Hubballi News: ಹುಬ್ಬಳ್ಳಿ: ಗ್ಯಾರಂಟಿ ವಿಚಾರದಲ್ಲಿ ದಿನಾ ಒಂದು ಕಂಡೀಷನ್ ಹಾಕಿ. ಜನರಿಗೆ ಮೋಸ ಮಾಡೋ ಕೆಲಸ ಮಾಡ್ತೀದೀರಿ. ಅದಕ್ಕೆ ಮೋದಿ ,ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸೋ ಕೆಲಸವನ್ನು ಕಾಂಗ್ರೆಸನವರು ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಏನೆ ಆದ್ರೂ ಮೋದಿಗೆ ಬೈದು ಬಿಡೋದು. ಜನರಿಗೆ ಮಾತು ಕೊಟ್ಟೀದಿರಿ, ಅಕ್ಕಿ ಕೊಡಿ. ಭಾರತ ಸರ್ಕಾರ ಇಡೀ ದೇಶದಲ್ಲಿ ಐದು ಕೆಜಿ ಅಕ್ಕಿ ಕೊಡ್ತಿದೆ. ಕರ್ನಾಟಕದಲ್ಲೂ ನಾವು ಐದು ಕೆಜಿ ಅಕ್ಕಿ ಕೊಡ್ತಿದ್ದೇವೆ. ಇದು ಸಿದ್ದರಾಮಯ್ಯನವರ ಅಕ್ಕಿ ಅಲ್ಲ . ಹತ್ತು ಕೆಜಿ ಅವರು ಕೊಡ್ತೀನಿ ಅಂದಿದ್ರು, ವೋಟ್ ತಗೋಬೇಕಾದ್ರೆ ಕೇಂದ್ರದ ಅಕ್ಕಿ ಬಗ್ಗೆ ಸ್ಪಷ್ಟಪಡಿಸಿಲ್ಲ.
ಇದೀಗ ಅಕ್ಕಿ ಕೊಡ್ತಿಲ್ಲ ಅಂತಾ ಹೇಳ್ತಿದಾರೆ. ಭಾರತ ಸರ್ಕಾರ ಅಕ್ಕಿ ಎಲ್ಲಿ ಕೊಡ್ತಿದೆ. ಉತ್ತರ ಪ್ರದೇಶ,ಮದ್ಯಪ್ರದೇಶ ಅಕ್ಕಿ ಕೇಳ್ತೀದಾರೆ,ನಾವ ಅಕ್ಕಿ ಕೊಡ್ತಿಲ್ಲ. ಇಷ್ಟು ಅಕ್ಕಿ ಸ್ಟಾಕ್ ಇರಬೇಕು ಅನ್ನೋ ನಿಯಮ ಇದೆ. ಹಾಗಾಗಿ ಅಕ್ಕಿ ಸ್ಟಾಕ್ ಇರಬೇಕು. ಭಾರತ ಸರ್ಕಾರ ಕೊಟ್ರೆ ನಾವ ಕೊಡ್ತೀವಿ ಅಂತಾ ಹೇಳಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.
ಸಾಮಾಜಿಕ ಜಾಲತಾಣದ ಮೇಲೆ ಸರ್ಕಾರದ ಹದ್ದಿನ ಕಣ್ಣು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸೋಶಿಯಲ್ ಮೀಡಿಯಾದಲ್ಲಿ ಮೋದಿ ಅವರ ಬಗ್ಗೆ ಬಾಯಿಗೆ ಬಂದಹಾಗೆ ಬೈದಿದ್ದಾರೆ. ಸರ್ಕಾರದ ವಿರುದ್ದ ಮಾತಾಡಿದ್ರೆ ಕ್ರಮ ಅನ್ನೋದು ಸರ್ವಾಧಿಕಾರದ ಪ್ರತೀಕ. ಇದೆಲ್ಲ ನಡೆಯಲ್ಲ. ಇಂದಿರಾಗಾಂಧಿ ಎಮರ್ಜೆನ್ಸಿ ಕಾಲ ಹೋಗಿದೆ ಸಿದ್ದರಾಮಯ್ಯನವರೇ. ಇದು ಸಿದ್ದರಾಮಯ್ಯನವರ ಸರ್ವಾಧಿಕಾರಿ,ಹಿಟ್ಲರ್ ಪ್ರವೃತಿ. ಇದನ್ನು ಬಿಡಿ, ಜನ ನಿಮಗೆ ತೀರ್ಪು ಕೊಟ್ಟಿದ್ದಾರೆ.. ವಿನಮೃತೆಯಿಂದ ಮಾತಾಡಿ ಎಂದರು.
EVM ಹ್ಯಾಕ್ ವಿಚಾರಕ್ಕೆ ಜಾರಕಿಹೊಳಿ ಹೇಳಿಕೆ ಜೋಕ್ ಎಂದ ಅವರು, ಮಂತ್ರಿಗಳೆಲ್ಲ ಹೀಗೆ ಮಾತಾಡ್ತಾರೆ ಅಂದ್ರೆ ಹೇಗೆ. ಸೀರಿಯಸ್ ಇಲ್ಲದೆ ಅಕ್ಕಿ ವಿಷಯದಲ್ಲಿ ಮಾತಾಡ್ತಾರೆ, ಈ ವಿಷಯದಲ್ಲೂ ಹಾಗೆ ಮಾತಾಡ್ತೀದಾರೆ. ಜಾರಕಿಹೊಳಿ EVM ಬಗ್ಗೆ ಮಾತಾಡ್ತಾರೆ. ಚುನಾವಣಾ ಆಯೋಗ ಜಾರಕಿಹೊಳಿ ಮೇಲೆ ಕ್ರಮ ಕೈಗೊಳ್ಳಬೇಕು. ಚುನಾವಣೆ ಆಯೋಗ EVM ಫೇಲ್ ಆಗೋ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ನಾನು ಚುನಾವಣೆ ಆಯೋಗಕ್ಕೆ ಜಾರಕಿಹೊಳಿ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯ ಮಾಡ್ತೀನಿ. ಸುಮ್ನೆ ಹುಚ್ಚ ಹುಚ್ಚರ ತರಹ ಮಾತಾಡಬೇಡಿ. ಸಿದ್ದರಾಮಯ್ಯ,ಜಾರಕಿಹೊಳಿ ಅವರೇ 135 ಸೀಟ್ ಸಿಕ್ಕಿದ್ದು EVM ನಿಂದ ಇದು ನೆನಪಿರಲಿ ಎಂದರು.
ಎಲ್ಲರೂ ಮನಸಿಗೆ ಬಂದಂತೆ ಅಕ್ಕಿ ಕೇಳ್ತೀದಾರೆ. ಕೇಂದ್ರದ ಗೋಡೌನ್ ಖಾಲಿಯಾದ್ರೆ,ಆಹಾರ ಭದ್ರತೆ ಪ್ರಶ್ನೆ ಬರುತ್ತೆ. ಮನಸಿಗೆ ಬಂದಂತೆ ಘೋಷಣೆ ಮಾಡಿದ್ರೆ ಸರಿ ಇರಲ್ಲ. ಯಾರೋ ಒಬ್ಬ ಕೆಳಮಟ್ಟದ ಅಧಿಕಾರಿ ಬರೆದಿರಬಹದು. ಈ ರೀತಿ ಅಪಪ್ರಚಾರ ಮಾಡೋದು ಸರಿ ಅಲ್ಲ. ಜನ ನಿಮ್ಮನ್ನು ಜೋಕರ್ ಎಂದು ಪರಿಗಣಿಸಬಾರದು ಎಂದರು.
ಬಸ್ ಗಳಲ್ಲಿ ಪುರಷ ಪ್ರಯಾಣಿಕರಿಗೆ ಕುತಕೊಳೋಕೆ ಜಾಗಇಲ್ಲ. ಯೋಜನೆ ಘೋಷಣೆ ಮಾಡಿದ್ದಾರೆ,ಬಸ್ ಇಲ್ಲ. ಓವರ್ ಲೋಡ್ ನಿಂದ ಅಪಘಾತ ಆಗ್ತಿದೆ. ಹೊಸ ಬಸ್ ಖರೀದಿಮಾಡಿ ಎಂದರು. ಶಂಕರಪಾಟೀಲ್ ಮುನೇನಕೊಪ್ಪ ಕಾಂಗ್ರೆಸ್ ಗೆ ಹೋಗಲ್ಲ. ಅವರು ಭಾರತೀಯ ಜನತಾ ಪಾರ್ಟಿ ಕೆಳಮಟ್ಟದ ಕಾರ್ಯಕರ್ತರು. ಅವರು ಕಾಂಗ್ರೆಸ್ ಗೆ ಹೋಗಲ್ಲ,ಅವರು ನನಗೆ ಸಿಕ್ಕಿದ್ದಾರೆ.. ಅವರು ಬಿಜೆಪಿ ನಾಯಕರಾಗಿ ಮುಂದುವರೆಯುತ್ತಾರೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಹೋಗೋದು ಚರ್ಚೆ ಆಗಿರಲಿಲ್ಲ ಹಾಗಾಗಿ ಶೆಟ್ಟರ್ ಗೆ ಮುನೇನಕೊಪ್ಪ ಅವರಿಗೆ ಹೋಲಿಕೆ ಮಾಡೋದು ಸರಿಅಲ್ಲ ಎಂದರು.
‘ಗ್ಯಾರಂಟಿ ಹೆಸರಲ್ಲಿ ಮಂಕುಬೂದಿ ಎರಚಿದ್ದಾರೆ: ಸಾಲ ಮನ್ನಾ ವಿಚಾರದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ’
ಗಡುವು ನೀಡಿದರೂ ಗಮನ ಕೊಡದ ಸರ್ಕಾರ: ಕರ್ನಾಟಕ ಬಂದ್ ಅಂತಿಮ ನಿರ್ಧಾರ..!