Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಬೇಕಾಗುವ ಸಾಮಗ್ರಿ: ಮೂರರಿಂದ ನಾಲ್ಕು ಈರುಳ್ಳಿ, ನಾಲ್ಕು ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, 1 ಸ್ಪೂನ್ ಜಿಂಜರ್-ಗಾರ್ಲಿಕ್ ಪೇಸ್ಟ್, ಖಾರ ಅವಶ್ಯಕತೆ ಇರುವಷ್ಟು ಹಸಿ ಮೆಣಸು, ಸ್ವಲ್ಪ ಅರಿಶಿನ, 1 ಸ್ಪೂನ್ ಖಾರದ ಪುಡಿ, 1 ಕಪ್ ಕ್ರೀಮ್ ಅಥವಾ ಕೆನೆ, ಕಸೂರಿ ಮೇಥಿ, ಧನಿಯಾ, ಗರಂ ಮಸಾಲೆ, ಉಪ್ಪು.

ಮಾಡುವ ವಿಧಾನ: ಈರುಳ್ಳಿಯನ್ನು ಉದ್ದಕ್ಕೆ, ದಪ್ಪಕ್ಕೆ ಹೆಚ್ಚಿ, ಬಳಿಕ ಗ್ಯಾಸ್ ಆನ್ ಮಾಡಿ, ಅದಕ್ಕೆ ಜೀರಿಗೆ, ಜಿಂಜರ್ ಗಾರ್ಲಿಕ್, ಹಸಿಮೆಣಸು, ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ. ಬಳಿಕ ಅರಿಶಿನ, ಉಪ್ಪು, ಗರಂ ಮಸಾಲೆ, ಖಾರದ ಪುಡಿ, ಕ್ರೀಮ್ ಅಥವಾ ಕೆನೆ, ಕಸೂರಿ ಮೇಥಿ, ಧನಿಯಾ ಹಾಕಿ ಮಿಕ್ಸ್ ಮಾಡಿ. 2 ನಿಮಿಷ ಇದನ್ನು ಮಂದ ಉರಿಯಲ್ಲಿ ಬೇಯಿಸಿದ್ರೆ, ಈರುಳ್ಳಿ ಪಲ್ಯ ರೆಡಿ. ಚಪಾತಿಗೆ ಇದು ಸೂಪರ್ ಕಾಂಬಿನೇಷನ್.

About The Author