Hubballi News: ಹುಬ್ಬಳ್ಳಿ: ಅನೇಕ ಜಾನಪದ ಕಲೆಯನ್ನ ಬೆಳಕಿಗೆ ತಂದು ಸಾಕಷ್ಟು ಭಜನೆ, ಜಗ್ಗಲಗಿ ಅನೇಕ ಮೇಳಗಳನ್ನು ಮಾಡಿದ ವಸಂತರಾವ್ ಅವರು ಮಂಗಳವಾರ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಸುಮಾರು ಸಾವಿರಕ್ಕೂ ಹೆಚ್ಚು ಜಾನಪದ ಕಲೆಗಳಲ್ಲಿ ಭಾಗವಹಿಸಿ ಸಾಕಷ್ಟು ಕಾರ್ಯಕ್ರಮ ನೀಡಿದ್ದಾರೆ.
ಆಕಸ್ಮಿಕ ಚಿತ್ರದ ಹುಟ್ಟಿದರೆ ಕನ್ನಡ ನಾಡು ಹುಟ್ಟಬೇಕು ಹಾಡಿನಲ್ಲೂ ನಟಿಸಿರುವ ವಸಂತರಾವ್ ಅವರ ಕಲೆಗೆ, ಸಿನಿಮಾ ನಟ ಡಾ ರಾಜಕುಮಾರ ಅವರು ಕೂಡ ಮನಸೋತ್ತಿದ್ದರು.. ಇವರ ಅಂತ್ಯಕ್ರಿಯೆ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ವಿಧಿ ವಿಧಾನಗಳ ಜೊತೆಗೆ ಗೆಜ್ಜೆ ಮಜ್ಜಲು ವಿವಿಧ ಕಲಾ ತಂಡಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗೌರವ ನಮನಗಳೊಂದಿಗೆ ಸ್ವಗ್ರಾಮದಲ್ಲಿ ನೆರವೇರಿತು..
ಇವರ ನಿಧನಕ್ಕೆ ನವಲಗುಂದ ಶಾಸಕರಾದ ಎನ್. ಎಚ್ ಕೋನರೆಡ್ಡಿ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಎಲ್ಲ ಕಲಾ ತಂಡಗಳ ಜೊತೆಗೆ ಮೆರವಣಿಗೆ ಮೂಲಕ ಜಾನಪದ ಕಲಾವಿದ ವಸಂತರಾವ್ ಅವರಿಗೆ ಗೌರವ ನಮನಗಳನ್ನು ಸಲ್ಲಿಸಲಾಗಿದೆ. ವಸಂತರಾವ್ ಅವರು ಹಲವಾರು ಪ್ರಶಸ್ತಿ ವಿಜೇತರು ಆಗಿದ್ದು, ಕರ್ನಾಟಕ ರಾಜೋತ್ಸವ ಪ್ರಶಸ್ತಿಗೂ ಕೂಡ ಭಾಜನರಾಗಿದ್ದಾರೆ..
ಮೋದಿ ಪರ ನಿಂತ ಅಹಿಂಸಾ ಚೇತನ್! ಸಂತೋಷ್ ಲಾಡ್‌ಗೆ ಅಜ್ಞಾನಿ ಸಚಿವರೇ ಎಂದು ವ್ಯಂಗ್ಯ
ಅರ್ಚಕರು, ಸಂತರು ಅತ್ಯಾಚಾರಿಗಳು ಎಂದ ಕಾಂಗ್ರೆಸ್ ಶಾಸಕ ಅಫ್ತಾಬುದ್ದೀನ್ ಮುಲ್ಲಾ ಬಂಧನ
ಸ್ತ್ರೀಯರು ಕಲಿತರೆ ಜನಸಂಖ್ಯೆ ನಿಯಂತ್ರಣ: ನಿತೀಶ್ ಕ್ಷಮೆಯಾಚನೆಗೆ ಪಟ್ಟು




