Sunday, September 8, 2024

Latest Posts

‘ಲವ್ ಮೋಕ್ಟೇಲ್’ ಕೃಷ್ಣನ ‘ಶುಗರ್ ಫ್ಯಾಕ್ಟರಿ’ಗೆ ಚಾಲನೆ.. ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ ರಾಬರ್ಟ್ ಡೈರೆಕ್ಟರ್..

- Advertisement -

ಲವ್ ಮೋಕ್ಟೇಲ್ ಸಿನಿಮಾ ಮೂಲಕ ಗಾಂಧಿನಗರ ಮಾತ್ರವಲ್ಲದೇ ಸೌತ್ ಇಂಡಸ್ಟ್ರೀಯಲ್ಲಿ ಹೊಸ ಸಂಚಲನ ಸೃಷ್ಟಿಸಿರೋ ಡಾರ್ಲಿಂಗ್ ಕೃಷ್ಣ ಈಗ ಕನ್ನಡದ ಬಹುಬೇಡಿಕೆ ನಟ. ಸದ್ಯ ಸಾಲು ಸಾಲು ಸಿನಿಮಾಗಳಿಗೆ ಬ್ಯುಸಿಯಾಗಿರೋ ಕೃಷ್ಣ ನಟನೆಯ ಶುಗರ್ ಫ್ಯಾಕ್ಟರಿಗಿಂದು ಚಾಲನೆ ಸಿಕ್ಕಿದೆ. ಅಂದ್ರೆ ಶುಗರ್ ಫ್ಯಾಕ್ಟರಿ ಸಿನಿಮಾದ ಮುಹೂರ್ತವಿಂದು ಬೆಂಗಳೂರಿನ ನಂದಿನಿ ಲೇಔಟ್ ನ ಪಂಚಮುಖಿ ಗಣಪತಿ ದೇಗುಲದಲ್ಲಿ ನೆರವೇರಿದ್ದು, ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಇನ್ನೂ ಈ ಮುಹೂರ್ತ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಗೋಲ್ಡನ್ ಕ್ವೀನ್ ಅಮೂಲ್ಯ ಹಾಗೂ ಅಮೂಲ್ಯ ಪತಿ ಜಗದೀಶ್ ಚಂದ್ರ ಭಾಗಿಯಾಗಿ ಚಿತ್ರತಂಡಕ್ಕೆ ಶುಭಾಷಯ ತಿಳಿಸಿದ್ದಾರೆ.

ಡಾರ್ಲಿಂಗ್ ಕೃಷ್ಣನಿಗೆ ಜೋಡಿಯಾಗಿ ಪಂಚತಂತ್ರ ಬೆಡಗಿ ಸೋನಲ್ ಮೊಂಥೆರೋ ಹಾಗೂ ಅದ್ವಿತಿ ಶೆಟ್ಟಿ ನಟಿಸ್ತಿದ್ದಾರೆ. ಶುಗರ್ ಫ್ಯಾಕ್ಟರಿ ಸಿನಿಮಾ ಫನ್ ರೋಮ್ಯಾಂಟಿಕ್ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಅಮೂಲ್ಯ ನಿರ್ದೇಶನದ ಮನಸಾಲಜಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ದೀಪಕ್ ಅವರ ಎರಡನೇ ಚಿತ್ರ ಇದಾಗಿದ್ದು, ಈ ಸಿನಿಮಾಕ್ಕೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡ್ತಿದ್ದಾರೆ, ಭರ್ಜರಿ ಡೈರೆಕ್ಟರ್ ಚೇತನ್ ಸಂಭಾಷಣೆ ಬರೆದಿದ್ದು, ಬಾಲಮಣಿ ಪ್ರೊಡಕ್ಷನ್ ಲಾಂಛನದಲ್ಲಿ ಗಿರೀಶ್ ಆರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

- Advertisement -

Latest Posts

Don't Miss