Political News: ಹುಬ್ಬಳ್ಳಿ: ಬಿಜೆಪಿಯವರಿಗೆ ಸ್ವಲ್ಪ ಬುದ್ದಿ ಕಡಿಮೆ ಅನಿಸುತ್ತದೆ. ಲೇಹರ್ ಸಿಂಗ್ ಅವರೇನು ಆರೋಪ ಮಾಡೋದು. ಯತೀಂದ್ರ ಅವರನ್ನು ಲೋಕಸಭೆಗೆ ನಿಲ್ಲಿಸಲ್ಲ. ಆದ್ರೆ ಜನ ಬಯಸಿದ್ರೆ ಏನ್ ಮಾಡೋದು. ಜನ ಎಲ್ಲ ಬಂದು ನಿಂತುಕೊಳ್ಳಬಹುದು. ಇಲ್ಲ ಅಂದ್ರೆ ಬಿಡಬಹುದು ಎಂದು ಲೇಹರ್ ಸಿಂಗ್ ಆರೋಪದ ಬಗ್ಗೆ ಸಿಎಂ ಸಿದ್ಧರಾಮಯ್ಯ ಟೀಕೆ ಮಾಡಿದರು.
ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸದನದಲ್ಲಿ ಭದ್ರತಾ ಲೋಪ ಆಗಿದೆ. ಇದು ರಾಜಕೀಯನಾ..? ಎಂದು ಸಿಎಂ ಸಿದ್ಧರಾಮಯ್ಯ ಪ್ರಶ್ನಿಸಿದರು.
ಜಾತಿ ಗಣತಿ ವರದಿನೇ ಬಂದಿಲ್ಲ. ಅದರಲ್ಲಿ ಏನಿದೆ ಅನ್ನೋದ ಗೊತ್ತಾ ನಿಮಗೆ. ನನಗೂ ಗೊತ್ತಿಲ್ಲ, ಅವರಿಗೂ ಗೊತ್ತಿಲ್ಲ ಎಂದು ಜಾತಿಗಣತಿ ಬಗ್ಗೆ ಪ್ರತಿಕ್ರಿಯೆ ನೀಡಿದರು.
ವಂಟಮೂರಿ ಘಟನೆಯಲ್ಲಿ ಬಿಜೆಪಿ ರಾಜಕೀಯ ಮಾಡ್ತೀದೆ. ಸರ್ಕಾರ ಎಲ್ಲ ಕಾನೂನು ಕ್ರಮ ಕೈಗೊಂಡಿದೆ.
ಹೆಣ್ಣುಮಗಳ ಮೇಲೆ ದೌರ್ಜನ್ಯ ಆಗಿರೋದು ಖಂಡನೀಯ. ನಮ್ಮ ಗೃಹ ಸಚಿವರು ಕೂಡಲೇ ಅಲ್ಲಿ ಹೋಗಿದ್ರು. ಆರೋಪಿಗಳನ್ನು ಕೂಡಲೇ ಅರೆಸ್ಟ್ ಮಾಡಲಾಗಿದೆ. ನಡ್ಡಾ ಮತ್ತು ಬಿಜೆಪಿಯವರು ರಾಜಕೀಯ ಮಾಡ್ತೀದಾರೆ. ನ್ಯಾಷನಲ್ ಕ್ರೈಮ್ ತಗೆದು ನೋಡಿ ಬಿಜೆಪಿ ಕಾಲದಲ್ಲಿ ಏನಾಗಿದೆ ಅಂತೆ. ಉತ್ತರ ಪ್ರದೇಶದಲ್ಲಿ 9 ವರ್ಷದ ಬಾಲಕಿ ಮೇಲೆ ಬಿಜೆಪಿ ಶಾಸಕ ರೇಪ್ ಮಾಡಿದ್ದಾರೆ. ಇದಕ್ಕೆ ನಡ್ಡಾ ಏನ್ ಹೇಳ್ತಾರೆ ಎಂದು ಪ್ರಶ್ನಿಸಿದರು.
ನಾನು ಇದನ್ನು ಖಂಡಿಸುತ್ತೇನೆ. ನಾಗರಿಕ ಸಮಾಜದಲ್ಲಿ ನಾಗರಿಕರು ತಲೆ ತಗ್ಗಿಸೋ ಕೆಲಸ ಆಗಿದೆ. ಯಾರ ಕಾಲದಲ್ಲಿ ಆದರೂ ಆಗಲಿ ಎಂದ ಅವರು, ಜೋಶಿ ಅವರು ಇದಕ್ಕೇನ ಹೇಳ್ತಾರೆ. ಬಿಜೆಪಿ ಎಂಎಲ್ಎಗೆ ಶಿಕ್ಷೆಯಾಗಿದೆ ಅಂತಾ ಜೋಶಿ ಅವರನ್ನು ಕೇಳಿ ಎಂದ ಸಿದ್ದರಾಮಯ್ಯ ಪ್ರಶ್ನಿಸಿದರು.
ಮೈಸೂರ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ತೀರ್ಮಾನ ಮಾಡಿಲ್ಲ. ಅದು ಅವರವರ ಅಭಿಪ್ರಾಯ ಎಂದ ಸಿದ್ದರಾಮಯ್ಯ ಹೇಳಿದರು.
ಉಳ್ಳಾಗಡ್ಡಿಮಠ ಬೆಂಬಲಿಗರಿಂದ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಭರ್ಜರಿ ಸ್ವಾಗತ: ರಜತ್‌ಗೆ ಟಿಕೆಟ್ ನೀಡುವಂತೆ ಮನವಿ
‘ನಡ್ಡಾ ಅವರಿಗೆ ದಮ್ಮು-ತಾಕತ್ ಇದ್ದರೆ, ಆರೋಪಗಳ ತನಿಖೆಗೆ ಸತ್ಯಶೋಧನಾ ಸಮಿತಿಯೊಂದನ್ನು ಕಳಿಸಲಿ’