Sunday, September 8, 2024

Latest Posts

ರಿಲೀಸ್ ಆಯ್ತು ಅಪ್ಪು ಕೊನೆಯ ಸಿನಿಮಾದ ಮೊದಲ ಸಾಂಗ್

- Advertisement -


ಇವತ್ತು ನಾಡಿಗೆ ಮಹಾಶಿವರಾತ್ರಿಯಾದ್ರೆ ಅಪ್ಪು ಅಭಿಮಾನಿಗಳಿಗೆ ಅಸಲಿ ಹಬ್ಬ, ಅಪ್ಪು ಇಲ್ಲ ಅನ್ನೋದನ್ನು ಇವತ್ತಿಗೂ ಒಪ್ಪಿಕೊಳ್ಳದ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೊದಲ ಟ್ರೇಡ್‌ಮಾರ್ಕ್ ಸಾಂಗ್ ಕೇಳಿ ಥ್ರಿಲ್ ಆಗಿದ್ದಾರೆ. ಚರಣ್‌ರಾಜ್ ಸಂಗೀತದ ಡಾನ್ಸಿಂಗ್ ನಂಬರ್‌ನ್ನು ಶೇಖರ್ ಮಾಸ್ಟರ್ ಕೊರಿಯೋಗ್ರಾಫ್ ಮಾಡಿದ್ದು ಅಪ್ಪು ಸ್ಟೆಪ್ ಝಲಕ್‌ಗಳು ಮಾತ್ರ ಇಲ್ಲಿದ್ದು ಅವ್ರ ಫ್ಯಾನ್ಸ್ಗಳಾಗಿ ರಚಿತಾರಾಮ್, ಆಶಿಕಾ ರಂಗನಾಥ್, ಶ್ರೀಲೀಲಾ, ಚಂದನ್‌ಶೆಟ್ಟಿ ಸೇರಿ ಹಲವರು ಸ್ಟೆಪ್ ಹಾಕಿದ್ದು ರ‍್ಯಾಪ್ ಶೈಲಿಯ ಸಾಂಗ್ ಮಿಲಿಯನ್ ವೀವ್ಸ್ನತ್ತ ಮುನ್ನುಗ್ಗಿದೆ.
ಬೆಂಗಳೂರಿನ ವಿಜಯನಗರದ ಬಿಜಿಎಸ್ ಕ್ರೀಡಾಂಗಣದಲ್ಲಿ ಈ ಟ್ರೇಡ್‌ಮಾರ್ಕ್ ಹಾಡನ್ನು ಅಭಿಮಾನಿಗಳು ಬಿಡುಗಡೆ ಮಾಡಿ ಸಂಭ್ರಮಿಸಿದ್ರು. ಕನ್ನಡ ಮಾತ್ರ ಅಲ್ಲ ಐದು ಭಾಷೆಗಳಲ್ಲಿ ರಿಲೀಸ್ ಆಗಿರೋ ಟ್ರೇಡ್‌ಮಾರ್ಕ್ ಸಾಂಗ್ ಲಿರಿಕ್ಸ್ ಸ್ವತಃ ನಿರ್ದೇಶಕ ಚೇತನ್ ಬರೆದಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಾಡಿಗೆ ಎಂ.ಸಿ ವಿಕ್ಕಿ, ಅದಿತಿ ಸಾಗರ್, ಚಂದನ್‌ಶೆಟ್ಟಿ, ಶರ್ಮಿಳಾ ಜೊತೆ ಯುವರಾಜ್‌ಕುಮಾರ್ ಧ್ವನಿಗೂಡಿಸಿದ್ದು ಅಪ್ಪು ಮೇಲಿನ ಅಭಿಮಾನದ ಹಾಡು ಇದು ಅಂತ ಸ್ಯಾಂಡಲ್‌ವುಡ್ ಚಿತ್ರಪ್ರೇಮಿಗಳು ಮೆಚ್ಚಿಕೊಳ್ತಿದ್ದಾರೆ.
ಮಾರ್ಚ್ ೧೭ಕ್ಕೆ ಜೇಮ್ಸ್ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕೆ ಮಹಾಶಿವರಾತ್ರಿಯ ದಿನ ಮಹಾ ಓಪನಿಂಗ್ ಸಿಕ್ಕಿದ್ದು, ಇವತ್ತಿಂದಾನೇ ಜಾತ್ರೆ ಶುರು ಅಂತ ಅಭಿಮಾನಿಗಳು ಅಪ್ಪು ಧ್ಯಾನ ಶುರು ಮಾಡಿದ್ದಾರೆ. ಪವರ್‌ಸ್ಟಾರ್ ಹುಟ್ಟಿದ ದಿನಕ್ಕೆ ಜೇಮ್ಸ್ ರಿಲೀಸ್ ಆಗ್ತಿರೋದಕ್ಕೆ ದೊಡ್ಡ ತಯಾರಿಯನ್ನು ಸ್ಯಾಂಡಲ್‌ವುಡ್ ಮಾಡಿಕೊಳ್ತಿದ್ರೆ, ಅಭಿಮಾನಿಗಳು ಈಗಲೇ ನಿದ್ದೆ ಬಿಟ್ಟು ಅಪ್ಪು ದರ್ಶನಕ್ಕಾಗಿ ಕಾತರಿಸುತ್ತಿದ್ದಾರೆ. ಸದ್ಯ ಚಿತ್ರಕ್ಕೆ ಶಿವರಾಜ್‌ಕುಮಾರ್ ಡಬ್ಬಿಂಗ್ ಮಾಡಿದ್ದು ಅವರದ್ದೇ ಧ್ವನಿ ಇಡೀ ಚಿತ್ರದಲ್ಲಿರಲಿದೆ. ಒಟ್ಟಾರೆ ಅಪ್ಪು ಅಗಲಿ ನಾಲ್ಕು ತಿಂಗಳಾದ್ರೂ ಕನ್ನಡಿಗರಿಗೆ ಅಪ್ಪು ಅಜರಾಮರ

- Advertisement -

Latest Posts

Don't Miss