ಮುಂಬೈ:ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಹಾಗೂ ಡೆಲ್ಲಿ ಕೋಚ್ ಪ್ರವೀಣ್ ಆಮ್ರೆ ಐಪಿಎಲ್ ನೀತಿ ನಿಯಮ ಉಲ್ಲಂಘಿಸಿದಕ್ಕಾಗಿ ಪಂದ್ಯದ ಶೇ.100ರಷ್ಟು ದಂಡ ವಿಧಿಸಲಾಗಿದೆ.
ಮೈದಾನಕ್ಕೆ ನುಗ್ಗಿದ ಹಿನ್ನೆಲೆಯಲ್ಲಿ ಕೋಚ್ ಪ್ರವೀಣ್ ಆಮ್ರೆಗೆ ಒಂದು ಪಂದ್ಯದಿಂದ ನಿಷೇಧ ಏರಲಾಗಿದೆ.
ನಿನ್ನೆ ರಾಜಸ್ಥಾನ ಹಾಗೂ ಡೆಲ್ಲಿ ನಡುವಿನ ಪಂದ್ಯದ ಕೊನೆಯ ಓವರ್ನಲ್ಲಿ ಹೈಡ್ರಾಮ ನಡೆಯಿತು.
ವೇಗಿ ಒಬೆಡ್ ಮೆಕ್ ಕೊಯೆ ಎಸೆದ ಮೂರನೆ ಎಸೆತವನ್ನು ಸಿಕ್ಸರ್ಗೆ ಅಟ್ಟಿದ್ರು. ಈ ಎಸೆತವನ್ನು ನೋ ಬಾಲ್ ಎಂದು ಪರಿಗಣಿಸುವಂತೆ ಡೆಲ್ಲಿ ತಂಡ ಆಗ್ರಹಿಸಿತು. ಅಂಪೈಯರ್ ನೋ ಬಾಲ್ ಅಲ್ಲ ಎಂದು ವಾದಿಸಿದರು. ಪೆವಲಿಯನ್ ನಲ್ಲಿದ್ದ ರಿಷಭ್ ಪಂತ್ ಬ್ಯಾಟರ್ ಗಳಿಗೆ ವಾಪಸ್ ಬರುವಂತೆ ಸೂಚಿಸಿದರು. ಕೋಚ್ ಪ್ರವೀಣ್ ಆಮ್ರೆ ಮೈದಾನಕ್ಕೆ ನುಗ್ಗಿ ಅಂಪೈಯರ್ ಜೊತೆ ವಾಗ್ವಾದ ಮಾಡಿದರು.
ನಂತರ ಪ್ರವೀಣ್ ಆಮ್ರೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಲೆವೆಲ್ 2ರಲ್ಲಿ ಶಿಕ್ಷೆಯಾಗಿದೆ.