Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, ಸಣ್ಣಗೆ ಕತ್ತರಿಸಿದ ಕ್ಯಾರೇಟ್, ಬೀನ್ಸ್, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಸ್ಪ್ರಿಂಗ್ ಆನಿಯನ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಶುಂಟಿ, 1 ಸ್ಪೂನ್ ಪೆಪ್ಪರ್ ಪುಡಿ, ಸೋಯಾ ಸಾಸ್, ಟೋಮೆಟೋ ಸಾಸ್, ಚಿಲ್ಲಿ ಸಾಸ್, 4 ಸ್ಪೂನ್ ಎಣ್ಣೆ, ಉಪ್ಪು.
ಮಾಡುವ ವಿಧಾನ: ಬಾಸ್ಮತಿ ರೈಸ್ ಹಾಕಿ, ಪಾತ್ರೆಯಲ್ಲಿ ಅನ್ನ ಮಾಡಿ. ಕುಕ್ಕರ್ನಲ್ಲಿ ಬಾಸ್ಮತಿ ಅಕ್ಕಿಯಿಂದ ರೈಸ್ ಮಾಡಿದ್ರೆ, ಬಿಡಿಬಿಡಿಯಾಗುವುದಿಲ್ಲ. ಹಾಗಾಗಿ ಪಾತ್ರೆಯಲ್ಲಿ ನೀರು ಕುದಿಸಿ, ಅಕ್ಕಿ ಹಾಕಿ, ತಿಳಿ ತೆಗೆದು ಬಾಸ್ಮತಿ ಅನ್ನ ಮಾಡಬೇಕು.
ಬಳಿಕ ಪ್ಯಾನ್ ಬಿಸಿ ಮಾಡಿ, ಎಣ್ಣೆ ಹಾಕಿ, ಬೆಳ್ಳುಳ್ಳಿ-ಶುಂಟಿ ಹಾಕಿ ಹುರಿಯಿರಿ. ನಂತರ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ, ಬೀನ್ಸ್, ಹಸಿಮೆಣಸು ಹಾಕಿ ಹುರಿಯಿರಿ. ನಂತರ ಪೆಪ್ಪರ್ ಪುಡಿ, ಎಲ್ಲಾ ಸಾಸ್ಗಳನ್ನು ಹಾಕಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಬಳಿಕ ಅನ್ನ, ಸ್ಪ್ರಿಂಗ್ ಆನಿಯನ್ ಹಾಕಿ ಮಿಕ್ಸ್ ಮಾಡಿದ್ರೆ, ಫ್ರೈಡ್ ರೈಸ್ ರೆಡಿ. ನೀವು ಪನೀರ್ ಹುರಿದು ಸೇರಿಸಬಹುದು.




