Hassan News: ಹಾಸನ : ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಕಾನೂನು ಹೋರಾಟ ನಡೆಸಿ ಹೈಕೋರ್ಟ್‌ನಲ್ಲಿ ಸದಸ್ಯತ್ವ ಅಸಿಂಧುಗೊಳಿಸಿದ್ದ ವಕೀಲ ದೇವರಾಜೇಗೌಡ ಮಾತನಾಡಿದ್ದು, ಪ್ರಕರಣದ ಮೇಲ್ಮನವಿ ಸುಪ್ರೀಂಕೋರ್ಟ್‌ನಲ್ಲಿ ನಾಳೆ ಅಂತಿಮ ವಿಚಾರಣೆ ನಡೆಯಲಿದೆ ಎಂದಿದ್ದಾರೆ.
ಅಲ್ಲದೇ, ಹೈಕೋರ್ಟ್ ಸಂಸದ ಪ್ರಜ್ವಲ‌್‌ರನ್ನ ಆರು ವರ್ಷ ಅನರ್ಹಗೊಳಿಸಿ ಆದೇಶ ಮಾಡಿದೆ. ಆದರೆ ಅವರು ಮೇಲ್ಮನವಿ ಸಲ್ಲಿಸಿ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಹಾಸನದಿಂದ ನಾನೇ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಮಾಜಿಪ್ರದಾನಿ ದೇವೇಗೌಡರು ಕೂಡ ಇದಕ್ಕೆ ದ್ವನಿಗೂಡಿಸಿದ್ದಾರೆ. ಇದು ನಮ್ಮ ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತರ ದಾರಿ ತಪ್ಪಿಸುವ ಕೆಲಸ. ಇದರ ವಿರುದ್ಧ ನಾನು ಕೇಂದ್ರದ ನಾಯಕರಿಗೆ ದೂರು ನೀಡಿದ್ದೆ. ಕೇಂದ್ರದ ನಾಯಕರು ನನ್ನ ಕರೆಸಿ ಮಾತನಾಡಿದ್ದಾರೆ.
ಹಾಸನದಿಂದ ಮೈತ್ರಿ ಅಭ್ಯರ್ಥಿ ಘೋಷಣೆ ಮಾಡಿಲ್ಲ, ನೀವು ಕೆಲಸ ಮಾಡಿ ಎಂದು ಹೇಳಿದ್ದಾರೆ. ಹಾಗಾಗಿಯೇ ಜಿಲ್ಲೆಯಲ್ಲಿ ಚುನಾವಣೆ ಕಛೇರಿ ತೆರೆಯಲಾಗಿದೆ. ಯಾವುದೇ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವುದು ಬೇಡ. ನಮ್ಮ ಕೆಲ ನಾಯಕರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಇದೇ ದೇವೇಗೌಡರು ನಮ್ಮನ್ನು ಚಡ್ಡಿಗಳು ಎಂದಿದ್ದರು. ದೇವೇಗೌಡರು ದೇಶ ಬಿಡ್ತೇನೆ ಎಂದಿದ್ದರು ಎಂದು ಆಕ್ರೋಶ ಹೊರಹಾಕಿದ್ದಾರೆ.
ಭವಾನಿ ರೇವಣ್ಣ ನಡು ರಾತ್ರಿಯಲ್ಲಿ ವಾಮಾಚಾರ ಮಾಡ್ತಾರೆ. ಹಂದಿ ಮತ್ತು ಕರಿ ಮೇಕೆ ಕಡಿದು ವಾಮಾಚಾರ ಮಾಡಿದ್ದಾರೆ. ದೇವೇಗೌಡರು ಯಜ್ಞ ಯಾಗಾದಿ ಮಾಡುತ್ತಾರೆ. ಇವರು ದೇವರನ್ನೇ ಕಟ್ಟಿಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ದೇವರಾಜೇಗೌಡ ವ್ಯಂಗ್ಯವಾಡಿದ್ದಾರೆ.
ಹಾಗಾಗಿ ನಾವು ಹೇಗೆ ಇವರೊಟ್ಟಿಗೆ ಮೈತ್ರಿಯಿಂದ ಕೆಲಸ ಮಾಡೋದು. ಕೆಲವು ರಾಜ್ಯ ನಾಯಕರು ಕೂಡ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ದೇವೇಗೌಡರ ಮನೆಗೆ ಹೋಗಿ ಓಲೈಕೆ ಕೆಲಸ ಮಾಡುತ್ತಿದ್ದಾರೆ. ಹಾಸನದಲ್ಲಿ ಬಿಜೆಪಿ ಗೆಲ್ಲುವ ವಾತಾವರಣ ಇದೆ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಅಂತಿಮ ಹಂತಕ್ಕೆ ಬಂದು ಕುತ್ತಿಗೆಗೆ ಬಂದಿದೆ. ರೇವಣ್ಣ ಕೂಡ ಜೈಲಿಗೆ ಹೋಗುವ ಪರಿಸ್ಥಿತಿ ಬಂದೇ ಬರುತ್ತೆ. ಈ ಬಾರಿ ಪಕ್ಷಾತೀತವಾಗಿ ನಾವು ಚುನಾವಣೆ ಮಾಡುತ್ತೇವೆ. ನಮ್ಮ ಕೆಲ ನಾಯಕರು ಜೆಡಿಎಸ್ ಮೇಲಿನ ಸಿಟ್ಟಿಗೆ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲು ಆಲೋಚನೆ ಮಾಡಿದ್ದಾರೆ. ಯಾರೂ ಈ ರೀತಿ ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ದೇವರಾಜೇಗೌಡ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಮುಂದೆ ರಾಷ್ಟ್ರಪತಿ ಆಡಳಿತ ಬರಲಿದೆ. ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಕೇಸ್ ನಡೆಯುತ್ತಿದೆ. ಈ ತೀರ್ಪು ಬಂದ ಕೂಡಲೆ ಕರ್ನಾಟಕ ಸರ್ಕಾರ ವಜಾ ಆಗುತ್ತೆ. ತೀರ್ಪು ಬಂದ ಹತ್ತು ನಿಮಿಷಕ್ಕೆ ರಾಷ್ಟ್ರಪತಿ ಆಡಳಿತ ಜಾರಿ ಆಗುತ್ತೆ . ದೇವೇಗೌಡರ ಕುಟುಂಬದ ಯಾರೇ ಅಭ್ಯರ್ಥಿ ಆದರೂ ಅದರ ವಿರುದ್ಧ ನಾನು ಸ್ಪರ್ದೆ ಮಾಡುತ್ತೇನೆ ಎಂದು ದೇವರಾಜೇಗೌಡ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದಾಗೊಮ್ಮೆ ಬೆಂಕಿ ಹಚ್ಚುವ ಕೆಲಸ ನಡೆದಿದೆ-ಶಾಸಕ ಟೆಂಗಿನಕಾಯಿ ಕಿಡಿ