Recipe: ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್ ಚುರ್ಮುರಿ, 1 ಈರುಳ್ಳಿ, ಟೊಮೆಟೋ, ಸೌತೇಕಾಯಿ, ಬೇಯಿಸಿದ ಆಲೂಗಡ್ಡೆ, ಹಸಿಮೆಣಸಿನಕಾಾಯಿ, ಕೊತ್ತೊಂಬರಿ ಸೊಪ್ಪು, 10ರಿಂದ 15 ಎಸಳು ಬೆಳ್ಳುಳ್ಳಿ, ಅರ್ಧ ಕಪ್ ಶೇಂಗಾ, ಹುರಿಗಡಲೆ, ನಾಲ್ಕೈದು ಸ್ಪೂನ್ ಎಣ್ಣೆ, ಕರಿಬೇವಿನ ಎಲೆ, 1 ಸ್ಪೂನ್ ಸಕ್ಕರೆ ಪುಡಿ, ಖಾರದ ಪುಡಿ, ಕೊಂಚ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು. ಕೊಂಚ ಕೆಂಪು ಚಟ್ನಿ, ಹುಳಿ ಚಟ್ನಿ ಮತ್ತು ಪುದೀನಾ ಚಟ್ನಿ. ಬೇಕಾದಷ್ಟು ಸೇವು ಅಥವಾ ಮಿಕ್ಸ್‌ಚರ್.
ಮೊದಲು ಪ್ಯಾನ್‌ಗೆ ಎಣ್ಣೆ ಹಾಕಿ, ಅದಕ್ಕೆ ಶೇಂಗಾ, ಹುರಿಗಡಲೆ, ಕರಿಬೇವಿನ ಎಲೆ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಒಂದೊಂದಾಗಿ ಹುರಿದುಕೊಳ್ಳಿ. ಬಳಿಕ ಚುರ್ಮುರಿ, ಸಕ್ಕರೆ ಪುಡಿ, ಉಪ್ಪು, ಖಾರದ ಪುಡಿ, ಅರಿಶಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಮಸಾಲೆ ಚುರ್ಮುರಿ ರೆಡಿ.
ಈಗ ಒಂದು ಬೇಯಿಸಿದ ಬಟಾಟೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೆಟೋ, ಹಸಿಮೆಣಸಿನಕಾಯಿ, ಕೊತ್ತೊಂಬರಿ ಸೊಪ್ಪು, ಸೌತೇಕಾಯಿ, ಹುರಿಗಡಲೆ, ಕೆಂಪು ಚಟ್ನಿ, ಹುಳಿ ಚಟ್ನಿ, ಪುದೀನಾ ಚಟ್ನಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಇದರೊಂದಿಗೆ ಯಾವುದಾರೂ ಮಿಕ್ಸಚರ್, ಸೇವು ಸೇರಿಸಿದರೆ, ಭೇಲ್ ಪುಡಿ ರೆಡಿ.