Hassan News: ರಕ್ಷಿತ ಅರಣ್ಯ ಪ್ರದೇಶದಲ್ಲಿ ಜೀಪ್ ರೈಡಿಗ್ ಮಾಡಿ ಮೋಜ್ ಮಾಡುತ್ತಿದ್ದವರಿಗೆ ಅರಣ್ಯ ಇಲಾಖೆ ಶಾಕ್ ಕೊಟ್ಟಿದೆ. ಹಾಸನ ಸಕಲೇಶಪುರ ಮೂರು ಕಣ್ಣ್ ಗುಡ್ಡದಲ್ಲಿ, ತಂಡವೊಂದು ಕಾನೂನು ಮೀರಿ ಅನಧಿಕೃತ ಜೀಪ್ ರೇಡಿಂಗ್ ಮಾಡುತ್ತಿದ್ದರು.
ಕಾನೂನು ಗಾಳಿಗೆ ತೂರಿ, ರಿಸರ್ವ್ ಫಾರೆಸ್ಟ್ ನಲ್ಲಿ ರೇಸಿಂಗ್ ಮಾಡುತ್ತಿದ್ದ ಎಲ್ಲಾ 10 ಜೀಪ್ ಗಳನ್ನ ಸಕಲೇಶಪುರ RFO ಶಿಲ್ಪ ವಶಕ್ಕೆ ಪಡೆದಿದ್ದು, ಶ್ರೀಮಂತ ಕುಟುಂಬದವರ ಪಶ್ಚಿಮ ಘಟ್ಟದ ಮೋಜು ಮಸ್ತಿಗೆ ಬ್ರೇಕ್ ಹಾಕಿದ್ದಾರೆ. ಸಕಲೇಶಪುರ ಅಚ್ಚನಹಳ್ಳಿ ಗ್ರಾಮಕ್ಕೆ ಸೇರಿದ ಮೂರುಕಣ್ ಗುಡ್ಡ, ಕಾಡಾನೆ, ಜಿಂಕೆ, ಕಾಡುಕೋಣ ಸೇರಿ ಹಲವು ಸೂಕ್ಷ್ಮ ಜೀವಿಗಳು ವಾಸಿಸುವ ಪ್ರದೇಶವಾಗಿದ್ದು, ಈ ಪ್ರವಾಸಿಗರು ಮನಬಂದಂತೆ ಡರ್ಟ್ ರೇಸ್ ಮಾಡಿದ್ದಾರೆ. ಈ ಕಾರಣಕ್ಕೆ ಇವರ ವಿರುದ್ಧ ಅರಣ್ಯ ಕಾಯಿದೆ ಅಡಿ 20 ಮಂದಿ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ಹೈಫೈ ಕುಟುಂಬಗಳ ಅಕ್ರಮ ಜೀಪ್ ರೇಸ್‌ಗೆ ಸಾರ್ವಜನಿಕರು ಟೀಕೆ ವ್ಯಕ್ತಪಡಿಸಿದ್ದಾರೆ.
Benjamin Netanyahu : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಸ್ಪತ್ರೆಗೆ ದಾಖಲು
H.D.Kumaraswami : ಹೆಚ್.ಡಿ.ಕೆ ದೆಹಲಿಗೆ ದೌಡು..?! NDA ಮೀಟಿಂಗ್ ನಲ್ಲಿ ಭಾಗಿ..?!