ಬೇಲೂರು: ಹಾಸನದ ಬೇಲೂರಿನ ತೊಚ ಅನಂತ ಸುಬ್ಬರಾಯ್ ಅವರ ಮನೆಯಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ರೇವಣ್ಣ, ನಾವು ಈ ಬಾರಿ ಸ್ಪಷ್ಡ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಶತಸಿದ್ಧ ಎಂದು ಭವಿಷ್ಯ ನುಡಿದಿದ್ದಾರೆ .
ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವವರಿಗೆ ಯಾವುದೇ ನೈತಿಕತೆ ಇಲ್ಲಾ. ಯಾವ ಪಕ್ಷದಲ್ಲಿ ಯಾರು ಯಾರು ಹೋಗಿ ಕೈ ಮುಗಿದು ಟಿಕೆಟ್ ಪಡೆದಿದ್ದಾರೆ ಎಂಬುದು ನಮಗೆ ಗೊತ್ತಿದೆ. ಈ ಹಿಂದೆ ಬೇಲೂರಿನ ಕ್ಷೇತ್ರದಲ್ಲಿ ಭವಾನಿ ಅವರು ನನಗೆ ಟಿಕೇಟ್ ಆಕಾಂಕ್ಷಿ ಎಂದು ತಿಳಿದಾಗ ದೇವೇಗೌಡರು ಲಿಂಗೇಶ್ ಅವರಿಗೆ ಬಿ ಫಾರಂ ಕೊಟ್ಟೊದ್ದರು. ಅದರಂತೆ ಕೆಲ ಹಿಂಬಾಲಕರಿಂದ ಸ್ವರೂಪ್ ಗೆ ಟಿಕೆಟ್ ತಪ್ಪಿಸುತ್ತಿದ್ದಾರೆ ಎಂದು ಸುಮ್ಮನೆ ಒಂದು ತಿಂಗಳ ಕಾಲ ಕುಮಾರಣ್ಣ ರೇವಣ್ಣ ,ಹೊಡೆದಾಡುತ್ತಾರೆ ಎಂದು ಅವರ ಆಸೆಗೆ ತಣ್ಣೀರೆರಚಿದೆ ಎಂದು ಹೇಳಿದರು.
ಪ್ರೀತಮ್ ಗೌಡ ಯಾರೊಂದಿಗೆ ಮಾತಾನಾಡುತ್ತಿಲ್ಲ ತಣ್ಣಗಾಗಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ರೇವಣ್ಣ, ಅವರ ಪಕ್ಷ ದೊಡ್ಡದು. ದೊಡ್ಡವರ ಬಗ್ಗೆ ನನಗೆ ಮಾತನಾಡುವ ಶಕ್ತಿ ಇಲ್ಲಾ ಎಂದು ಪರೋಕ್ಷವಾಗಿ ಪ್ರೀತಮ್ ಗೌಡರಿಗೆ ಟೀಕೆ ಮಾಡಿದರು. ಈ ಡಬಲ್ ಇಂಜಿನ್ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಿದ್ದೇವೆ ಎಂದು ಒಂದೇ ಉದಾಹರಣೆ ತೋರಿಸಲಿ ಎಂದು ಸವಾಲು ಹಾಕಿದರು.
ಅಲ್ಲದೇ, ಇಂಧನ ಇಲಾಖೆಯಲ್ಲಿ ಸಾವಿರಾರು ಕೋಟಿ ಅನುದಾನ ತರುವ ಮೂಲಕ, ಇಡೀ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿದ್ದೆವು. ಆದರೆ ಇವತ್ತಿನ ಈ ಸರ್ಕಾರಗಳು ಬರೀ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ಇದರಿಂದ ರೈತರು ವಿದ್ಯಾರ್ಥಿಗಳಿಗೆ ಸಂಕಷ್ಟ ಮಾಡಿದ್ದೇ ಇವರ ಸಾಧನೆ . ನಾನು ಯಾರ ಬಗ್ಗೆಯೂ ಸಹ ಕೀಳಾಗಿ ಮಾತನಾಡುವ ಸಂಸ್ಕೃತಿ ಯಲ್ಲಿ ಬಂದವನಲ್ಲಾ,ಯಾರಿಗೆ ಯಾರು ಮೋಸ ಮಾಡಿ ಹೋಗಿದ್ದಾರೆಂದು ಭಗವಂತನೇ ಅವರಿಗೆ ತಕ್ಕ ಶಾಸ್ತಿ ಮಾಡುತ್ತಾನೆ ಎಂದು ಶಿವಲಿಂಗೇಗೌಡರ ಹೆಸರು ಹೇಳದೆ ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಶಾಸಕ ಕೆ ಎಸ್ ಲಿಂಗೇಶ್, ಜೆಡಿಎಸ್ ಅಧ್ಯಕ್ಷ ತೊಚ ಅನಂತಸುಬ್ಬರಾಯ್, ಮುಖಂಡರಾದ ಎಂ ಎ ನಾಗರಾಜ್, ಬಿ ಡಿ ಚಂದ್ರೇಗೌಡ, ಶ್ರೀನಿಧಿ, ಹಗರೆ ದಿಲೀಪ್, ಅಶ್ವಥ್,ಎಂ ಕೆ ಆರ್ ನಾಗೇಶ್, ಜಗದೀಶ್, ಉಮೇಶ್, ಇತರರು ಹಾಜರಿದ್ದರು.
ಸುಧಾಕರ್ ಬೆಂಬಲಿಸಿ ಬಿಜೆಪಿ ಸೇರ್ಪಡೆಯಾದ ಜನ, ಚಂದನ್ ಶೆಟ್ಟಿ ಜೊತೆ ಸಿಎಂ ಕ್ಯಾಂಪೇನ್..