Recipe: ಕುಕ್ಕರ್‌ನಲ್ಲಿ ಸುಲಭವಾಗಿ ತಯಾರಿಸಬಹುದು ವಾಂಗಿಭಾತ್

Recipe: ಬೇಕಾಗುವ ಸಾಮಗ್ರಿ: 4 ಬದನೇಕಾಯಿ, 1 ಈರುಳ್ಳಿ, 1 ಕಪ್ ಅಕ್ಕಿ, ಅರ್ಧ ಕಪ್ ಕಾಯಿ ತುರಿ, 2 ಸ್ಪೂನ್ ಎಳ್ಳು, 1 ಸ್ಪೂನ್ ಗಸಗಸೆ, ಶೇಂಗಾ, 4 ಸ್ಪೂನ್ ಎಣ್ಣೆ, ಪಲಾವ್ ಎಲೆ, ಚಕ್ಕೆ , ಲವಂಗ, ಏಲಕ್ಕಿ, ಕಾಳು ಮೆಣಸು , ಸ್ವಲ್ಪ ಜೀರಿಗೆ, ಹಿಂಗು, ಕರಿಬೇವು, ಅರ್ಧ ಕಪ್ ನೆನೆಸಿದ ಬಟಾಣಿ, ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ, ಕೊತ್ತೊಂಬರಿ ಸೊಪ್ಪು, ಉಪ್ಪು.

ಮಾಡುವ ವಿಧಾನ: ಎಳ್ಳು, ಗಸಗಸೆ, ಕಾಯಿತುರಿಯನ್ನು ಚೆನ್ನಾಗಿ ಹುರಿಯಿರಿ. ಬಳಿಕ ತರಿತರಿಯಾಗಿ ಪುಡಿ ಮಾಡಿ. ಬಳಿಕ ಕುಕ್ಕರ್ ಬಿಸಿ ಮಾಡಿ ಅದಕ್ಕೆ ಎಣ್ಣೆ, ಜೀರಿಗೆ, ಹಿಂಗು, ಕರಿಬೇವು ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಹುರಿಯಿರಿ.

ಬಳಿಕ 2 ಹಸಿಮೆಣಸು, ಪಲಾವ್ ಎಲೆ, ಚಕ್ಕೆ , ಲವಂಗ, ಏಲಕ್ಕಿ, ಕಾಳು ಮೆಣಸು ಎಲ್ಲವನ್ನೂ ಸ್ವಲ್ಪ ಕುಟ್ಟಿ ಪುಡಿ ಮಾಡಿ ಸೇರಿಸಿ, ಹುರಿಯಿರಿ. ನಂತರ ಶೇಂಗಾ ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಕೆಂಪಾಗುವವರೆಗೂ ಹುರಿದು, ನೆನೆಸಿದ ಬಟಾಣಿ, ಬದನೆ ಹಾಕಿ ಹುರಿಯಿರಿ. ನಂತರ ಉಪ್ಪು, ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಈ ಮುಂಚೆ ರೆಡಿ ಮಾಡಿದ್ದ ಕಾಯಿತುರಿ, ಎಳ್ಳು, ಗಸಗಸೆ ಪುಡಿ, ಗರಂ ಮಸಾಲೆ, ಸ್ವಲ್ಪ ಬೆಲ್ಲ ಹಾಕಿ ಮಿಕ್ಸ್ ಮಾಡಿ.

ನಂತರ ಅಕ್ಕಿ, ನೀರು, ಕೊತ್ತೊಂಬರಿ ಸೊಪ್ಪು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿದರೆ ವಾಂಗಿ ಭಾತ್ ರೆಡಿ.

About The Author