Tuesday, April 15, 2025

Latest Posts

ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಮಾಡಬಾರದು: ಡಿಸಿಎಂ ಡಿಕೆಶಿ

- Advertisement -

Political News: ನೆಲಮಂಗಲದಲ್ಲಿ ಇಂದು 869 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಡಿಸಿಎಂ ಡಿಕೆಶಿ, ಕಾಂಗ್ರೆಸ್‌ ಸರ್ಕಾರ ಬಡವರ ಮೇಲಲ್ಲ, ಬದಲಾಗಿ ಬಡತನದ ವಿರುದ್ಧ ಹೋರಾಟ ಮಾಡುತ್ತಿದೆ. ಕೆಲವು ಬಿಜೆಪಿ ನಾಯಕರು ಕಾಂಗ್ರೆಸ್‌ ಗ್ಯಾರಂಟಿಗಳನ್ನು 420 ಗ್ಯಾರಂಟಿ ಅಂದಿದ್ದರು. ಅದು ನಕಲಿ ಗ್ಯಾರಂಟಿಗಳೇ ಆಗಿದ್ದರೆ ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರಿಗೆ ʼಉಚಿತ ಬಸ್‌ನಲ್ಲಿ ಓಡಾಡಬೇಡಿ, ಉಚಿತ ವಿದ್ಯುತ್‌ ಪಡೆಯಬೇಡಿ, ಗೃಹಲಕ್ಷ್ಮಿ ಯೋಜನೆಯ ಹಣ ತೆಗೆದುಕೊಳ್ಳಬೇಡಿʼ ಎಂದು ಹೇಳಲಿ ಎಂದು ಡಿಕೆಶಿ ಸವಾಲ್ ಹಾಕಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಇತ್ತೀಚೆಗೆ ಒಂದು ವಿಧೇಯಕಕ್ಕೆ ಅನುಮೋದನೆ ನೀಡಿದೆ. ಆ ಪ್ರಕಾರ ದೊಡ್ಡ ದೊಡ್ಡ ದೇವಸ್ಥಾನಗಳಿಗೆ ಬರುತ್ತಿರುವ ಶೇ. 10ರಷ್ಟು ಹಣವನ್ನು ಪುಟ್ಟ ಊರುಗಳಲ್ಲಿರುವ ದೇವಸ್ಥಾನಗಳಿಗೆ ಕೊಡಲಾಗುತ್ತಿದೆ. ಪುರೋಹಿತರಿಗೂ ನೆರವು ನೀಡಲಾಗುತ್ತಿದೆ. ಆದರೆ ಬಿಜೆಪಿ ಅದನ್ನೂ ವಿರೋಧಿಸುತ್ತಿದೆ. ಇನ್ಯಾವ ಸೀಮೆಯ ಹಿಂದೂಗಳು ಇವರು? ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಮಾಡಬಾರದು ಎಂದು ತಿಳಿಸಿದೆ.

ಕಾಂಗ್ರೆಸ್‌ ಸರ್ಕಾರ ಬಂದಾಗೊಮ್ಮೆ ಬೆಂಕಿ ಹಚ್ಚುವ ಕೆಲಸ ನಡೆದಿದೆ-ಶಾಸಕ ಟೆಂಗಿನಕಾಯಿ ಕಿಡಿ

2ನೇಯ ಬಾರಿಗೆ ಪಾಕ್ ಪ್ರಧಾನಿಯಾಗಿ ಆಯ್ಕೆಯಾದ ಶೆಹಬಾಜ್ ಷರೀಫ್

ಜಮ್ಮು-ಕಾಶ್ಮೀರದಲ್ಲಿ ಧಾರಾಕಾರ ಮಳೆ: ಮನೆ ಕುಸಿದು ನಾಲ್ವರ ಸಾವು

- Advertisement -

Latest Posts

Don't Miss