ಮಂಡ್ಯದಲ್ಲಿ ಟಿಪ್ಪರ್ ಚಾಲಕನ ಅಜಾಗರೂಕತೆ – ದ್ವಿಚಕ್ರ ವಾಹನ ಸವಾರ ಬಲಿ

ಮಂಡ್ಯ : ನಗರದಲ್ಲಿ ಟಿಪ್ಪರ್ ಹರಿದು ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಮದ್ದೂರು ತಾಲೂಕಿನ ಕೆರೆಮೇಗಳದೊಡ್ಡಿ ಗ್ರಾಮದ ಶಿವಪ್ಪ ಕೆಲಸದ ಹಿನ್ನೆಲೆ ಮಂಡ್ಯ ನಗರಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುವಾಗ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಕೆರೆಮೇಗಳದೊಡ್ಡಿಯ ಶಿವಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಮಂಡ್ಯ ಪೊಲೀಸರು ಟಿಪ್ಪರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದು ಮೃತ ಸವಾರ ಶಿವಪ್ಪ ಕುಟುಂಬಸ್ಥರ ರೋಧನ ಮುಗಿಲುಮುಟ್ಟಿದೆ.

ಕರ್ನಾಟಕ ಟಿವಿ.ನೆಟ್, ಮಂಡ್ಯ

About The Author