Friday, April 18, 2025

Latest Posts

ರಾಯಣ್ಣನ ಜನ್ಮದಿನದ ಅಂಗವಾಗಿ ರಾಯಣ್ಣನ ಅಭಿಮಾನಿಗಳಿಂದ ಕ್ರಾಂತಿ ಜ್ಯೋತಿ ಜಾಥಾ

- Advertisement -

www.karnatakatv.net : ಬೆಳಗಾವಿ: ದೇಶದ ಶೂರ ಎಂಟೆದೆ ಬಂಟ ನಾಡಿಗಾಗಿ ತನ್ನ ಪ್ರಾಣ ಮುಡಿಪಾಗಿಟ್ಟ ವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನದ ನಿಮಿತ್ಯವಾಗಿ ನಗರದಲ್ಲಿ ರಾಯಣ್ಣನ ಅಭಿಮಾನಿಗಳಿಂದ ಕ್ರಾಂತಿ ಜ್ಯೋತಿ ಕಾರ್ಯಕ್ರಮ ಜಾಥಾ ಹಮ್ಮಿಕೊಂಡಿದ್ದರು.

ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನಂದಗಡ ಗ್ರಾಮದಲ್ಲಿ ರಾಯಣ್ಣನ ಗಲ್ಲಿಗೇರಿಸಿದ ಸಮಾಧಿ ಇರುವುದರಿಂದ ರಾಯಣ್ಣನ ಅಭಿಮಾನಿಗಳಿಂದ ಬೃಹತ್ ಕ್ರಾಂತಿ ಜ್ಯೋತಿ ಶುರುವಾಗುತ್ತೆ ಹಾಗೇಯೆ ಬೆಳಗಾವಿ ನಗರಕ್ಕೆ ಆಗಮಿಸಿ ಚೆನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜೈ ರಾಯಣ್ಣ,ಜೈ ಚೆನ್ನಮ್ಮಾ,ಎಂದು ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದ್ದಾರೆ.

ರಾಯಣ್ಣನ ಅಭಿಮಾನಿಗಳಿಂದ ಹೆಬ್ಬಾಳ, ನಂದಗಡ, ಪಾಮಲದಿನ್ನಿ, ಹೊನ್ನುರ ಸೇರಿದಂತೆ ಇನ್ನು ಹಲವಾರು ಗ್ರಾಮಗಳಲ್ಲಿ ರಾಯಣ್ಣನ ಅಭಿಮಾನಿಗಳು ಬೆಳಗಾವಿ ನಗರದಾದ್ಯಂತ ಕ್ರಾಂತಿ ಜ್ಯೋತಿ ನಡೆಸಿ ನಂತರ ಮುಕ್ತಿಮಠಕ್ಕೆ ತೆರಳಿ ವಸತಿ ಹೂಡಿ ನಂತರ  ನಾಳೆ ಮುಂಜಾನೆ ತಮ್ಮ ತಮ್ಮ ಗ್ರಾಮಗಳಿಗೆ ತೆರಳಿ ರಾಯಣ್ಣನ ಹುಟ್ಟು ಹಬ್ಬ ಆಚರಣೆಯನ್ನು ಮಾಡಿದ್ದಾರೆ. ಹೀಗೆಯೆ ಪ್ರತಿ ವರ್ಷದಂತೆ ಈ ವರ್ಷವು ಸಹ ಕೋವಿಡ್ ಇರುವುದರಿಂದ ಸರಳವಾಗಿ ಸರಕಾರದ ಆದೇಶ ಅನುಸಾರವಾಗಿ ಸ್ವಾತಂತ್ರ್ಯ ದಿನಾಚರಣೆಯ ದಿನವೇ ಸಂಗೊಳ್ಳಿ ರಾಯಣ್ಣನ ಹುಟ್ಟು ಹಬ್ಬ ಹೀಗಾಗಿ ಎಲ್ಲರೂ ಸಹ ಸಂಭ್ರಮ ಆಚರಣೆ ಮಾಡಿದ್ದಾರೆ.

ಹೀಗೆ ರಾಯಣ್ಣನ ಜ್ಯೋತಿ ಹಲವು ಕಡೆ ಹೋಗಿ ನಂತರ ಸಂಗೊಳ್ಳಿ ರಾಯಣ್ಣನ ಸಮಾಧಿ ಇರುವ ನಂದಗಡಕ್ಕೆ ಆಗಮಿಸಿ ರಾಯಣ್ಣನ ಹುಟ್ಟು ಹಬ್ಬದ ನಿಮಿತ್ಯವಾಗಿ ರಾಯಣ್ಣನ ಅಭಿಮಾನಿಗಳಿಂದ ಸಂಭ್ರಮ ಆಚರಣೆ ನಡೆಸಿದರು.

ನಾಗೇಶ್ ಕರ್ನಾಟಕ ಟಿವಿ ಬೆಳಗಾವಿ

- Advertisement -

Latest Posts

Don't Miss