Sandalwood News: ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕರೆ ಸಾಕು, ತಾವು ದೊಡ್ಡ ಸೆಲೆಬ್ರಿಟಿ ಎಂದು ಮೆರೆಯುವವರ ಮಧ್ಯೆ, ಕೆಲವು ನಟರು ಸಿಂಪಲ್ ಆಗಿದ್ದು, ಜನರ ಮನಸ್ಸು ಗೆಲ್ಲುತ್ತಾರೆ. ಅಂಥವರಲ್ಲಿ ರಾಕಿಂಗ್ ಸ್ಟಾಾರ್ ಯಶ್ ಕೂಡ ಒಬ್ಬರು.
ಯಶ್ ಫ್ಯಾಮಿಲಿ ಮ್ಯಾಾನ್, ಪತ್ನಿಗೆ, ಮಕ್ಕಳಿಗೆ ಟೈಮ್ ಕೊಡುತ್ತಾರೆ. ಮನೆಯಲ್ಲಿ ನಡೆಯುವ ಪೂಜೆ, ಹೋಮ ಹವನ, ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ಯಶ್ ಮೊನ್ನೆ ಧಿಡೀರ್ ಅಂತ ಉತ್ತರಕನ್ನಡ ಜಿಲ್ಲೆಯ ಭಟ್ಕಳಕ್ಕೆ ಭೇಟಿ ನೀಡಿ, ಎಲ್ಲರಿಗೂ ಸರ್ಪ್ರೈಸ್ ನೀಡಿದ್ದರು. ಈ ವೇಳೆ ಸಿಂಪಲ್ ಆಗಿ ಬಂದಿದ್ದ ರಾಧಿಕಾ ಮತ್ತು ಯಶ್, ಜನರ ಮಧ್ಯೆ ಬೆರೆತು, ಫೋಟೋ ತೆಗೆಸಿಕೊಂಡು, ಅಭಿಮಾನಿಗಳ ಸಂತಸಕ್ಕೆ ಕಾರಣರಾಗಿದ್ದರು.
ಭಟ್ಕಳ ರಾಧಿಕಾರ ತವರೂರು. ರಾಧಿಕಾ ಭಟ್ಕಳದಲ್ಲಿ ಜಿಎಸ್ಬಿ ಕುಟುಂಬದಲ್ಲಿ ಜನಿಸಿದವರು. ಹಾಗಾಗಿ ಯಶ್ ಮತ್ತು ರಾಧಿಕಾ, ತಮ್ಮ ಕುಟುಂಬಸ್ಥರನ್ನು ಭೇಟಿಯಾಗಲು ಭಟ್ಕಳಕ್ಕೆ ಬಂದಿದ್ದರು. ಈ ವೇಳೆ ಭಟ್ಕಳದ ಪುಟ್ಟ ಅಂಗಡಿಗೆ ಹೋಗಿ, ಸಾಮಾನ್ಯ ವ್ಯಕ್ತಿಯಂತೆ ಯಶ್ ತಮ್ಮ ಮಕ್ಕಳಿಗೆ ಚಾಕೋಲೇಟ್ ಖರೀದಿಸಿದ್ದಾರೆ. ಅಲ್ಲದೇ, ಪತ್ನಿ ರಾಧಿಕಾಗೆ ಐಸ್ಕ್ರೀಮ್ ಕೊಡಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಶ್ ಸರಳತೆಗೆ ಜನ ಸಂತಸ ವ್ಯಕ್ತಪಡಿಸಿದ್ದಾರೆ. ತಾವು ನಡೆದ ಬಂದ ಹಾದಿಯನ್ನು ಯಶ್ ಮರೆತಿಲ್ಲ. ಅದಕ್ಕೆ ಅವರು ರಿಯಲ್ ಲೈಫ್ನಲ್ಲಿ ಹೀರೋ ಆಗಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.
ಯಶ್, ಬಡವರಿಗೆ, ರೈತರಿಗೆ, ಅಭಿಮಾನಿಗಳಿಗೆ ಹಲವು ರೀತಿಯ ಸಹಾಯ ಮಾಡಿದ್ದಾರೆ. ಇದೇ ಸರಳತೆಯ ಸ್ವಭಾವ, ಕಷ್ಟಕ್ಕೆ ಮಿಡಿಯುವ ಸ್ವಭಾವಕ್ಕೆ ಜನ ಯಶ್ರನ್ನು ಇಷ್ಟಪಡುತ್ತಾರೆ. ಟಾಕ್ಸಿಕ್ ಮತ್ತು ಕೆಜಿಎಫ್3 ಸಿನಿಮಾಗಾಗಿ ಯಶ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
‘ಬಜೆಟ್ ಮಂಡಿಸುವಾಗ ವಾಕ್ ಔಟ್ ಮಾಡಿದ ನಿದರ್ಶನ ಇಲ್ಲ. ಆದರೆ ಬಿಜೆಪಿಗರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ’
ಆಸ್ಪತ್ರೆಗೆ ದಾಖಲಾದ ಪ್ರಿಯಾಂಕಾ ವಾದ್ರಾ: ಉತ್ತರಪ್ರದೇಶ ನ್ಯಾಯ ಯಾತ್ರೆಗೆ ರಾಹುಲ್ ಗಾಂಧಿಗೆ ವಿಶ್