Recipe: ಬೇಕಾಗುವ ಸಾಮಗ್ರಿ: 1 ಕಪ್ ತುಪ್ಪ, 1 ಕಪ್ ಗೋದಿ ಹಿಟ್ಟು, 1 ಕಪ್ ಸಕ್ಕರೆ, ಕೊಂಚ ಏಲಕ್ಕಿ ಪುಡಿ.
ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ತುಪ್ಪ ಹಾಕಿ, ಬಳಿಕ ಗೋದಿ ಹಿಟ್ಟು ಹಾಕಿ ಅದು ಡಾರ್ಕ್ ಬ್ರೌನ್ ಆಗುವವರೆಗೂ ಮಿಕ್ಸ್ ಮಾಡುತ್ತಲಿರಿ. ಮಂದ ಉರಿಯಲ್ಲಿ ಬಿಡದೇ ಕೈಯಾಡಿಸುತ್ತಿರಬೇಕು. ಇಲ್ಲವಾದಲ್ಲಿ, ಅದು ಗಂಟಾಗಲು ಶುರುವಾಗುತ್ತದೆ. 15ರಿಂದ 20 ನಿಮಿಷದ ಬಳಿಕ ಗೋದಿ ಮತ್ತು ತುಪ್ಪದ ಮಿಶ್ರಣ ಡಾರ್ಕ್ ಕಲರ್ ಆಗುತ್ತದೆ.
ಬಳಿಕ ಆ ಪ್ಯಾನ್ ಕೆಳಗಿರಿಸಿ, ಇನ್ನೊಂದು ಪ್ಯಾನ್ ಬಿಸಿ ಮಾಡಿ, ಅದರಲ್ಲಿ 1 ಕಪ್ ಸಕ್ಕರೆ, 3 ಕಪ್ ನೀರು ಹಾಕಿ ಚೆನ್ನಾಗಿ ಕುದಿಸಿ. ಸ್ವಲ್ಪ ಪಾಕ ಬರುವ ಹೊತ್ತಿಗೆ, ಅದಕ್ಕೆ ತುಪ್ಪ ಮತ್ತು ಗೋಧಿಯ ಮಿಶ್ರಣ ಸೇರಿಸಿ, ಗಟ್ಟಿಯಾಗುವವರೆಗೂ ಚೆನ್ನಾಗಿ ಮಿಕ್ಸ್ ಮಾಡಿ. ಶಿರಾ ಹದಕ್ಕೆ ಬಂದಾಗ, ಗೋಧಿ ಹಲ್ವಾ ರೆಡಿ ಎಂದರ್ಥ. ಇದಕ್ಕೆ ಏಲಕ್ಕಿ ಪುಡಿ ಸೇರಿಸಿ, ಗ್ಯಾಸ್ ಆಫ್ ಮಾಡಿ. ಹಬ್ಬದ ದಿನ, ಪೂಜೆಯ ಸಂದರ್ಭದಲ್ಲಿ ಇದನ್ನು ಪ್ರಸಾದವಾಗಿ ತಯಾರಿಸಬಹುದು.