Sunday, May 11, 2025

Latest Posts

Recipe: ಕಾಯಿ ಹಾಲು ಹಾಕಿ ಪಲಾವ್ ತಯಾರಿಸಿ ನೋಡಿ

- Advertisement -

Recipe: ಬೇಕಾಗುವ ಸಾಮಗ್ರಿ: 3 ಕಪ್ ಕಾಯಿ ಹಾಲು, ಬಾಸ್ಮತಿ ಅಕ್ಕಿ, ಕ್ಯಾರೆಟ್, ಈರುಳ್ಳಿ, ಆಲೂಗಡ್ಡೆ, ಬಟಾಣಿ, ಫ್ಲವರ್, ಬೀನ್ಸ್, ಅರಿಶಿನ, 1 ಸ್ಪೂನ್ ಖಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆ ಪುಡಿ, ಚಾಟ್ ಮಸಾಲೆ ಪುಡಿ, ಚಕ್ಕೆ, ಏಲಕ್ಕಿ, ಪಲಾವ್ ಎಲೆ, ಲವಂಗ, 4 ಸ್ಪೂನ್ ತುಪ್ಪ, ಕೊತ್ತೊಂಬರಿ ಸೊಪ್ಪು, ಕಸೂರಿ ಮೇಥಿ, ಉಪ್ಪು.

ಮಾಡುವ ವಿಧಾನ: ಮೊದಲು ಕುಕ್ಕರ್‌ಗೆ ತುಪ್ಪ ಹಾಕಿ ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಸೋಂಪು ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಹುರಿಯಿರಿ. ನಂತರ ಶುಂಠಿ- ಬೆಳ್ಳುಳ್ಳಿ- ಹಸಿಮೆಣಸಿನಕಾಯಿ ಪೇಸ್ಟ್, ಕ್ಯಾರೇಟ್, ಬಟಾಣಿ, ಆಲೂಗಡ್ಡೆ, ಬೀನ್ಸ್, ಫ್ಲವರ್ ಹಾಕಿ ಹುರಿಯಿರಿ. ಇದಾದ ಬಳಿಕ ಖಾರದ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ, ಕೊತ್ತೊಂಬರಿ ಸೊಪ್ಪು, ಕಸೂರಿ ಮೇಥಿ, ಕಾಯಿ ಹಾಲು, ಉಪ್ಪು, ಹಾಕಿ ಮಿಕ್ಸ್ ಮಾಡಿ. ಕೊನೆಗೆ ಚೆನ್ನಾಗಿ ತೊಳೆದ ಅಕ್ಕಿ ಸೇರಿಸಿ, 3 ವಿಶಲ್ ಬರಿಸಿದರೆ, ಕಾಯಿ ಹಾಲು ಹಾಕಿದ ಪಲಾವ್ ರೆಡಿ.

- Advertisement -

Latest Posts

Don't Miss