Wednesday, November 19, 2025

Latest Posts

ನ.7 ರಂದು ಪೌರಕಾರ್ಮಿಕರ ಮಕ್ಕಳ ವಿದ್ಯಾರ್ಥಿ ದಿನ ಎಂದು ಘೋಷಿಸಲು ಸರ್ಕಾರಕ್ಕೆ ಶಿಫಾರಸ್ಸು: ಎಂ ಶಿವಣ್ಣ

- Advertisement -

ಸಂವಿಧಾನ ಶಿಲ್ಪಿ ಡಾ: ಬಿ.ಆರ್.ಅಂಬೇಡ್ಕರ್ ಅವರು ನವೆಂಬರ್ 7 ರಂದು ಶಾಲೆಗೆ ದಾಖಲಾಗಿದ್ದು, ಈ ದಿನ ಮಂಡ್ಯ ಜಿಲ್ಲೆಯಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಸಂತೋಷದ ವಿಷಯವಾಗಿದೆ. ನವೆಂಬರ್ 7 ರಂದು ಪೌರಕಾರ್ಮಿಕರ ಮಕ್ಕಳ ವಿದ್ಯಾರ್ಥಿ ದಿನ ಎಂದು ಘೋಷಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ.ಶಿವಣ್ಣ (ಕೋಟೆ) ಅವರು ತಿಳಿಸಿದರು.

ಕಾಲುಬಾಯಿ ರೋಗ ನಿರ್ಮೂಲನಾ ಲಸಿಕಾ ಅಭಿಯಾನಕ್ಕೆ ಸಚಿವ ಡಾ.ನಾರಾಯಣಗೌಡ ಚಾಲನೆ..

ಅವರು ಇಂದು ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಎಂ.ಎಸ್. ಕಾಯ್ದೆ 2013 ರಂತೆ ಸಫಾಯಿ ಕರ್ಮಚಾರಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಜಿಲ್ಲೆಗಳಲ್ಲಿ ಸಫಾಯಿ ಕರ್ಮಚಾರಿಗಳ ಮಕ್ಕಳ ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.

ಪೌರಕಾರ್ಮಿಕರ ಮಕ್ಕಳು ತಲಾತಲಾಂತರದಿಂದ ಅವರ ಕುಟುಂಬ ನಡೆಸುತ್ತಿರುವ ಪೌರಕಾರ್ಮಿಕ ಕೆಲಸವನ್ನು ಮುಂದುವರಿಸಿಕೊಂಡು ಹೋಗುವುದರ ಬದಲು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ. ಪೌರಕಾರ್ಮಿಕ ವೃತ್ತಿಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಉತ್ತಮ ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಇಂದು ಎಸ್.ಎಸ್.ಎಲ್.ಸಿ ಪ್ರತಿಭಾನ್ವಿತ ಮಕ್ಕಳನ್ನು ಮಾತ್ರ ಸನ್ಮಾನಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪೌರಕಾರ್ಮಿಕರ ಎಸ್.ಎಸ್.ಎಲ್.ಸಿಯಿಂದ ಮೇಲ್ಪಟ್ಟು ಎಲ್ಲಾ ಹಂತದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳನ್ನು ಸನ್ಮಾಸಿಲಾಗುವುದು ಎಂದರು.

ಮಜ್ಜಿಗೆಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ…!

ಪೌರಕಾರ್ಮಿಕರು ನಿರ್ವಹಿಸುವಂತಹ ಕೆಲಸ ಬಹಳ ಕಷ್ಟಕರವಾಗಿದ್ದು, ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳು ಗುತ್ತಿಗೆ ಹಾಗೂ ನೇರ ಪಾವತಿಯಲ್ಲಿ ಕಾರ್ಯನಿರ್ವಹಿಸುವಂತಹ ಕಾರ್ಮಿಕರನ್ನು ಖಾಯಂಗೊಳಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡು ಮೊದಲ ಹಂತದಲ್ಲಿ 11,133 ಪೌರಕಾರ್ಮಿಕರನ್ನು ಖಾಯಂಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. ಇನ್ನುಳಿದ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಉನ್ನತ ಅಧಿಕಾರಿಗಳು, ಮುಖಂಡರನ್ನೊಳಗೊಂಡ ಸಮಿತಿಯನ್ನು ಸಹ ರಚಿಸಿದ್ದಾರೆ. ಸಮಿತಿಗಳು ಸಭೆ ನಡೆಸಿ ಡಿಸೆಂಬರ್ ಅಂತ್ಯದೊಳಗೆ ಉಳಿದವರನ್ನು ಖಾಯಂಗೊಳಿಸುವ ಕೆಲಸ ನಡೆಸಲಾಗುತ್ತಿದೆ ಎಂದರು.

ಪೌರಕಾರ್ಮಿಕರಿಗೆ ಉತ್ತಮ ಶಿಕ್ಷಣ, ಕೌಶಲ್ಯ, ವಸತಿ ಸೌಲಭ್ಯ ಒದಗಿಸಲು ಚರ್ಚೆ ನಡೆಸಲಾಗುತ್ತಿದೆ. ಇತ್ತೀಚೆಗೆ ಮಲ್ಲಮ್ಮ ಎಂಬ ಪೌರಕಾರ್ಮಿಕ ಮಹಿಳೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಮಲ್ಲಮ್ಮ ಅವರು ಒಂದು ದಿನ ಸಹ ರಜೆ ಪಡೆಯದೆ ಪ್ರಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದಾರೆ. ಅವರ ಕಾರ್ಯನಿರ್ವಹಣೆ ಎಲ್ಲರಿಗೂ ಮಾದರಿ ಎಂದರು.

ಪೌರಕಾರ್ಮಿಕರನ್ನು ಅಧಿಕಾರಿಗಳು ಗೌರವಯುತವಾಗಿ ನಡೆಸಿಕೊಳ್ಳಿ. ಪೌರಕಾರ್ಮಿಕರು ಸಹ ಅಧಿಕಾರಿಗಳಿಂದ ಗೌರವ ಪಡೆಯುವ ರೀತಿ ಕೆಲಸ ನಿರ್ವಹಿಸಿ. ಮದ್ಯಪಾನ ಮುಂತಾದ ದುಶ್ಚಟಗಳಿಗೆ ಬಲಿಯಾಗಬೇಡಿ ಎಂದರು.

ಕಳೆದ ಒಂದು ತಿಂಗಳ ಹಿಂದೆ 200 ಪೌರಕಾರ್ಮಿಕ ಹೆಣ್ಣು ಮಕ್ಕಳಿಗೆ 74,000/- ರೂ ಮೌಲ್ಯದ ಎಲೆಕ್ಟಾçನಿಕ್ ಸ್ಕೂಟಿಯನ್ನು ಬೆಂಗಳೂರಿನಲ್ಲಿ ನೀಡಲಾಯಿತು. ಇದು ಸಂತೋಷದಾಯಕ ವಿಷಯವಾಗಿದೆ. ರಾಜ್ಯದಲ್ಲಿ 6 ರಿಂದ 7 ಸಾವಿರ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಿದ್ದು, ಅವರ ಪುರ್ನಾವಸತಿ ಕೆಲಸಗಳು ನಡೆಯುತ್ತಿದೆ ಎಂದರು.

ಗರುಡ ಪುರಾಣದ ಪ್ರಕಾರ ಈ 9 ಕೆಲಸ ಮಾಡುವವರು ಯಾವಾಗಲೂ ಸುಖಿಯಾಗಿರುತ್ತಾರೆ- ಭಾಗ 2

ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು. ವಿದ್ಯೆ ಮತ್ತು ಕೌಶಲ್ಯ ನಿಗಧಿತ ವರ್ಗದವರಿಗೆ ಸೀಮಿತವಾಗಿಲ್ಲ. ಜ್ಞಾನರ್ಜನೆಗೆ ಹೆಚ್ಚಿನ ಒತ್ತು ನೀಡಿ ಎಂದು ಮಕ್ಕಳ ರಕ್ಷಣಾ ಘಟಕದ ರಾಜ್ಯಾಧ್ಯಕ್ಷ ನಾಗಣ್ಣ ಗೌಡ ಅವರು ತಿಳಿಸಿದರು.

ಪೌರಕಾರ್ಮಿಕ ಕೆಲಸ ಸದಾ ನಿರಂತರವಾಗಿ ನಡೆಯುವ ಕೆಲಸ. ಕೆಲಸದ ಬಗ್ಗೆ ಹಾಗೂ ಕೆಲಸ ಮಾಡುವವರ ಬಗ್ಗೆಯೂ ಸದಾ ಸಮಾಜದಲ್ಲಿ ಗೌರವವಿರಬೇಕು. ಪೌರಕಾರ್ಮಿಕರು ಹಾಗೂ ಮನೆಯಲ್ಲಿ ಕೆಲಸ ಮಾಡುವ ತಯಾಂದಿರು ಯಾವುದೇ ರಜೆ ಪಡೆಯದೇ ಪ್ರತಿದಿನ ಕೆಲಸ ಮಾಡುವವರು ಅವರ ಬಗ್ಗೆ ಸದಾ ಗೌರವವಿರಲಿ ಎಂದರು.

ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗದ ಮಾಜಿ ಸದಸ್ಯ ಜಗದೀಶ್ ಹಿರೇಮಣಿ ಅವರು ಮಾತನಾಡಿ ಮಾನ್ಯ ಪ್ರಧಾನ ಮಂತ್ರಿಗಳು ಪೌರಕಾರ್ಮಿಕರ ಪಾದಪೂಜೆ ಮಾಡಿದ ನಂತರ ಪೌರಕಾರ್ಮಿಕರ ಕೆಲಸ ಮಾಡುವವರ ಬಗ್ಗೆ ಗೌರವ ಹೆಚ್ಚಿದೆ. ಅವರನ್ನು ಎಲ್ಲಾ ರಂಗಗಳಲ್ಲಿ ಗುರುತಿಸಿ ಅವರಿಗೆ ಕನ್ನಡ ರಾಜ್ಯೋತ್ಸವ ಸೇರಿದಂತೆ ಇನ್ನಿತರ ಪ್ರಶಸ್ತಿಗಳನ್ನು ಸಹ ನೀಡಲಾಗುತ್ತಿದೆ ಎಂದರು.

ಪೌರ ಕಾರ್ಮಿಕರ ಸ್ವಭಿಮಾನ ಹೆಚ್ಚಿಸಿ ಗೌರವ ನೀಡುವ ನಿಟ್ಟಿನಲ್ಲಿ ಹಾಗೂ ಪೌರಕಾರ್ಮಿಕರ ಹುದ್ದೆ ಖಾಯಂ ಮಾಡಲು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಬಹಳಷ್ಟು ಸಭೆಗಳನ್ನು ನಡೆಸಿದ್ದಾರೆ ಎಂದರು. ಪೌರ ಕಾರ್ಮಿಕರು ಸಮಾಜದ ಮುಖ್ಯವಾಹಿನಿಗೆ ತರಲು ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ: ಎಚ್ ಎನ್ ಗೋಪಾಲ ಕೃಷ್ಣ ಅವರು ತಿಳಿಸಿದರು.

ಪೌರಕಾರ್ಮಿಕರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಯೋಜನೆಗಳನ್ನು ಜಿಲ್ಲಾಡಳಿತ ಪ್ರಮಾಣಿಕವಾಗಿ ಅನುಷ್ಠಾನ ಮಾಡಲಾಗುವುದು. ಜಿಲ್ಲಾಡಳಿತ ಪೌರಕಾರ್ಮಿಕರ ವಿದ್ಯಾಭ್ಯಾಸ, ವಸತಿ ಸೇರಿದಂತೆ ಮುಂತಾದ ವಿಷಯಗಳ ಬಗ್ಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಗಮನಕ್ಕೆ ತನ್ನಿ ಎಂದರು.

ಆರೋಗ್ಯ ಮತ್ತು ಅಡುಗೆ ಸಲಹೆಗಳು..ಭಾಗ -1

ಪೌರಕಾರ್ಮಿಕ ಹುದ್ದೆಯು ಗೌರವಯುತ ಹುದ್ದೆ. ಇಂದು 38 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಳವಾಗಲಿ. ಜಿಲ್ಲಾಡಳಿತದ ವತಿಯಿಂದ ಮುಂದಿನ ದಿನಗಳಲ್ಲಿ ಪ್ರತಿಭಾವಂತ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಜೊತೆ, ಪಿ.ಯು.ಸಿ, ಪದವಿ ಹಾಗೂ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.

ನಗರ ಸ್ಥಳೀಯ ಸಂಸ್ಥೆಯ ಪ್ರತಿಭಾವಂತ ಪೌರಕಾರ್ಮಿಕ ಮಕ್ಕಳಾದ ವಿನೋದ್ ಜಿ, ವಿನಯ ಸಿ, ಗೌರಿ, ಸಂಧ್ಯಾ ಸಿ, ವೀಣಾ ಎಂ.ಪಿ, ಹೇಮಾವತಿ ಎಂ, ಪಿ. ಅಕ್ಷಯ, ಕವ್ಯಾ ಜಿ, ಮೋಹನ್ ಪಿ, ಮಹಾಲಕ್ಷ್ಮಿ ಕೆ, ನಿತಿನ್ ಕೆ ಸಿ, ವಿಕಾಸ್ ಕೆ.ಆರ್, ಸಂಧ್ಯಾ ಆರ್, ನಿಶಾ ಕೆ, ಕವನ ಎ, ಪದ್ಮವತಿ, ದಿವಾಕರ ಆರ್, ಲಿಖಿತ್ ಟಿ. ಆರ್, ನವೀನ್ ಎಸ್, ಪಲ್ಲವಿ ಎಸ್, ವಿನಯ್ ಎಸ್, ಪ್ರಜ್ವಲ್ ಎಸ್, ಚಂದ್ರಿಕ ಎನ್, ಒಟ್ಟು 23 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಗ್ರಾಮೀಣ ಭಾಗದ ಸ್ವಚ್ಛಾತಾಗಾರರ ಪ್ರತಿಭಾವಂತ ಮಕ್ಕಳಾದ ಗೌತಮ್ ಆರ್, ಕವ್ಯಾಶ್ರೀ ಎಸ್, ಅಪೇಕ್ಷ ಎಂ.ಎನ್, ಗೀತಾಂಜಲಿ, ಎಂ.ಜಿ ಯೋಗೇಶ್, ಚಂದನ, ಹೇಮ ಕೆ, ಅಭಿಲಾಷ ಬಿ.ಎಸ್, ಪುಷ್ಪ ಕೆ, ಹೇಮಂತ್ ಕುಮಾರ್, ಅರುಣ್ ಕುಮಾರ್, ಕೀರ್ತನಾ, ಜ್ಯೋತಿ, ಕಾವೇರಿ ಸಿ.ಎಂ ಹಾಗೂ ರಮ್ಯ ಹೆಚ್. ಎನ್ ಒಟ್ಟು 15 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ರೈತರು ಫಸಲ್ ಭಿಮಾ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಿ: ಡಾ: ಎಚ್.ಎನ್.ಗೋಪಾಲಕೃಷ್ಣ

ಮ್ಯಾನುಯಲ್ ಸ್ಕಾö್ಯವೆಂಜಿAಗ್ ನಿರ್ಮೂಲನೆ ಬಗ್ಗೆ ನಾಟಕ ಪ್ರದರ್ಶನ ನಡಯಿತು. ಐರಾವತ ಯೋಜನೆಯಡಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ನಿಗಮದ ವತಿಯಿಂದ ಇಬ್ಬರೂ ಫಲಾನುಭವಿಗಳಿಗೆ ಕಾರ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಡ್ಯ ನಗರಸಭೆ ಅಧ್ಯಕ್ಷ ಹೆಚ್.ಎಸ್. ಮಂಜು ಉಪಾಧ್ಯಕ್ಷೆ ಇಷ್ರತ್ ಫಾತೀಮಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಂಗೇಗೌಡ, ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕುಮಾರಸ್ವಾಮಿ, ಮುಖಂಡರಾದ ಕೃಷ್ಣ, ನಂಜುಂಡ ಮೌರ್ಯ, ಎನ್.ಆರ್.ಚಂದ್ರಶೇಖರ್, ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

- Advertisement -

Latest Posts

Don't Miss