Recipe: ಬೇಕಾಗುವ ಸಾಮಗ್ರಿ: 1 ಕಪ್ ರವಾ, 1 ಕಪ್ ರಾಗಿ ಹುಡಿ, ಸ್ವಲ್ಪ ಮೊಸರು, ಕೊತ್ತೊಂಬರಿ ಸೊಪ್ಪು, ಕ್ಯಾರೆಟ್ ತುರಿ, ತುರಿದ ಸೌತೇಕಾಯಿ, ಕಾಯಿತುರಿ, ಈರುಳ್ಳಿ, ಉಪ್ಪು, ಜೀರಿಗೆ, ಎಣ್ಣೆ ಅಥವಾ ತುಪ್ಪ. ಬೇಕಾದಲ್ಲಿ ಎಳ್ಳು.
ಮಾಡುವ ವಿಧಾನ: ರವಾ, ರಾಗಿ ಹುಡಿ, ಮೊಸರು, ಕೊತ್ತೊಂಬರಿ ಸೊಪ್ಪು, ಕ್ಯಾರೆಟ್ ತುರಿ, ತುರಿದ ಸೌತೇಕಾಯಿ, ಕಾಯಿತುರಿ, ಈರುಳ್ಳಿ, ಉಪ್ಪು, ಜೀರಿಗೆ ಇದೆಲ್ಲವನ್ನು 1 ಬೌಲ್ಗೆ ಹಾಕಿ ಮಿಕ್ಸ್ ಮಾಡಿ, 10 ನಿಮಿಷ ಬಿಟ್ಟು ಪ್ಯಾನ್ಗೆ ಎಣ್ಣೆ ಅಥವಾ ತುಪ್ಪ ಸವರಿ, ಸೆಟ್ ದೋಸೆ ತಯಾರಿಸಿ, ಅದರ ಮೇಲೆ ಎಳ್ಳು ಹರಡಿದ್ರೆ ದೋಸೆ ರೆಡಿ. ಚಟ್ನಿ ಅಥವಾ ಚಟ್ನಿ ಪುಡಿ ಜತೆ ಈ ದೋಸೆ ಮ್ಯಾಚ್ ಆಗತ್ತೆ.




