Sunday, September 8, 2024

Latest Posts

RJ rachana ಹೃದಯಾಘಾತದಿಂದ ಸಾವು..!

- Advertisement -

ರೇಡಿಯೋ ಜಾಕಿಯಾಗಿ ಕನ್ನಡಿಗರೆಲ್ಲರನ್ನೂ ರಂಜಿಸಿ ಎಲ್ಲರ ಮನೆ ಮಾತಾಗಿದ್ದ RJ ರಚನಾ ಹೃದಯಾಘಾತದಿಂದ (Death from a heart attack) ಸಾವನ್ನಪ್ಪಿದ್ದಾರೆ. ಜೆಪಿ ನಗರದ ಅಪಾರ್ಟ್ಮೆಂಟ್ (Apartment in JP city) ಒಂದರಲ್ಲಿ ವಾಸವಾಗಿದ್ದ ಅವರಿಗೆ ಹೃದಯಾಘಾತ ಆಗಿದ್ದು, ಅಪೋಲೋ ಆಸ್ಪತ್ರೆಗೆ (Apollo Hospital) ಕರೆದುಕೊಂಡು ಹೋಗಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ರಕ್ಷಿತ್ ಶೆಟ್ಟಿ (Rakshit Shetty)ಯವರ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ (Simple Agi Ondh Love Story) ಚಿತ್ರದಲ್ಲಿ ಸಹೋದರಿಯ ಪಾತ್ರವನ್ನು ಮಾಡಿದ್ದರು. 3 ವರ್ಷಗಳ ಹಿಂದೆ ರೇಡಿಯೋ ಜಾಕಿ ಕೆಲಸವನ್ನು ಬಿಟ್ಟಿದ್ದರು. ಇವರಿಗೆ ಕೇವಲ 35 ವರ್ಷ. ಇವರ ಆಸೆಯಂತೆ ಕುಟುಂಬಸ್ಥರು ಆಕೆಯ ದೇಹದ ಅಂಗಾಂಗವನ್ನು ದಾನ (Donate the organ of the body) ಮಾಡಲು ಮುಂದಾಗಿದ್ದು ಸಾವಿನಲ್ಲಿಯೂ ಸಹ RJ ರಚನಾ ಸಾರ್ಥಕತೆಯನ್ನು ಮೆರೆದಿದ್ದಾರೆ. ಅವರ ಮೃತದೇಹವನ್ನು ಚಾಮರಾಜಪೇಟೆ (chamarajapete) ಯಲ್ಲಿರುವ ಪೋಷಕರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಇವರ ಸಾವಿಗೆ ಕರುನಾಡಿನ ಜನತೆ ಹಾಗೂ ಸಹೋದ್ಯೋಗಿಗಳು, ಸಿನಿಮಾರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

- Advertisement -

Latest Posts

Don't Miss