Hubballi News: ಹುಬ್ಬಳ್ಳಿ: ರಾಜ್ಯದ ಮೊದಲ ಮಹಿಳಾ ಪೋಲಿಸ್ ಕಮೀಷನರ್ ಆಗಿ ಹಾಗೂ ಹುಬ್ಬಳ್ಳಿ ಧಾರವಾಡ ನೂತನ ಪೋಲಿಸ್ ಕಮೀಷನರ್ ಆಗಿ ಐಪಿಎಸ್ ಹಿರಿಯ ಅಧಿಕಾರಿ ರೇಣುಕಾ ಸುಕುಮಾರ ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಸಂತೋಷ ಬಾಬು ಅವರಿಂದ ತೆರವಾದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಸ್ಥಾನಕ್ಕೆ ಈ ಹಿಂದೆ ಹುಬ್ಬಳ್ಳಿ ಧಾರವಾಡ ಕಮಿಷನರೇಟ್ ನಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಿದ್ದು, ರೇಣುಕಾ ಸುಕುಮಾರನ್ನು ಸರ್ಕಾರ ನೇಮಕಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ, ಇಂದು ರೇಣುಕಾ ಸುಕುಮಾರ ಅಧಿಕಾರ ವಹಿಸಿಕೊಂಡರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇದೀಗ ಅವಳಿ ನಗರದ ಕಮೀಷನರ್ ಆಗಿ ಬಂದಿರೋದಕ್ಕೆ ಖುಷಿ ವ್ಯಕ್ತಪಡಿಸಿದ ರೇಣುಕಾ ಸುಕುಮಾರ, ಮಹಿಳಾ ಸುರಕ್ಷತೆ ಮೊದಲ ಆದ್ಯತೆ ಮತ್ತು ರೌಡಿಗಳ ಹಾವಳಿ ಮಟ್ಟಹಾಕುವ ಭರವಸೆ ನೀಡಿದ್ದಾರೆ.
ಪೊಲೀಸ್ ಇಲಾಖೆ ದೊಡ್ಡ ಜವಾಬ್ದಾರಿ ಕೊಟ್ಟಿದೆ. ಹಿಂದೆ ಇಲ್ಲಿಯೇ ಡಿಸಿಪಿ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಈಗ ಪೊಲೀಸ್ ಕಮೀಷನರ್ ಆಗಿ ಬಂದಿದ್ದೇನೆ ತುಂಬಾ ಖುಷಿಯಾಗಿದೆ. ಸರ್ಕಾರ ನಿಡಿದ ಜವಾಬ್ದಾರಿಯನ್ನ ಪ್ರಾಮಾಣಿಕವಾಗಿ ನಿಬಾಯಿಸುತ್ತೇನೆಂದು ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಕಮೀಷನರ್ ಆಗಿ ಅಧಿಕಾರ ಸ್ವೀಕಾರ ಮಾಡಿದ ರೇಣುಕಾ ಸುಕುಮಾರ ಹೇಳಿದರು.
ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ, ಮಹಿಳೆಯರ ಸುರಕ್ಷತೆ, ಸೈಬರ್ ಕ್ರೈಮ್ ಇಂತಹ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಕಾನೂನಿನಗೆ ದಕ್ಕೆ ತರೊರಿಗೆ ಕಠಿಣ ಕ್ರಮ ಜರುಗಿಸಲಾಗುತ್ತದೆ. ಸಮಾಜದಲ್ಲಿ ಒಳ್ಳೆಯ ವಾತಾವರಣ ಸೃಷ್ಟಿ ಮಾಡೋಣ ಎಂದರು.
ಗುತ್ತಿಗೆದಾರರು ಬೇರೆ ನಾಯಕರ ಭೇಟಿ ಮಾಡೋದನ್ನು ತಡೆಯಲಾಗದು: ಡಿಸಿಎಂ ಡಿ.ಕೆ. ಶಿವಕುಮಾರ್
‘ಕೆಂಪಣ್ಣನವರ ಕೃಪಾಕಟಾಕ್ಷದಿಂದಲೇ ಅಧಿಕಾರಕ್ಕೆ ಬಂದಿದ್ದೀರಿ. ಈಗ ಅವರನ್ನೇ ಬೆಂಕಿಗೆ ಹಾಕಲು ಹೊರಟಿದ್ದೀರಿ’
ಭಗವಂತನನ್ನು ಪ್ರಶ್ನೆ ಮಾಡಲಾಗದು, ಆದರೆ ಸ್ಪಂದನಾ ಸಾವು ಘೋರ ಅನ್ಯಾಯ: ಡಿಸಿಎಂ ಡಿ.ಕೆ. ಶಿವಕುಮಾರ್