Recipe: ಬೇಸಿಗೆ ಗಾಲ ಶುರುವಾಗಿದೆ. ಬೇಸಿಗೆ ಗಾಲ ಅಂದ್ರೇನೆ, ಜ್ಯೂಸ್, ಐಸ್‌ಕ್ರೀಮ್, ಕಲ್ಲಂಗಡಿ ಹಣ್ಣು, ದ್ರಾಕ್ಷಿ ಹಣ್ಣು, ಮಾವಿನ ಹಣ್ಣು, ಮಾವಿನ ಕಾಯಿ ಇವುಗಳದ್ದೇ ಕಾರುಬಾರು. ಹಾಗಾಗಿ ನಾವಿಂದು ಮಾವಿನ ಕಾಯಿ ಬಳಸಿ ಯಾವ ರೀತಿ ಖಾರ ಖಾರವಾದ ಚಟ್ನಿ ತಯಾರಿಸಬಹುದು ಅಂತಾ ಹೇಳಲಿದ್ದೇವೆ.
ಮೊದಲು ಮಾವಿನಕಾಯಿ ಸಿಪ್ಪೆ ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಬಳಿಕ ಮಿಕ್ಸಿ ಜಾರ್‌ಗೆ ಮಾವಿನಕಾಯಿ, 5 ಎಸಳು ಬೆಳ್ಳುಳ್ಳಿ, ಅರ್ಧ ಕಪ್ ಕಾಯಿತುರಿ, 4ರಿಂದ5 ಹಸಿಮೆಣಸಿನಕಾಯಿ, ಕೊಂಚ ಜೀರಿಗೆ, ಉಪ್ಪು, ಕೊಂಚ ಸಕ್ಕರೆ, ಕೊತ್ತೊಂಬರಿ ಸೊಪ್ಪು, ಹಾಕಿ ರುಬ್ಬಿ ಗಟ್ಟಿ ಚಟ್ನಿ ತಯಾರಿಸಿ. ಈಗ ಇದನ್ನು ಒಂದು ಬೈಲ್‌ಗೆ ಹಾಕಿ, ಒಗ್ಗರಣೆ ಸೌಟಿಗೆ ಒಂದು ಸ್ಪೂನ್ ಎಣ್ಣೆ, ಸಾಸಿವೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಕೊಟ್ಟರೆ ಮಾವಿನಕಾಯಿ ಖಾರ ಖಾರ ಚಟ್ನಿ ರೆಡಿ.
ಈ ಚಟ್ನಿಯನ್ನು ಬಿಸಿ ಬಿಸಿ ಅನ್ನದೊಂದಿಗೆ ಎಣ್ಣೆ ಅಥವಾ ತುಪ್ಪ ಸೇರಿಸಿ ಸೇವಿಸಬಹುದು. ಟಿಫಿನ್ ಕಳುಹಿಸುವಾಗ ಈ ರೀತಿ ಗಟ್ಟಿ ಚಟ್ನಿ ಮಾಡಿಕೊಟ್ಟರೆ, ಅನ್ನ, ಚಪಾತಿ, ದೋಸೆ, ಇಡ್ಲಿ ಎಲ್ಲದಕ್ಕೂ ಇದು ಮ್ಯಾಚ್ ಆಗುತ್ತದೆ.

