ಕೇಂದ್ರ ಚುನಾವಣಾ ಆಯೋಗ ಇಂದು ಪಂಚರಾಜ್ಯಗಳ ಚುನಾವಣಾ ದಿನಾಂಕವನ್ನು ಬಿಡುಗಡೆ ಮಾಡಿತು. ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಚುನಾವಣಾ ದಿನಾಂಕದ ಬಗ್ಗೆ ಹಾಗು ನಿಯಮಾವಳಿಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಜನವರಿ ಅಂತ್ಯ ಫೆಬ್ರವರಿ ತಿಂಗಳಲ್ಲಿ ಮೂರನೇ ಅಲೆ ಬರುವ ಸಾಧ್ಯತೆ ಇದೆ.
ಈಗಿರುವಾಗ ಇತ್ತ ಕೇಂದ್ರ ಚುನಾವಣಾ ಆಯೋಗವು ದಿನಾಂಕ ಬಿಡುಗಡೆ ಮಾಡಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಕೊರೊನಾದ ನಡುವೆ ಚುನಾವಣೆಯನ್ನು ನಡೆಸುವುದು ಸವಾಲಿನ ವಿಷಯವಾಗಿದೆ. ಆದರೆ ಚುನಾವಣೆ ನಡೆಸುವುದು ನಮ್ಮ ಕರ್ತವ್ಯವಾಗಿದೆ.ನಾವು ಕೋವಿಡ್ ಇದ್ದೂç ಸಹ ಎಲ್ಲಾ ಮಾರ್ಗಸೂಚಿಯನ್ನು ಅನುಸರಿಸಿ ಚುನಾವಣೆಯನ್ನು ನಡೆಸುತ್ತೇವೆ. ಎಂದಿದ್ದಾರೆ.
ಈ ಕುರಿತು ಹೇಳಿರುವ ಅವರು ಪಂಚರಾಜ್ಯಗಳ ಸರ್ಕಾರದೊಂದಿಗೆ ಮಾತನಾಡಿದ್ದೇವೆ, ಕೊರೊನಾಗೆ ಸಿದ್ಧತೆಯನ್ನು ಸಹ ಮಾಡಿಕೊಂಡು ಚುನಾವಣೆಯನ್ನು ನಡೆಸುತ್ತೇವೆ ಎಂದು ಹೇಳಿದ್ದಾರೆ .