- Advertisement -
ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ವಿಶೇಷ ಪ್ರಕಟಣೆಯನ್ನು ಹೊರಡಿಸಿದೆ, ಚುನಾವಣೆ ರ‍್ಯಾಲಿಗಳು, ರೋಡ್‌ಶೋಗಳನ್ನು ಜನವರಿ 22 ರವರೆಗೆ ವಿಸ್ತರಿಸಲು ಚುನಾವಣಾ ಆಯೋಗ ಶನಿವಾರ ನಿರ್ಧರಿಸಿದೆ. ಈ ಹಿಂದೆ ಜನವರಿ 8 ರಂದು ಉತ್ತರಪ್ರದೇಶ ಉತ್ತರಾಖಂಡ್, ಗೋವಾ, ಪಂಜಾಬ್ ಮತ್ತು ಮಣಿಪುರದ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸುವಾಗ ಕೋವಿಡ್-19 ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜನವರಿ 15 ರವರೆಗೆ ರೋಡ್ ಶೋ ರ‍್ಯಾಲಿಗಳನ್ನು ಬಂದ್ ಮಾಡಿತ್ತು ಈಗ ಮತ್ತೆ ಎಚ್ಚೆತ್ತು ಕೊರೊನಾ ಮಾರ್ಗಸೂಚಿಯನ್ನು ಅನುಸರಿಸಲು ಮುಂದಾಗಿದೆ.
ಈಗಾಗಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಸಂದೇಶವನ್ನು ರವಾನೆ ಮಾಡಿದೆ. ಅದೇ ರೀತಿ ಎಲ್ಲಾ ಪಕ್ಷಗಳಿಗೂ ಸಹ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ಹೇಳಿದೆ, ಸಾಮಾಜಿಕ ಅಂತರ ಕಾರ್ಯಕರ್ತರಿಗೆ ಮುಖಗವಸು, ಸ್ಯಾನಿಟೈಸರ್ ಎಲ್ಲಾ ನಿಯಮವನ್ನು ಚಾಚು ತಪ್ಪದೆ ಪಾಲಿಸಲು ಸಲಹೆ ನೀಡಿದೆ.
- Advertisement -