ಕೇದಾರನಾಥ ಮಂದಿರದಲ್ಲಿ ಗಲಾಟೆ: ನುಗ್ಗಲು ಯತ್ನಿಸಿದ ಭಕ್ತಾದಿಗಳಿಗೆ ಲಾಠಿ ಏಟು ನೀಡಿದ ಪೋಲೀಸರು

Kedaranath: ಇಂದಿನಿಂದ ಚಾರ್‌ಧಾಮ್ ಯಾತ್ರೆ ಶುರುವಾಗಿದ್ದು, ಉತ್ತರಾಖಂಡದಲ್ಲಿರುವ ಕೇದಾರನಾಥನ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ಇಂದೇ ದರ್ಶನ ಮಾಡಬೇಕು ಎಂದು ಲಕ್ಷಾಂತರ ಭಕ್ತರು ಸೇರಿದ್ದು, ನೂಕು ನುಗ್ಗಲು ಉಂಟಾಗಿ, ಪೋಲೀಸರು ಲಾಠಿ ಬೀಸಿದ ಘಟನೆ ನಡೆಯಿತು.

ಸೋಶಿಯಲ್ ಮೀಡಿಯಾದಲ್ಲಿ ಹಲವರು ವೀೀಡಿಯೋ ಮಾಡಿ, ಈಗಲೇ ಯಾರೂ ಕೇದಾರನಾಥನ ದರ್ಶನಕ್ಕೆ ಬರಬೇಡಿ. ಪರಿಸ್ಥಿತಿ ಸರಿಯಾಗಿಲ್ಲ. ಬೆಳಿಗ್ಗೆಯಿಂದ ದರ್ಶನಕ್ಕಾಗಿ ಲೈನ್‌ನಲ್ಲಿ ನಿಂತು ಕಾದರೂ, ಸರಿಯಾಗಿ ದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ. ದೇವರ ಬಾಗಿಲಿನ ತನಕ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

5ರಿಂದ 6 ಲಕ್ಷ ಜನ ಬೆಳಿಗ್ಗೆಯಿಂದ ಸಂಜೆಯವರೆಗೂ ಲೈನ್‌ನಲ್ಲಿ ನಿಂತು ದೇವರ ದರ್ಶನಕ್ಕಾಗಿ ಕಾದು ನಿಂತರೂ, ಇನ್ನೂ ದರ್ಶನ ಸಿಗಲಿಲ್ಲ. ಅಲ್ಲದೇ, ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲಾ. ಹಲವರಿಗೆ ಆರೋಗ್ಯ ಸಮಸ್ಯೆ ಉಂಟಾಗಿ ಅವರನ್ನು ಸ್ಟ್ರೆಚರ್ ಮೇಲೆ ಕರೆದೊಯ್ದಿದ್ದಾರೆ. ಇಲ್ಲಿನ ಆಡಳಿತ ಮಂಡಳಿ ಯಾಾವುದೇ ಸರಿಯಾದ ವ್ಯವಸ್ಥೆ ಮಾಡಲಿಲ್ಲ ಎಂದು ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಜೆ 7 ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚುತ್ತಾರೆ ಎನ್ನಲಾಗಿದ್ದು, ಮತ್ತೆ ಭಕ್ತಾದಿಗಳು ರಾತ್ರಿಯೆಲ್ಲ ಚಳಿಯಿಂದ ಇಲ್ಲೇ ಕಾಲ ಕಳೆಯಬೇಕಾಗಿದೆ. ಅಲ್ಲದೇ ಯಾರಿಗಾದರೂ ಆರೋಗ್ಯ ಸಮಸ್ಯೆಯಾದರೆ, ಅದಕ್ಕೆ ಅವರೇ ಜವಾಬ್ದಾರಿ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆಂದು ಭಕ್ತಾದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

About The Author