Recipe: ಚಳಿಗಾಲ ಶುರುವಾಗಿದೆ. ಇನ್ನು ಪದೇ ಪದೇ ಶೀತವಾಗೋದು, ಜ್ವರ ಬರೋದೆಲ್ಲ ಕಾಮನ್. ಆದರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು ಅಂದ್ರೆ ನೀವು ಕೆಲವು ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು. ಅಂಥ ಆಹಾರಗಳಲ್ಲಿ ಸೂಪ್ ಕೂಡ ಒಂದು. ಇಂದು ನಾವು ತರಕಾರಿ ಸೂಪ್ ಮಾಡೋದು ಹೇಗೆ ಎಂದು ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಕೊಂಚ ಕ್ಯಾಬೇಜ್ ತುರಿ, 1 ಕ್ಯಾರೆಟ್ ತುರಿ, ಕ್ಯಾಪ್ಸಿಕಂ, ಸ್ವಲ್ಪ ಬೀನ್ಸ್ (ಇದನ್ನು ಬಿಟ್ಟು ನಿಮಗಿಷ್ಟವಾದ ಯಾವುದೇ ತರಕಾರಿಯನ್ನು ನೀವು ಸೇರಿಸಿಕೊಳ್ಳಬಹುದು) ಅರ್ಧ ಈರುಳ್ಳಿ, 4 ಎಸಳು ಬೆಳ್ಳುಳ್ಳಿ, ಕೊಂಚ ಪೆಪ್ಪರ್, 2 ಸ್ಪೂನ್ ತುಪ್ಪ, ಉಪ್ಪು. ಅವಶ್ಯಕತೆ ಇದ್ದಲ್ಲಿ, ಹೊಟೇಲ್ ಸ್ಟೈಲ್ ಸೂಪ್ ಬೇಕು ಎಂದಲ್ಲಿ ನೀವು 1 ಸ್ಪೂನ್ ಕಾರ್ನ್ ಫ್ಲೋರ್ ಬಳಸಬಹುದು.
ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ, ತುಪ್ಪ ಹಾಕಿ, ಅದಕ್ಕೆ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಹುರಿಯಿರಿ. ಬಳಿಕ, ಕ್ಯಾರೆಟ್, ಬೀನ್ಸ್, ಕ್ಯಾಬೇಜ್, ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಹುರಿಯಿರಿ. ಆಮೇಲೆ ಬೇಕಾದಷ್ಟು ನೀರು ಹಾಕಿ ಬೇಯಿಸಿಕೊಳ್ಳಿ. ಬಳಿಕ ಉಪ್ಪು, ಪೆಪ್ಪರ್ ಹಾಕಿ ಬೇಯಿಸಿದರೆ ಸೂಪ್ ರೆಡಿ. ನಿಮಗೆ ಹೊಟೇಲ್ ರುಚಿ ಬೇಕು ಎಂದಲ್ಲಿ, ನೀರು ಕುದಿಯುವಾಗ ನೀವು 1 ಸ್ಪೂನ್ ಕಾರ್ನ್ ಫ್ಲೋರ್ ನೀರಿನಲ್ಲಿ ಬೆರೆಸಿ, ಮಿಕ್ಸ್ ಮಾಡಬಹುದು. ಇದರಿಂದ ಸೂಪ್ ಥಿಕ್ ಆಗುತ್ತದೆ.