ಬೇಲೂರು: ಹಾಸನದ ಬೇಲೂರಿನಲ್ಲಿ ಮಾತನಾಡಿದ ಮಾಜಿ ಸಚಿವ ರೇವಣ್ಣ, ಬಿಜೆಪಿಗೆ ರಾಜ್ಯದಲ್ಲಿ ಈ ಬಾರಿ ಅಧಿಕಾರ ಸಿಗುವುದಿಲ್ಲ ಎಂಬುದನ್ನು ಅರಿತು, ಹತಾಶೆಯ ಹಿನ್ನಲೆಯಲ್ಲಿ ಕೇಂದ್ರದ ಸ್ಟಾರ್ ಪ್ರಚಾರಕರು ವಾರಕ್ಕೊಬ್ಬರಂತೆ ಆಗಮಿಸುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಪಟ್ಟಣದ ತೊಚ ಅನಂತ ಸುಬ್ಬರಾಯ್ ಅವರ ಮನೆಯಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ವಾರಕ್ಕೊಬ್ಬರಂತೆ ಪ್ರಧಾನಿ ಮೋದಿ, ಅಮಿತ್ ಷಾ, ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಇನ್ನು ಕೆಲ ಸಂಸದರನ್ನು ಒಂದೊಂದು ಕ್ಷೇತ್ರಕ್ಕೆ ಕಳುಹಿಸುವ ಮೂಲಕ ಪ್ರಚಾರ ಮಾಡುವಂತ ಪರಿಸ್ಥಿತಿ ಬಂದೊದಗಿದೆ ಎಂದು ರೇವಣ್ಣ ಟಾಂಗ್ ನೀಡಿದ್ದಾರೆ.
ಈ ಡಬಲ್ ಇಂಜಿನ್ ಸರಕಾರಕ್ಕೆ ಇಲ್ಲಿ ಒಂದು ಬೋಗಿ ಕೆಟ್ಟು ಹೋಗಿರಬೇಕು ಎಂಬ ಅನುಮಾನ ಬಂದಿದೆ. ಈಗಾಗಲೇ ಹಾಸನಕ್ಕೆ ಚಾಣಕ್ಯನಾದರೂ ಬರಲಿ ಅಥವಾ ಅಮೇರಿಕ ಅಧ್ಯಕ್ಷನಾದರೂ ಬರಲಿ ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಬಳಿ ರಾಜ್ಯದಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಹಾಗೂ ಹೈ ಕಮಾಂಡ್ ಚಾಣಕ್ಯ ಹೆಚ್ ಡಿ ದೇವೇಗೌಡರು ಹಾಗೂ ಕುಮಾರಸ್ವಾಮಿಯವರೇ ನಮಗೆ ಚಾಣಕ್ಯರು ಎಂದು ರೇವಣ್ಣ ಹೇಳಿದ್ದಾರೆ.
ನಮ್ಮ ಕಾರ್ಯಕರ್ತರ ಹಾಗೂ ರೈತ ಮಕ್ಕಳ ಆರ್ಶಿರ್ವಾದ ಇರುವರೆಗೂ ಯಾರ ಭಯವೂ ಇಲ್ಲ. ನಾವು ನಮ್ಮ ಆಡಳಿತದ ಅವಧಿಯಲ್ಲಿ ಏನು ಕೆಲಸ ಮಾಡಿದ್ದೇವೆ ಎಂಬುವುದು ಇಡೀ ರಾಜ್ಯ ಹಾಗೂ ಜಿಲ್ಲೆಯ ಜನತೆಗೆ ಗೊತ್ತಿದೆ. ನಾವು ಅದನ್ನು ಬಿಟ್ಟು ಜನರ ಬಳಿ ಹೋಗುತ್ತಿದ್ದೇವೆ. ಹಾಸನ ಜಿಲ್ಲೆ ಹಾಗೂ ಬೇಲೂರು ತಾಲೂಕು ಅಭಿವೃದ್ಧಿ ಆಗಬೇಕೆಂದರೆ ನಮ್ಮ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ನಾವು ೭ ಕ್ಷೇತ್ರವನ್ನು ಗೆಲ್ಲುವುದು ಶತಸಿದ್ಧ ಎಂದು ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಆಡಳಿತ ನೋಡಿರುವ ಜನತೆಗೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಜನತೆ ವಿಶ್ರಾಂತಿ ಕೊಡುವ ಕಾಲ ಸನ್ನಿಹಿತವಾಗಿದೆ. ರೈತರ ಮಗನಾಗಿರುವ ದೇವೇಗೌಡರಿಗೆ ಬಡವರ ಕಷ್ಟ ಅರಿವಿದೆ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಸುಮಾರು ೨೬ ಸಾವಿರ ಕೋಟಿ ಸಾಲಮನ್ನಾವಾಗಿದ್ದನ್ನು ಯಾರೂ ಮರೆತಿಲ್ಲ. ಪ್ರತೀ ಹಳ್ಳಿಗಾಡಿನ ಅಭಿವೃದ್ಧಿ ಜೊತೆಗೆ ಶಿಕ್ಷಣ ಆಸ್ಪತ್ರೆಗೆ ಹೆಚ್ಚು ಒತ್ತು ಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ರೇವಣ್ಣ ಹೇಳಿದ್ದಾರೆ.
ಒಂದು ಬಾರಿ ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳುವ ರಾಜಕಾರಣಿ ಅದು ಕುಮಾರಣ್ಣ ಮಾತ್ರ.ಇಲ್ಲಿ ಬೇಲೂರಿನಲ್ಲಿ ಇರುವ ಬಿಜೆಪಿ ಅಭ್ಯರ್ಥಿ ಇದು ನಮ್ಮ ಸಾಧನೆ ಎಂದು ಸುಳ್ಳು ಹೇಳಿ ತಿರುಗುವ ಇವರಿಗೆ ಅಲ್ಲಿಯ ಜನರೇ ಬುದ್ದಿ ಕಲಿಸುತ್ತಾರೆ.ರಣಘಟ್ಟ, ನಮ್ಮ ಅವಧಿಯಲ್ಲಿ ಆಗಿದ್ದು ಎನ್ನುವ ಇವರಿಗೆ ನಾಚಿಕೆಯಾಗಬೇಕು.ಅವರ ಅವದಿಯಲ್ಲಿ ಬಿಡುಗಡೆಯಾದ ಹಣವನ್ನು ಅಭಿವೃದ್ಧಿ ಕಾರ್ಯ ಕ್ಕೆ ನೀಡದೇ ಇರುವುದು ಇವರ ಸಾಧನೆ ಎಂದು ರೇವಣ್ಣ ಬಿಜೆಪಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಸುಧಾಕರ್ ಬೆಂಬಲಿಸಿ ಬಿಜೆಪಿ ಸೇರ್ಪಡೆಯಾದ ಜನ, ಚಂದನ್ ಶೆಟ್ಟಿ ಜೊತೆ ಸಿಎಂ ಕ್ಯಾಂಪೇನ್..