಪೇರಳೆ ಹಣ್ಣನ್ನು ಪೇಸ್ಟ್ ಮಾಡಿಕೊಳ್ಳಿ. ಬಳಿಕ ಕಾರ್ನ್ಫ್ಲೋರ್, ಹಾಲಿನ ಪುಡಿ ಮತ್ತು ಕಾಲು ಕಪ್ ಹಾಲು ಮಿಕ್ಸ್ ಮಾಡಿ, ಪೇಸ್ಟ್ ತಯಾರಿಸಿಕೊಳ್ಳಿ. ಇವೆರಡನ್ನು ಬದಿಗಿರಿ. ಈಗ ಪಾತ್ರೆಯಲ್ಲಿ ಹಾಲು ಮತ್ತು ಸಕ್ಕರೆ ಮಿಕ್ಸ್ ಮಾಡಿ, ಬಿಸಿ ಮಾಡಿ. ಆ ಬಿಸಿ ಹಾಲು ಕುದಿಯುತ್ತಿರುವಾಗ, ಕಾರ್ನ್‌ಫ್ಲೋರ್ ಮಿಕ್ಸ್‌ನ್ನು ಹಾಲಿಗೆ ಹಾಕಿ ಮಿಕ್ಸ್ ಮಾಡಿ, ಅದು ಕೊಂಚ ಥಿಕ್ ಪೇಸ್ಟ್ ಆಗುತ್ತಿದೆ ಎಂದಾಗ, ಗ್ಯಾಸ್ ಆಫ್ ಮಾಡಿ.

ಬಳಿಕ, ಸ್ವಲ್ಪ ತಣ್ಣಗಾದ ಬಳಿಕ, ತಯಾರಿಸಿಕೊಂಡ ಪೇರಳೆ ಹಣ್ಣಿನ ಪೇಸ್ಟ್‌ನ್ನು ಸೋಸಿ ಈ ಮಿಶ್ರಣಕ್ಕೆ ಮಿಕ್ಸ್ ಮಾಡಿ. ಕೊಂಚ ಪಿಂಕ್ ಕಲರ್ ಸೇರಿಸಿ, ಮುಚ್ಚಳ ಮುಚ್ಚಿ 4 ತಾಸು ಫ್ರೀಜರ್‌ನಲ್ಲಿರಿಸಿ. ಮತ್ತೆ ಇದೇ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ, ಚೆನ್ನಾಗಿ ರುಬ್ಬಿ, ಸಾಫ್ಟ್ ಪೇಸ್ಟ್ ತಯಾರಿಸಿಕೊಳ್ಳಿ. ಆದರೆ ರುಬ್ಬುವಾಗ, ಇದರೊಂದಿಗೆ ನೀರಾಗಲಿ, ಹಾಲಾಗಲಿ ಏನನ್ನೂ ಸೇರಿಸಬಾರದು. ಈಗ ಒಂದು ಡಬ್ಬದಲ್ಲಿ ಈ ಮಿಶ್ರಣ ಹಾಕಿ, ಮುಚ್ಚಳ ಮುಚ್ಚಿ 8 ಗಂಟೆಗಳ ಕಾಲ ಫ್ರೀಜರ್‌ನಲ್ಲಿರಿಸಿದ್ರೆ, ಐಸ್‌ಕ್ರೀಮ್ ರೆಡಿ. ಸರ್ವ್ ಮಾಡುವಾಗ ಐಸ್‌ಕ್ರೀಮ್ ಮೇಲೆ ಸ್ವಲ್ಪ ಖಾರದ ಪುಡಿ ಚುಮುಕಿಸಿ.

- Advertisement -

Latest Posts

Don't Miss