National Political News: ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ವಂಚನೆ ಕೇಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಅದಾನಿ ಯಾವಾಗ ಬೇಕಾದ್ರೂ ಅರೆಸ್ಟ್ ಆಗುವ ಎಲ್ಲ ಸಾಧ್ಯತೆ ಇದೆ. ಹಾಗಾಗಿ ಅದಾನಿ ಗ್ರೂಪ್‌ನಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರರು ಸದ್ಯ ಆತಂಕದಲ್ಲಿದ್ದಾರೆ.
ಈ ಮಧ್ಯೆ ಕಿನ್ಯ ಸರ್ಕಾರ ಸೇರಿ ಹಲವು ಕಂಪನಿಗಳು ಅದಾನಿ ಗ್ರೂಪ್ ಜೊತೆಗಿನ ಹಲವು ಒಪ್ಪಂದಗಳನ್ನು ವಾಪಸ್ ಪಡೆದಿದೆ. ತೆಲಂಗಾಣ ಸರ್ಕಾರ ಕೂಡ ಅದಾನಿ ಗ್ರೂಪ್‌ನಲ್ಲಿ ಹೂೠಿಕೆ ಮಾಡಿದ್ದ 100 ಕೋಟಿ ರೂಪಾಯಿ ಹೂಡಿಕೆ ಒಪ್ಪಂದವನ್ನು ರದ್ದುಗೊಳಿಸಿದೆ.
ಹೈದರಾಬಾದ್‌ನಲ್ಲಿ ವಿಶ್ವವಿದ್ಯಾಲಯವೊಂದರ ನಿರ್ಮಾಣಕ್ಕಾಗಿ 100 ಕೋಟಿ ರೂಪಾಯಿ ಹೂಡಿಕೆ ಮಾಡಲು ತೆಲಂಗಾಣ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಇದೀಗ ಅದಾನಿ ವಿರುದ್ಧ ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ, ಹೂಡಿಕೆ ಒಪ್ಪಂದ ಕ್ಯಾನ್ಸಲ್ ಮಾಡಿರುವ ಬಗ್ಗೆ ತೆಲಂಗಾಣ ಸಿಎಂ ರೇವಂತ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಸೋಲಾರ್ ಎನರ್ಜಿ ಕಾಂಟ್ರ್ಯಾಕ್ಟ್ ಪಡೆಯಲು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಗೌತಮ್ ಅದಾನಿ, ಸೈರಿಲ್, ಸಾಗರ್ ಅದಾನಿ, ವಿನೀತ್ ಜೈನ್, ರಂಜೀತ್ ಗುಪ್ತಾ, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ, ರೂಪೇಶ್ ಅಗರ್ವಾಲ್ ಎಂಬುವವರ ವಿರುದ್ಧ ಸದ್ಯ ಪ್ರಕರಣ ದಾಖಲಾಗಿದೆ.
ಅದಾನಿ ಸೇರಿ ಇನ್ನಿತರರು ಸೋಲಾರ್ ಎನರ್ಜಿ ಕಾಂಟ್ರಾಕ್ಟ್ ಪಡೆಯಲು ಭಾರತೀಯ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್‌ಗೂ ಅಧಿಕ ಮೊತ್ತದಷ್ಟು ಲಂಚ ನೀಡಿದ್ದಾರೆಂಬ ಆರೋಪವಿದೆ. ಅಲ್ಲದೇ, ವಿದೇಶಿ ಹೂಡಿಕೆದಾರರಿಂದ ಈ ವಿಷಯ ಮುಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಹಾಗಾಗಿ ಅದಾನಿ ಮತ್ತು 7 ಜನರ ವಿರುದ್ಧ ಅಮೆರಿಕ ಕೋರ್ಟ್ ಅರೆಸ್ಟ್ ವಾರಂಟ್ ಜಾರಿ ಮಾಡಿದೆ.