Recipe: ಬೇಕಾಗುವ ಸಾಮಗ್ರಿ: 5ರಿಂದ6 ಬದನೇಕಾಯಿ, 1 ಟೊಮೆಟೋ, ಕಾಲು ಕಪ್ ಶೇಂಗಾ , ಕಾಲು ಕಪ್ ಗುರೆಳ್ಳು, ಅರ್ಧ ಕಪ್ ಒಣಕೊಬ್ಬರಿ ತುರಿ, 1 ಸ್ಪೂನ್ ಜೀರಿಗೆ, 1 ಸ್ಪೂನ್ ಕೊತ್ತೊಂಬರಿ ಕಾಳು, 5ರಿಂದ 6 ಬೆಳ್ಳುಳ್ಳಿ, 5 ಹಸಿಮೆಣಸು, ಸಣ್ಣ ತುಂಂಡು ಶುಂಠಿ, ಕೊಂಚ ಕೊತ್ತೊಂಬರಿ ಸೊಪ್ಪು, 4ರಿಂದ 5 ಸ್ಪೂನ್ ಎಣ್ಣೆ, 1 ಸ್ಪೂನ್ ಸಾಸಿವೆ, ಜೀರಿಗೆ, ಕೊಂಚ ಇಂಗು, 2 ಈರುಳ್ಳಿ, ಕರಿಬೇವು, ಅರಿಶಿನ, ಉಪ್ಪು, ಕೊಂಚ ಬೆಲ್ಲ,
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ಅದಕ್ಕೆ ಶೇಂಗಾ ಹಾಕಿ ಹುರಿಯಿರಿ. ಬಳಿಕ ಗುರೆಳ್ಳು, ಒಣಕೊಬ್ಬರಿ, ಜೀರಗೆ, ಕೊತ್ತೊಂಬರಿ ಕಾಳು ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಮಿಕ್ಸಿ ಜಾರ್‌ಗೆ ಹಾಕಿ, ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ, ಕೊತ್ತೊಂಬರಿ ಸೊಪ್ಪು ಹಾಕಿ ನೀರು ಹಾಕದೇ, ತರಿ ತರಿಯಾಗಿ ರುಬ್ಬಿಕೊಳ್ಳಿ.
ಒಂದು ಪ್ಯಾನ್ ಬಿಸಿ ಮಾಡಿ, ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಇಂಗು, ಉದ್ದಕ್ಕೆ ಕತ್ತರಿಸಿದ ಈರುಳ್ಳಿ, ಕರಿಬೇವು ಹಾಕಿ ಹುರಿಯಿರಿ. ಬಳಿಕ ಉದ್ದಕ್ಕೆ ಕತ್ತರಿಸಿದ ಬದನೇಕಾಯಿ, ಅರಿಶಿನ, ಉಪ್ಪು ಹಾಕಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ, 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಬಳಿಕ ಟೊಮೆಟೋ ಸ್ಲೈಸ್ ಹಾಕಿ ಮಿಕ್ಸ್ ಮಾಡಿ, ಕೊಂಚ ನೀರು ಹಾಕಿ ಮತ್ತೆ ಮುಚ್ಚಳ ಮುಚ್ಚಿ ಬೇಯಿಸಿ.
ಕೊನೆಗೆ ರುಬ್ಬಿಕೊಂಡ ಮಸಾಲೆ, ಬೆಲ್ಲ ಹಾಕಿ ಮಿಕ್ಸ್ ಮಾಡಿ. ಗ್ರೇವಿಯ ರೀತಿ ನೀರು ಹಾಕಿ ಮತ್ತೆ 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿದರೆ, ಉತ್ತರ ಕರ್ನಾಟಕ ಶೈಲಿಯ ಬದೇಕಾಯಿ ಪಲ್ಯ ರೆಡಿ. ರೊಟ್ಟಿಯ ಜೊತೆ ಇದನ್ನು ಸವಿಯಬಹುದು.