Sunday, April 20, 2025

Latest Posts

ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿದ ಪ್ರತಿಫಲ: ರ್ಯಾಂಕಿಂಗ್‌ನಲ್ಲಿ 1ರಿಂದ 5ನೇ ಸ್ಥಾನಕ್ಕಿಳಿದ ಭಾರತ

- Advertisement -

National News: ಕಳೆದ ವರ್ಷ ಮಾಲ್ಡೀವ್ಸ್‌ಗೆ ಪ್ರವಾಸಕ್ಕೆ ಹೋಗುವ ಭಾರತೀಯರ ಸಂಖ್ಯೆ ಹೆಚ್ಚಾಗಿತ್ತು. ಆ ಕಾರಣಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ಭಾರತ ನಂಬರ್ 1 ರ್ಯಾಂಕಿಂಗ್‌ನಲ್ಲಿ ಇತ್ತು. ಆದರೆ ಪ್ರಧಾನಿ ಮೋದಿಯನ್ನು ಮಾಲ್ಡೀವ್ಸ್ ಸಂಸದರು, ಇಸ್ರೇಲ್ ಗೊಂಬೆ ಎಂದು ಹಂಗಿಸಿದ ಬಳಿಕ, ಭಾರತೀಯರು ಮೋದಿಗೆ ಸಪೋರ್ಟ್ ಮಾಡಿ, ಬಾಯ್ಕಾಟ್‌ ಮಾಲ್ಡೀವ್ಸ್ ಎಂಬ ಅಭಿಯಾನ ಶುರು ಮಾಡಿದರೋ, ಆಗ ಮಾಲ್ಡೀವ್ಸ್ ಪ್ರವಾಸೋದ್ಯಮ ನೆಲಕ್ಕಪ್ಪಳಿಸಿದೆ. ಈ ಕಾರಣಕ್ಕೆ ಈ ವರ್ಷ, ನಂಬರ್ 1 ಸ್ಥಾನದಲ್ಲಿದ್ದ ಭಾರತ 5ಕ್ಕೆ ಇಳಿದಿದೆ. ಈ ಮೂಲಕ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸ ಕ್ಯಾನ್ಸಲ್ ಮಾಡಿ, ಮಾಲ್ಡೀವ್ಸ್‌ಗೆ ಬುದ್ಧಿ ಕಲಿಸಿದೆ.

ಕಳೆದ ವರ್ಷದ ತನಕ ಹಲವರು ಪದೇ ಪದೇ ಮಾಲ್ಡೀವ್ಸ್ ಪ್ರವಾಸ ಮಾಡುತ್ತಿದ್ದರು. ಸಮಯ ಕಳೆಯಲು ಕೂಲ್ ಆಗಿರುವ ಪ್ಲೇಸ್ ಅಂದ್ರೆ ಅದು ಮಾಲ್ಡೀವ್ಸ್ ಎಂದು ಸಿನಿ ತಾರೆಯಲು, ಉದ್ಯಮಿಗಳು ಕೂಡ, ಮಾಲ್ಡೀವ್ಸ್‌ಗೆ ಪ್ರಯಾಣಿಸುತ್ತಿದ್ದರು. ಕೊರೋನಾ ಬಳಿಕ, ಪ್ರವಾಸೋದ್ಯಮದಲ್ಲಿ ನಷ್ಟ ಕಂಡಿದ್ದ ಮಾಲ್ಡೀವ್ಸ್, ಪ್ರವಾಸಿಗರ ಗಮನ ಸೆಳೆಯಲು, ಭಾರತೀಯ ಸಿನಿತಾರೆಯರಿಗೆ ಫ್ರೀಯಾಗಿ ಮಾಲ್ಡೀವ್ಸ್ ಪ್ರವಾಸ ಮಾಡಿಸಿತ್ತು.

ಆದರೆ ಅದಕ್ಕೂ ಷರತ್ತು ವಿಧಿಸಿತ್ತು. ಸಿನಿ ತಾರೆಯರು ತಮ್ಮ ಮಾಲ್ಡೀವ್ಸ್ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿ, ಅವರ ಅಭಿಮಾನಿಗಳು ಕೂಡ ಮಾಲ್ಡೀವ್ಸ್ ಪ್ರವಾಸಕ್ಕೆ ಬರುವಂತೆ ಮಾಡಬೇಕು ಎಂದು. ಯಶ್-ರಾಧಿಕಾ, ಸಮಂತಾ ಸೇರಿ ಹಲವು ದಕ್ಷಿಣ ಮತ್ತು ಬಾಲಿವುಡ್ ನಟ ನಟಿಯರು ಮಾಲ್ಡೀವ್ಸ್‌ಗೆ ಹೋಗಿ ಫೋಟೋಶೂಟ್ ಮಾಡಿಸಿದ್ದರು. ಈ ಪ್ರಯೋಗದ ಬಳಿಕ, ನಿಜಕ್ಕೂ ಮಾಲ್ಡೀವ್ಸ್ ಪ್ರವಾಸೋದ್ಯಮದಲ್ಲಿ ಸಖತ್ ಲಾಭ ಬಂದಿತ್ತು.

ಆದರೆ ಕಳೆದ ತಿಂಗಳು ಪ್ರಧಾನಿ ಮೋದಿಯ ಲಕ್ಷದ್ವೀಪ ಪ್ರವಾಸದ ಫೋಟೋಗೆ , ಮಾಲ್ಡೀವ್ಸ್ ಸಂಸದರು ಕಾಮೆಂಟ್‌ ಮಾಡಿದ್ದೇ ಮಾಡಿದ್ದು. ಅದೆಷ್ಟೋ ಭಾರತೀಯರು, ಸೆಲೆಬ್ರಿಟಿಗಳು ಮಾಲ್ಡೀವ್ಸ್ ಪ್ರವಾಸ, ಟಿಕೇಟ್, ರೂಮ್ ಬುಕಿಂಗ್ಸ್ ಎಲ್ಲವನ್ನೂ ರದ್ದುಗೊಳಿಸಿದರು. ಅಲ್ಲದೇ, ಸಿನಿಮಾ ತಂಡಗಳು ಕೂಡ, ನಾವು ಇನ್ನುಮುಂದೆ ಮಾಲ್ಡೀವ್ಸ್‌ನಲ್ಲಿ ಶೂಟಿಂಗ್ ಮಾಡುವುದಿಲ್ಲವೆಂದು ಹೇಳಿದೆ. ಈ ಮೂಲಕ ಭಾರತ ಮಾಲ್ಡೀವ್ಸ್‌ಗೆ ಬುದ್ಧಿ ಕಲಿಸಿದ್ದು, ನಂಬರ್ 1 ಸ್ಥಾನದಲ್ಲಿದ್ದ ಭಾರತ 5ಕ್ಕೆ ಇಳಿದಿದೆ.

‘ನಾನು ಕೇಸರಿ ಶಾಲು ಹಾಕಿದ್ದೇ ತಪ್ಪಾ? ದಲಿತರ ಕಾರ್ಯಕ್ರಮದಲ್ಲಿ ನೀಲಿ ಶಾಲು ಹಾಕ್ತೀನಿ. ಫೋಟೋ ಬೇಕಾ?’

ಡ್ರೋನ್ ಪ್ರತಾಪ್ ವಿನ್ನರ್ ಆಗದ ಕಾರಣ, ಚಾಲೆಂಜ್ ಸೋತ ಅಭಿಮಾನಿ: ಅರ್ಧ ಗಡ್ಡ, ಮೀಸೆಗೆ ಕತ್ತರಿ

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯ ತಲೆಗೆ 50 ಬಾರಿ ಸುತ್ತಿಗೆಯಿಂದ ಬಡಿದು ಕೊಲೆ

- Advertisement -

Latest Posts

Don't Miss