Friday, October 18, 2024

Latest Posts

“ರೈಡರ್” ರೈಡಿಂಗ್ ಶುರು, ಹೇಗಿತ್ತು ಕಿಟ್ಟಿ-ಚಿನ್ನು ಪ್ರೇಮಕಥೆ..?

- Advertisement -

www.karnatakatv.net:”ರೈಡರ್” ನಿಖಿಲ್ ಅಭಿನಯದ ಮೂರನೇ ಸಾಕಷ್ಟು ಕುತುಹಲ ಉಂಟು ಮಾಡಿತ್ತು ಎಂದರೆ ತಪ್ಪಾಗಲಾರದು. ಏಕೆಂದರೆ ಈಗಾಗಲೇ ರೈಡರ್ ಸಿನಿಮಾದ ಹಾಡುಗಳು ಸಿಕ್ಕಾಪಟ್ಟೆ ಗುನುಗಿತ್ತು. ಹಾಗೆಯೇ ಟ್ರೇಲರ್‌ಕೂಡ ಮಿಲಿಯನ್ಸ್ ಗಟ್ಟಲೆ ವೀವ್ಸ್ ಪಡೆದು ನಿರೀಕ್ಷೆ ಹುಟ್ಟು ಮಾಡುವುದಕ್ಕೆ ಕಾರಣವಾಗಿತ್ತು. ಸದ್ಯ ರೈಡರ್ ಸಿನಿಮಾ ತೆರೆಕಂಡಿದ್ದು ಚಿತ್ರ ನೋಡಿದಪ್ರೇಕ್ಷಕ ಚಪ್ಪಾಳೆ ವಿಜಿಲ್ ಹೊಡೆಯುವುದರ ಜೊತೆ ಭಾವುಕರಾಗಿದ್ದಾರಗುವಂತೆ ಮಾಡಿದೆ.

ಸಾಮನ್ಯ ಕಥಾಹಂದರ, ನೀಟ್ ಚಿತ್ರಕಥೆ, ಹಳೇ ಸಿನಿಮಾಗಳಿಗು ಈ ಸಿನಿಮಾಗು ಇರುವ ನಿಖಿಲ್ ಅಭಿನಯ ಮಾಸ್ ಕ್ಲಾಸ್ ಮ್ಯಾನರಿಸಮ್, ನೃತ್ಯ, ಪೈಟಿಂಗ್ಸ್. ಚಿತ್ರದ ತಾರ ಬಳಗ ನಟಿ ಕಶ್ಮಿರಾ. ಹಾಸ್ಯಾಕಲಾವಿದರ ದಂಡೇ ಸಿನಿಮಾದಲ್ಲಿದೆ. ರೈಡರ್ ಇದೊಂದು ಪ್ರೀತಿಯ ಕತೆ. ನಾಯಕ-ನಾಯಕಿಯ ಬಾಲ್ಯದ ಎಳೆಯೇ ಕತೆಗೆ ಬೇರಿನಂತಿದೆ. ಹೀಗಾಗಿ ಕಂಟೆoಟ್‌ಗೆ ನ್ಯಾಯ ಸಿಕ್ಕಿ ನೀಟ್ ಫಿನಿಷಿಂಗ್ ಕಾಣುತ್ತೆ. ನಿಖಿಲ್ ಪಾತ್ರದ ಹೆಸರು ಕಿಟ್ಟಿಮತ್ತು ಸೂರ್ಯ. ನಾಯಕಿ ಕಾಶ್ಮೀರಾ ಅವರದ್ದು ಚಿನ್ನು ಮತ್ತು ಸೌಮ್ಯಾ ಪಾತ್ರ. ಹೆಸರು ಎರಡಿದ್ದರೂ ಪಾತ್ರ ಒಂದೇ. ಚಿನ್ನು ಮತ್ತು ಕಿಟ್ಟಿಗೆ ಅನಾಥಾಶ್ರಮದಲ್ಲಿ ಕಳೆದ ಬಾಲ್ಯ, ಬದುಕಿನ ಕನಸು, ಯೌವನದ ಒಂದು ಹಂತದಲ್ಲಿ ಬದುಕಿಗೆ ಟರ್ನಿಂಗ್ ನೀಡುತ್ತೆ. ಆಮೇಲೆ ನಾಯಕ, ನಾಯಕಿಯನ್ನು ಕಂಗೆಡಿಸುವ, ಬೇಯಿಸುವ ಪ್ರೀತಿಯ ರೋಲರ್ ಕೋಸ್ಟರ್. ಮುಂದೆ ಟರ್ನಿಂಗ್ ಮೇಲೆ ಟರ್ನಿಂಗ್ ಇರುವ ಅಪಘಾತ ವಲಯ. ಕೊನೆಗೆ ಈ ಜರ್ನಿ ಹೋಗಿ ನಿಲ್ಲುವುದು ಎಲ್ಲಿಗೆ ಅನ್ನುವುದನ್ನು ತಿಳಿಯಲು ರೈಡಿಂಗ್ ಸಿನಿಮಾವನ್ನು ನೋಡಬೇಕು

ಕಣ್ಣುಗಳಲ್ಲೇ ದಾಟಿಸುವ ಕಾಶ್ಮೀರಾ ಅವರದು ಸಹಜ, ಗಮನ ಸೆಳೆಯುವ ನಟನೆ. ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ ಅವರ ಹಾಸ್ಯ ರುಚಿಗೆ ತಕ್ಕಷ್ಟಿದೆ. ಎಮೋಶನ್ ಗುಪ್ತಗಾಮಿನಿಯಾಗಿ ಹರಿಯುತ್ತದೆ. ನಡುವೆ ರೌಡಿಸಂ ಖಾರವೂ ಸೇರಿಕೊಂಡಿದೆ. ಗರುಡ ರಾಮ್ ಕೆಲವೇ ಸೀನ್‌ಗಳಲ್ಲಿ ಕಾಣಿಸಿಕೊಂಡರೂ ಅವರ ರಗಡ್ ಧ್ವನಿ ಸಿನಿಮಾ ಮುಗಿದ ಮೇಲೂ ನೆನಪಿಸುತ್ತದೆ. ಹಾಡು, ಫೈಟ್‌ಗಳಲ್ಲಿನ ದೃಶ್ಯಗಳು, ಸಿನಿಮಾಟೋಗ್ರಾಫರ್ ಶ್ರೀಶ ಕುಡುವಳ್ಳಿ ಹೊಗಳುವಂತೆ ಮಾಡಿದೆ. ಮನರಂಜನೆ, ಸೆಂಟಿಮೆoಟು, ನಿಷ್ಕಲ್ಮಶ ಪ್ರೀತಿ, ಹಾಸ್ಯ ಎಲ್ಲವೂ ಸೊಗಸಾಗಿ ಬೆರೆತು ಪ್ರೇಕ್ಷಕರನ್ನು ರಂಜಿಸುವoತೆ ಮಾಡಿದೆ. ಒಟ್ಟಾರೆ ರೈಡರ್ ಒಂದು ಸಂಪೂರ್ಣ ಮನೋರಂಜನೆ ಸಿನಿಮಾ. ಕೊಟ್ಟ ಕಾಸಿಗೆ ಮೋಸವಿಲ್ಲ ಎನ್ನುವ ಮಾತನ್ನು ಸಿನಿಮಾ ನೋಡಿದ ಪ್ರೇಕ್ಷಕರೆ ಹೇಳುತ್ತಿದ್ದಾರೆ.

- Advertisement -

Latest Posts

Don't Miss