Friday, April 18, 2025

Latest Posts

ಹಾಸನದಲ್ಲಿಯೂ ನಡೀತಿದ್ಯಾ ಓಟರ್ ಲಿಸ್ಟ್ ಡಿಲಿಟ್ ಮಾಡೋ ಕೆಲ್ಸ ..?

- Advertisement -

ಹಾಸನ:ಮಾಜಿ ಸಚಿವ ರೇವಣ್ಣ ಹಾಸನದಲ್ಲಿ ಓಟರ್ ಲೀಸ್ಟ್ ಡಿಲೀಟ್ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರೇವಣ್ಣ, ಕೆಲವು ಮತದಾರರನ್ನು ಪಟ್ಟಿಯಿಂದ ಡಿಲಿಟ್ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ. ಹಾಸನ ಜಿಲ್ಲೆಯಲ್ಲಿ ಅದರಲ್ಲೂ ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಓಟರ್ ಲಿಸ್ಟ್ ಸರಿಯಾದ ರೀತಿ ಆಗ್ತಿಲ್ಲ. ಕೆಲವು ಬೇಕಾದ ಮನೆಗಳನ್ನು ಬಿಎಲ್‌ಓ ತೆಗೆಯುತ್ತಿದ್ದಾರೆ ಎಂದಿದ್ದಾರೆ.

‘ನಾನೇನು ಜ್ಯೋತಿಷಿ ಅಲ್ಲಪ್ಪ,‌ ಪಾಪ ಕುಮಾರಸ್ವಾಮಿ ಅವರು ಹೇಳಿದ್ದಾರೆ..’

ಅಲ್ಲದೇ, ನಮ್ಮ ಕಾರ್ಯಕರ್ತರಿಗೆ ಸೂಚನೆ ಕೊಟ್ಟಿದ್ದೇನೆ. ಹಳೇಯ ಹಾಗೂ ಹೊಸ ಓಟರ್ ಲಿಸ್ಟ್ ತೆಗೆದುಕೊಂಡು ಪರಿಶೀಲನೆ ಮಾಡಿ ಅಂಥ ಹೇಳಿದ್ದೇನೆ. ನಾವೇನಾದ್ರು ಮಾಡಲು ಹೋದರೆ ಬೇರೆ ತರ ಆಗುತ್ತೆ. ಗೌರಿ-ಗಣೇಶ ಹಬ್ಬಕ್ಕೆ ಗಿಫ್ಟ್ ಕೊಡಲು ಹೋದಾಗ ಕೆಲವರು ಓಟರ್ ವೆರಿಫಿಕೇಷನ್ ಕಾರ್ಡ್ ಕಿತ್ತುಕೊಂಡು ಬಂದಿದ್ದಾರೆ ಅಂತ ಅಪಾದನೆ ಇದೆ. ಅಂತಹದ್ದು ಇದ್ದರೆ ಜಿಲಾಧಿಕಾರಿಗಳು ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಕೊಡ್ತಿನಿ. ನನ್ನ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ಇದ್ದರೆ ಅದನ್ನು ವೆರಿಫೈ ಮಾಡಲಿ ಎಂದಿದ್ದಾರೆ.

‘ನಾನು ಸಿದ್ದರಾಮಯ್ಯ ಅವರು ಹೊಡೆದಾಡಲು ಆಗಲ್ಲ’

ಅಲ್ಲದೇ, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಓಟರ್ ಲಿಸ್ಟ್ ಮಾಡುವ ಬಿಎಲ್‌ಓಗಳು ತಪ್ಪು ಮಾಡಿದ್ರೆ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಕೆಲವನ್ನು ದಾಖಲೆಗಳ ಸಮೇತ ಕೊಡುತ್ತೀನಿ. ಈಗಾಗಲೇ ಬೆಂಗಳೂರಿನಲ್ಲಿ ಲೋಪ ಆಗಿರೋದು ಬೆಳಕಿಗೆ ಬಂದಿದೆ ಎಂದು ರೇವಣ್ಣ ಆರೋಪಿಸಿದ್ದಾರೆ.

- Advertisement -

Latest Posts

Don't Miss