Recipe: ಬೇಕಾಗುವ ಸಾಮಗ್ರಿ: 1ಬೌಲ್ ಮೈದಾ, ಅರ್ಧ ಕಪ್ ಹೆಸರುಬೇಳೆ, 1 ಸ್ಪೂನ್ ಜೀರಿಗೆ, ವೋಮ, ಎಳ್ಳು, ಖಾರದ ಪುಡಿ, ಅರಿಶಿನ, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ನೀವು ದಿಢೀರ್ ಅಂತಾ ಚಕ್ಕುಲಿ ಮಾಡಬೇಕು ಅಂದ್ರೆ ಮೈದಾವನ್ನು ಸೆಕೆ ಬರಿಸಬೇಕು. ಅಂದ್ರೆ ಇಡ್ಲಿ ಪಾತ್ರೆ ಅಥವಾ, ಯಾವುದೇ ಪಾತ್ರೆಯಲ್ಲಿ ನೀರು ಕುದಿ ಬರಿಸಿ, ಅದರ ಮೇಲೆ 1 ಸ್ಟ್ಯಾಂಡ್ ಇರಿಸಿ, ಅದರ ಮೇಲೆ ಪಾತ್ರೆ ಇಡಬೇಕು.
1 ಕಾಟನ್ ವಸ್ತ್ರದಲ್ಲಿ ಮೈದಾ ಹಾಕಿ ಗಂಟು ಕಟ್ಟಿ, ಆ ಪಾತ್ರೆಯಲ್ಲಿ ಇರಿಸಿ, ಮುಚ್ಚಳ ಮುಚ್ಚಿ, 15ರಿಂದ 20 ನಿಮಿಷ ಹಬೆ ಬರಿಸಬೇಕು. ಬಳಿಕ ಮುಚ್ಚಳ ತೆಗೆದು, ಹಬೆ ಬರಿಸಿದ ಮೈದಾವನ್ನು ತೆಗೆದು ಪುಡಿ ಮಾಡಬೇಕು.
ಬಳಿಕ 1 ಬೌಲ್‌ನಲ್ಲಿ ಆ ಹುಡಿಯನ್ನು ಗಾಳಿಸಬೇಕು. ಬಳಿಕ ಹೆಸರು ಬೇಳೆಯನ್ನು ಚೆನ್ನಾಗಿ ವಾಶ್ ಮಾಡಿ, ಕುಕ್ಕರ್‌ಗೆ ಹಾಕಿ ಬೇಯಿಸಬೇಕು. ಹೋಳಿಗೆಗೆ ಬಳಸುವ ಕಣಕದ ಹಿಟ್ಟಿನಂತೆ ಬೇಳೆಯನ್ನು ಮ್ಯಾಶ್ ಮಾಡಬೇಕು.
ಈಗ ಇದನ್ನು ಆಗಲೇ ಸೆಕೆ ಬರಿಸಿದ ಮೈದಾಗೆ ಸೇರಿಸಿಕ“ಳ್ಳಿ. ಇದಕ್ಕೆ ಉಪ್ಪು, ಖಾರದ ಪುಡಿ, ವೋಮ, ಎಳ್ಳು, ಜೀರಿಗೆ, ಬೇಕಾಗಿದ್ದಲ್ಲಿ ಹಸಿಮೆಣಸಿನ ಪೇಸ್ಟ್, ನೀರು ಸೇರಿಸಿ. ಚೆನ್ನಾಗಿ ಹಿಟ್ಟು ಕಲಿಸಿ. ನೀರು ಬಳಸುವಾಗ ಹೆಚ್ಚೂ ಆಗಬಾರದು, ಕಡಿಮೆಯೂ ಆಗಬಾರದು. ನೀರಿನ ಪ್ರಮಾಣ ಸರಿಯಾಗಿರಬೇಕು. ಬಳಿಕ ಈ ಹಿಟ್ಟಿಗೆ ಕಾಟನ್ ಬಟ್ಟೆ ಮುಚ್ಚಿ 1ರಿಂದ 2 ಗಂಟೆ ಇರಿಸಿ. ಬಳಿಕ ಚಕ್ಕುಲಿ ಮಾಡಿ, ಕಾದ ಎಣ್ಣೆಯಲ್ಲಿ ಮಂದಉರಿಯಲ್ಲಿ ಕರಿದರೆ, ಚಕ್ಕುಲಿ ರೆಡಿ.




