ಮಲಗುವ ಮುನ್ನ ಬಿಸಿ ಹಾಲಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

Health Tips: ನಾವು ಪ್ರತಿದಿನ ಮಲಗುವ ವೇಳೆ ಮಕ್ಕಳಿಗೆ ಬಿಸಿ ಹಾಲು ಕುಡಿಯಲು ನೀಡುತ್ತೇವೆ. ಆದರೆ ಬರೀ ಮಕ್ಕಳಿಗೆ ಮಾತ್ರವಲ್ಲದೇ, ಹಿರಿಯರು ಕೂಡ ರಾತ್ರಿ ಮಲಗುವ ಮುನ್ನ ಬಿಸಿ ಹಾಲು ಕುಡಿಯುವುದು ಉತ್ತಮ. ಆದರೆ ಬರೀ ಹಾಲು ಕುಡಿಯುವ ಬದಲು, ಅದಕ್ಕೆ 1 ಸ್ಪೂನ್ ದೇಸಿ  ತುಪ್ಪ ಹಾಕಿ ಸೇವಿಸಿದರೆ, ಇನ್ನೂ ಉತ್ತಮ. ಹಾಗಾದ್ರೆ ಬಿಸಿ ಹಾಲಿಗೆ ತುಪ್ಪ ಹಾಕಿ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.

ಹಾಲಿಗೆ ಹಸುವಿನ ತುಪ್ಪ ಸೇರಿಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ನೀವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲ, ಉದರ ಸಮಸ್ಯೆ ಇದೆ ಎಂದಾದಲ್ಲಿ, ನೀವು ರಾತ್ರಿ ಮಲಗುವ ವೇಳೆ ಬಿಸಿ ಹಾಲಿಗೆ ತುಪ್ಪ ಸೇರಿಸಿ ಕುಡಿಯಿರಿ. ಹೀಗೆ ಮಾಡುವುದರಿಂದ ಮಲವಿಸರ್ಜನೆ ಸುಲಭವಾಗಿ ಆಗಿ, ದೇಹದಲ್ಲಿರುವ ವಿಷಕಾರಿ ಅಂಥ ಸುಲಭವಾಗಿ ಆಚೆ ಹೋಗುತ್ತದೆ. ಆಗ ಜೀರ್ಣಕ್ರಿಯೆಯೂ ಉತ್ತಮವಾಗಿ ಇರುತ್ತದೆ.

ಕೀಲು ನೋವು ಶಮನವಾಗಿಸುವಲ್ಲೂ ಬಿಸಿ ಹಾಲು ಮತ್ತು ತುಪ್ಪ ಸಹಕಾರಿಯಾಗಿದೆ. ಮೂಳೆ ಕೂಡ ಬಲವಾಗಿಸುತ್ತದೆ. ದೇಹದಲ್ಲಿ ಕ್ಯಾಲ್ಶಿಯಂ ಅಂಶ ಕಡಿಮೆ ಇದೆ ಎಂದೆನ್ನಿಸಿದರೆ, ಬಿಸಿ ಹಾಲಿಗೆ ತುಪ್ಪ ಸೇರಿಸಿ ಸೇವಿಸಿ.

ನಿಮ್ಮ ತ್ವಚೆ ಸುಂದರವಾಗಿರಬೇಕು, ಕ್ಲೀನ್ ಆಗಿರಬೇಕು, ಆಕರ್ಷಕವಾಗಿರಬೇಕು ಅಂದ್ರೆ, ಬಿಸಿ ಹಾಲಿಗೆ ತುಪ್ಪ ಸೇರಿಸಿ ಸೇವಿಸಿ. ಇದರಿಂದ ಮಲವಿಸರ್ಜನೆ ಸರಿಯಾಗಿ ಆಗುತ್ತದೆ. ಆರೋಗ್ಯ ಚೆನ್ನಾಗಿದ್ದರೆ, ಸೌಂದರ್ಯವೂ ಇರುತ್ತದೆ. ಹಾಗಾಗಿ ನಿಮ್ಮ ಉದರದ ಆರೋಗ್ಯ ಸರಿಯಾಗಿರಿಸಿದರೆ, ಸೌಂದರ್ಯವೂ ತನ್ನಿಂದ ತಾನೇ ಸರಿಯಾಗುತ್ತದೆ.

About The Author