ಹಾಸನ- ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆಯುತ್ತಿರೊ ಜೆಡಿಎಸ್ ಸಮಾವೇಶ ದಲ್ಲಿ ಮಾಜಿ ಸಚಿವ ರೇವಣ್ಣ ಮಾತನಾಡಿದ್ದು, ನಮ್ಮಲ್ಲೇ ಇದ್ದು ತಿಂದು ತೇಗಿ ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ. ಹುಣಸೆಹಣ್ಣು ಬೀಜ ಆಯುತ್ತಿದ್ದವರನ್ನು ಕರೆತಂದು ನಗರಸಭೆ ಸದಸ್ಯನಾಗಿ ಮಾಡಿದೆ. 30 ದಿನ ಯಾರೂ ಅಪ ಪ್ರಚಾರಕ್ಕೆ ಕಿವಿಕೊಡಬೇಡಿ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ರೇವಣ್ಣ, ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಎ ಮಂಜಣ್ಣ ಅವರು ಕಾಂಗ್ರೆಸ್‌ನಲ್ಲಿ ಟಿಕೇಟ್ ಕೊಡ್ತಿನಿ ಅಂದರೂ ದೇವೇಗೌಡರ ಜೊತೆ ಬಂದಿದಾರೆ. ಅವರಿಗೆ ನಮ್ಮ ತಾಲೂಕಿನ ಹಳ್ಳಿ ಮೈಸೂರು ಹೋಬಳಿಯಲ್ಲಿ ಹತ್ತು ಸಾವಿರ ಲೀಡ್ ನೀಡಿ ಎಂದು ರೇವಣ್ಣ ಮನವಿ ಮಾಡಿದ್ದಾರೆ. ಇದೇ ವೇಳೆ ಏಪ್ರಿಲ್ 17 ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ ಎಂದು ರೇವಣ್ಣ ಆಹ್ವಾನಿಸಿದ್ದಾರೆ.
ಅಲ್ಲದೇ, ನಾನು ೧೭ ನೇ ತಾರೀಖು ಅರ್ಜಿ ಹಾಕಲು ತೀರ್ಮಾನಿಸಿದ್ದೇನೆ. ಈ ಹಿನ್ನಲೆ ಹೊಳೆನರಸೀಪುರ ತಾಲ್ಲೂಕು ಕಾರ್ಯಕರ್ತರ ಸಭೆ ಕರೆದಿದ್ದೆ. ಕುಮಾರಣ್ಣ ಅಧಿಕಾರದಲ್ಲಿದ್ದಾಗ ತಾಲ್ಲೂಕಿಗೆ ಸಾವಿರಾರು ಕೋಟಿ ಅನುಧಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಬಡವರಿಗೆ ಗೃಹ ನಿರ್ಮಾಣ ಕಾರ್ಯ ಮಾಡುತ್ತೇನೆ. ಒಂದು ಮನೆಗೆ ೫ ಲಕ್ಷ ರೂ. ನೀಡುವ ಕೆಲಸ ಮಾಡುತ್ತೇನೆ. ಕಳೆದ ನಾಲ್ಕು ತಿಂಗಳಿಂದ ಕುಮಾರಣ್ಣ ಕೆಲಸ ಮಾಡಿದ್ದಾರೆ. ೧೨೩ ಕ್ಷೇತ್ರ ಗೆಲ್ಲೋದಕ್ಕೆ ಶ್ರಮ ಪಡುತ್ತಿದ್ದಾರೆ ಎಂದು ಹೇಳಿದರು.
ಹಾಸನದಲ್ಲಿ ಜೆಡಿಎಸ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರೇವಣ್ಣ, ದೇವೇಗೌಡರ ಬಗ್ಗೆ ಈ ಆರು ತಿಂಗಳ ಹಿಂದೆ ಈ ಬಗ್ಗೆ ಮಾತನಾಡಿದ್ದೇನೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ. ಅವರು ಏನು ತೀರ್ಮಾನ ತೆಗೆದುಕೊಳ್ತಾರೆ ಅದು ಅವರಿಗೆ ನಮಗೆ ಮಾತ್ರ ಗೊತ್ತು. ದೇವೇಗೌಡರು ಈ ಜಿಲ್ಲೆಯಲ್ಲಿ ೧೯೬೨ ರಿಂದ ರಾಜಕೀಯ ನೋಡಿದ್ದಾರೆ. ನಾವು ಯಾವತ್ತೂ ದೇವೇಗೌಡರ ಮಾತು ಮೀರೊಲ್ಲ ಮೀರೋ ಪ್ರಶ್ನೇನು ಇಲ್ಲ.
ನಮ್ಮ ಅಗ್ರಗಣ್ಯ ನಾಯಕರು ದೇವೇಗೌಡರು ಅವರು ಏನ್ ಹೇಳ್ತಾರೆ ಅದಕ್ಕೆ ಬದ್ಧ. ದೇವೇಗೌಡರ ಹಾಕಿದ ಗೆರೆ ದಾಟೋದು ಇಲ್ಲವೇ ಇಲ್ಲ. ಅವತ್ತು ಹೇಳಿದ್ದೀನಿ ಇವತ್ತೂ ಹೇಳ್ತಿನಿ. ದೇವೇಗೌಡರು, ಇಬ್ರಾಹಿಂ ಸಾಹೇಬ್ರು, ಕುಮಾರಣ್ಣ ಹೇಳಿದ್ದೆ ಅಂತಿಮ ಅಂತಾ ಅನೇಕ ಬಾರಿ ಹೇಳಿದ್ದೇನೆ. ದೇವೇಗೌಡರು ನಮ್ಮ ಸುಪ್ರೀಂ ನಾಯಕ ನಾನು ಅವರ ವಿರುದ್ಧ ಹೋಗುವುದಿಲ್ಲ. ಇವತ್ತು ಐದು ಬಾರಿ ಶಾಸಕನಾಗಿದ್ರೆ ಅದು ದೇವೇಗೌಡರ ಆದೇಶ ಎಂದು ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.
‘ಹೊಳೆನರಸೀಪುರಕ್ಕೆ ಬಂದು ಟೀ ಕುಡಿದು ದೋಸೆ ತಿನ್ನೋದು ಬಿಡಿ. ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿ’
ಬಿಜೆಪಿ ಮುಖಂಡ ಪದ್ಮರಾಜ್ ಕಾಂಗ್ರೆಸ್ ಸೇರ್ಪಡೆ, ಪಕ್ಷದಲ್ಲಿ ಬಿರುಗಾಳಿ ಆರಂಭ ಎಂದ ಡಿಕೆಶಿ..