Recipe: ಮನೆಯಲ್ಲೇ ತಯಾರಿಸಿ ಪ್ರೋಟೀನ್ ಭರಿತವಾದ ಬೀಟರೂಟ್ ಟಿಕ್ಕಿ ಚಾಟ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಬೀಟ್‌ರೂಟ್ ತುರಿ, ಬೇಯಿಸಿದ ಬಟಾಣಿ, ಆಲೂಗಡ್ಡೆ, ಸೋಯಾ ಚಂಕ್ಸ್, ಸ್ಪ್ರೌಟ್ಸ್, ಉಪ್ಪು, ಚಾಟ್ ಮಸಾಲೆ, ಕೊತ್ತೊಂಬರಿ ಸೊಪ್ಪು, ಶುಂಠಿ- ಬೆಳ್ಳುಳ್ಳಿ ಪೆಸ್ಟ್, , ಮೊಸರು, ಕ್ಯಾರೇಟ್ ತುರಿ, ಸ್ವಲ್ಪ ಎಣ್ಣೆ ಅಥವಾ ತುಪ್ಪ.

ಮಾಡುವ ವಿಧಾನ: ಬಟಾಣಿ ಮತ್ತು ಆಲೂಗಡ್ಡೆ ಮತ್ತು ಸ್ಪ್ರೌಟ್ಸ್ ಬೇಯಿಸಬೇಕು. ಸೋಯಾ ಚಂಕ್ಸ್ ಮಿಕ್ಸಿ ಜಾರ್‌ಗೆ ಹಾಕಿ ತರಿ ತರಿಯಾಗಿ ರುಬ್ಬಿ. ಬಳಿಕ ಮಿಕ್ಸಿಂಗ್ ಬೌಲ್‌ಗೆ ಬೇಯಿಸಿದ ಮಿಶ್ರಣ, ರುಬ್ಬಿದ ಸೋಯಾ ಮತ್ತು ಬೀಟ್‌ರೂಟ್ ತುರಿ, ಉಪ್ಪು, ಚಾಟ್ ಮಸಾಲೆ, ಕೊತ್ತೊಂಬರಿ ಸೊಪ್ಪು, ಶುಂಠಿ- ಬೆಳ್ಳುಳ್ಳಿ ಪೆಸ್ಟ್, ಇದೆಲ್ಲವನ್ನೂ ಹಾಕಿ ಮಿಕ್ಸ್ ಮಾಡಿ.

ಬಳಿಕ ಟಿಕ್ಕಾ ಶೇಪ್ ನೀಡಿ, ಕಾದ ತವ್ವಾದ ಮೇಲೆ ಎಣ್ಣೆ ಅಥವಾ ತುಪ್ಪ ಹಾಕಿ, ಅದರಲ್ಲಿ ಟಿಕ್ಕಾ ಹಾಕಿ ಮಂದ ಉರಿಯಲ್ಲಿ ತವ್ವಾ ಫ್ರೈ ಮಾಡಿ. ಬಳಿಕ ಚಿಕ್ಕ ಬೌಲ್‌ಗೆ ಟಿಕ್ಕಾ ಹಾಕಿ. ಅದರ ಮೇಲೆ ಮೊಸರು, ಕ್ಯಾರೇಟ್ ತುರಿ, ಈರುಳ್ಳಿ ಹಾಕಿ ಸರ್ವ್ ಮಾಡಿ.

ಅವಶ್ಯಕತೆ ಇದ್ದಲ್ಲಿ ನೀವು ಇದಕ್ಕೆ ಸೇವು, ಹುರಿದ ಶೇಂಗಾ, ಖಾರಾ ಬೂಂದಿ, ದಾಳಿಂಬೆ ಹಣ್ಣನ್ನು ಹಾಕಿ ಸರ್ವ್ ಮಾಡಬಹುದು.

About The Author