Recipe: ದೋಸೆ- ಇಡ್ಲಿ ಜೊತೆ ಯಾವಾಗಲೂ ತೆಂಗಿನಕಾಯಿ ಚಟ್ನಿ ತಿಂದು ತಿಂದು ನಿಮಗೆ ಬೋರ್ ಆಗಿದ್ದರೆ, ನೀವು ಈರುಳ್ಳಿ ಚಟ್ನಿ ಕೂಡ ಟ್ರೈ ಮಾಡಬಹುದು. ಹಾಗಾದ್ರೆ ಈ ಚಟ್ನಿ ಮಾಡೋದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 6ರಿಂದ 7 ಒಣಮೆಣಸಿನಕಾಯಿ, 2 ಈರುಳ್ಳಿ, 2 ಸ್ಪೂನ್ ಎಣ್ಣೆ, 1 ಸ್ಪೂನ್ ಉದ್ದಿನ ಬೇಳೆ, ಕಡಲೆಬೇಳೆ, ಜೀರಿಗೆ, ಕಾಲು ಸ್ಪೂನ್ ಮೆಂತ್ಯೆ, 10ರಿಂದ 12 ಬೆಳ್ಳುಳ್ಳಿ ಎಸಳು, ಕೊಂಚ ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ ಎಣ್ಣೆ, ಸಾಸಿವೆ, ಕರಿಬೇವು, ಹಿಂಗ್, ಬೇಕಾದರೆ ಬೆಲ್ಲ ಬಳಸಬಹುದು.
ಮಾಡುವ ವಿಧಾನ: ಮೊದಲು ಬಿಸಿ ನೀರಿನಲ್ಲಿ ಒಣಮೆಣಸಿನಕಾಯಿಯನ್ನು 10 ನಿಮಿಷ ನೆನೆಸಿಟ್ಟುಕೊಳ್ಳಿ. ಈಗ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಜೀರಿಗೆ, ಉದ್ದಿನ ಬೇಳೆ, ಕಡಲೆಬೇಳೆ, ಮೆಂತ್ಯೆ, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ನೆನೆಸಿಟ್ಟ ಒಣಮೆಣಸು, ಹುಣಸೆ ಹಣ್ಣು ಮಿಕ್ಸ್ ಮಾಡಿ, ಮತ್ತೆ ಸ್ವಲ್ಪ ಹುರಿಯಿರಿ.
ಬಳಿಕ ರುಬ್ಬಿ ಪೇಸ್ಟ್ ತಯಾರಿಸಿ. ಈಗ ಮತ್ತೆ ಪ್ಯಾನ್ ಬಿಸಿ ಮಾಡಿ, ಎಣ್ಣೆ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಕೊಟ್ಟು ಅದರಲ್ಲಿ ಈ ಚಟ್ನಿ ಹಾಕಿ ಮಿಕ್ಸ್ ಮಾಡಿ. ಬಳಿಕ ಬೆಲ್ಲ, ಉಪ್ಪು, ಅರಿಶಿನ ಸೇರಿಸಿ, ಬಣ್ಣ ಗಾಢವಾಗುವವರೆಗೂ ಹುರಿದರೆ, ಈರುಳ್ಳಿ ಚಟ್ನಿ ರೆಡಿ.