ಹಾಸನ: ಹಾಸನ ಕ್ಷೇತ್ರದ ಜೆಡಿಎಸ್ ಟಿಕೇಟ್ ಫೈಟ್ ವಿಚಾರಕ್ಕೆ ಸಂಬಂಧಿಸಿದಂತೆ, ಹಾಸನದಲ್ಲಿ ಮಾಜಿ ಸಚಿವ ರೇವಣ್ಣರನ್ನ ಟಿಕೇಟ್ ಆಕಾಂಕ್ಷಿ ಸ್ವರೂಪ್ ಪ್ರಕಾಶ್ ಭೇಟಿಯಾಗಿದ್ದಾರೆ. ಈಗಾಗಲೇ ಹಾಸನದಲ್ಲಿ ಟಿಕೇಟ್ ಸ್ವರೂಪ್‌ಗಾ ಅಥವಾ ಭವಾನಿಗಾ ಅನ್ನೋ ಚರ್ಚೆ ನಡುವೆಯೇ, ಈ ಭೇಟಿ ತೀವ್ರ ಕುತೂಹಲ ಹುಟ್ಟಿಸಿದೆ.
ಹೀಗೆ ಭೇಟಿಯಾದ ಸ್ವರೂಪ್, ಅರ್ಧಗಂಟೆಗೂ ಹೆಚ್ಚುಕಾಲ ರೇವಣ್ಣ ಜೊತೆ ಗೌಪ್ಯ ಮಾತುಕತೆ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಪಂಚರತ್ನ ಯಾತ್ರೆಗೆ ಯಾವುದೇ ಧಕ್ಕೆ ಬರದಂತೆ ನಡೆದುಕೊಳ್ಳಬೇಕು ಅನ್ನೋ ಬಗ್ಗೆ ಮಾತನಾಡಲಾಗಿದೆ, ಎಂದು ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿ ನಾಳೆಯಿಂದ ಪಂಚರತ್ನ ಯಾತ್ರೆ ಪ್ರವಾಸ ಹಿನ್ನೆಲೆಯಲ್ಲಿ ಗೊಂದಲನಿವಾರಣೆಗೆ ರೇವಣ್ಣ ತಂತ್ರ ಮಾಡಿದ್ದು,ಟಿಕೆಟ್ ಗೊಂದಲ ಬದಿಗಿಟ್ಟು ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರನ್ನ ಒಗ್ಗೂಡಿಸಲು ರೇವಣ್ಣ ಟ್ರೈ ಮಾಡುತ್ತಿದ್ದಾರೆ.
ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ವನಾಶ ಮಾಡಲು ಮೂವರು ಒಟ್ಟಾಗಿ ಕೆಲಸ ಮಾಡುತ್ತೇವೆ.